ರಾಜ್ಯ

ಮೈಸೂರು ಪೋಲೀಸರಿಂದ ಶೂಟೌಟ್, ಮುಂಬೈ ಮೂಲದ ಮನಿ ಡಬ್ಲಿಂಗ್ ದಂಧೆಕೋರ ಸಾವು

Raghavendra Adiga
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗುರುವಾರ ಬೆಳ್ಳಂಬೆಳಿಗ್ಗೆ ಪೋಲೀಸರು ಕಾರ್ಯಾಚರಣೆ ನಡೆಸಿದ್ದು ಡಬ್ಲಿಂಗ್ ದಂಧೆ ನಡೆಸುತ್ತಿದ್ದ ಓರ್ವ ವ್ಯಕ್ತಿಯ ಮೇಲೆ ಶೂಟೌಟ್ ನದೆಸಿದ್ದಾರೆ.
ನಗರದ ಹೆಬ್ಬಾಳ್ ರಿಂಗ್ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ತಂಗಿದ್ದ ಮುಂಬೈ ಮೂಲದ ಓರ್ವ ದಾಂಧೆಕೋರ ಪೋಲೀಸ್ ಗುಂಡೇಟಿಗೆ ಬಲಿಯಾಗಿದ್ದಾನೆ. ವಿಜಯನಗರ ಪೋಲೀಸರು ಕಾರ್ಯಾಚರಣೆ ನಡೆಸಿದ್ದು ಮುಂಬೈ ಮೂಲದ ಕೆಲ ವ್ಯಕ್ತಿಗಳು ಹಣ ಡಬ್ಲಿಂಗ್ ದಂಧೆಯಲ್ಲಿ ತೊಡಗಿದ್ದಾರೆಂಬ ಖಚಿತ ಮಾಹಿತಿಯ ಆಧಾರದ ಮೇಲೆ ಆರೋಪಿಉಗಳ ಬಂಧನಕ್ಕಾಗಿ ಕಾರ್ಯಾಚರಣೆಗಿಳಿದಿದ್ದರು. ಈ ವೇಳೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರೆ ಉಳಿದವರು ಪರಾರಿಯಾಗಿದ್ದಾರೆ.
ಆರೋಪಿಗಳು ಗನ್ ಸಮೇತ ಪರಾರಿಯಾಗಿದ್ದು ಾವರ ಬಂಧನಕ್ಕೆ ಅಧಿಕಾರಿಗಳು ವ್ಯಾಪಕ ಕಾರ್ಯಾಚರಣೆಗಿಳಿದಿದ್ದಾರೆ. ನಗರದ ಸುತ್ತ ಮುತ್ತಲ ಚೆಕ್ ಪೋಸ್ಟ ಗಳಲ್ಲಿ ಅಲರ್ಟ್ ಆಗಿರುವಂತೆ ಆರಕ್ಷಕ ಇಲಾಖೆ ಸಂದೇಶ ರವಾನಿಸಿದೆ.
ಸಧ್ಯ ಮೃತ ವ್ಯಕ್ತಿಯ ಶವವನ್ನು  ಕೆ.ಆರ್.ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನಾ ಸ್ಥಳಕ್ಕೆ ಮೈಸೂರು ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಡಿಸಿಪಿ ಮುತ್ತುರಾಜ್ ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ.
SCROLL FOR NEXT