ರಾಜ್ಯ

ಮೈಸೂರು ಮನಿ ಡಬ್ಲಿಂಗ್ ಗ್ಯಾಂಗ್ ಮೇಲೆ ಶೂಟೌಟ್ ಪ್ರಕರಣ ಸಿಐಡಿಗೆ ಹಸ್ತಾಂತರ

Raghavendra Adiga
ಮೈಸೂರು: ಮನಿಡಬ್ಲಿಂಗ್ ನಡೆದಿದೆ ಎಂಬ ಖಚಿತ ಮಾಹಿತಿ ಮೇಲೆ ಮೈಸೂರು ಪೋಲೀಸರು ನಡೆಸಿದ್ದ ಶೂಟೌಟ್ ಪ್ರಕರಣವನ್ನು ಇದೀಗ ಸಿಐಡಿಗೆ ಹಸ್ತಾಂತರಿಸಲಾಗಿದೆ.
ಶನಿವಾರ ಬೆಳಿಗ್ಗೆ ಸಿಐಡಿ ತಂಡ ಮೈಸುರಿಗೆ ಆಗಮಿಸಿ ಸಂಪೂರ್ಣ ಪ್ರಕರಣವನ್ನ ತನಿಖೆ ನಡೆಸಲಿದೆ. ಸುಪ್ರೀಂ ಕೋರ್ಟ್ ಗೈಡ್ ಲೈನ್ ಪ್ರಕಾರ ಶೂಟ್ ಔಟ್ ಪ್ರಕರಣವನ್ನ ಸಿಐಡಿ ತನಿಖೆ ನಡೆಸಬೇಕಾಗಿದ್ದು, ಈ ಕಾರಣಕ್ಕಾಗಿ ಸಿಐಡಿ ತನಿಖೆ ಮುಂದುವರೆಯಲಿದೆ.
ಪ್ರಕರಣ್ದಲ್ಲಿ ಇದುವರೆಗೆ ಯಾರನ್ನೂ ವಶಕ್ಕೆ ಪಡೆದಿಲ್ಲ.ಮುಂಬೈ ಮೂಲದ ಮನಿ ಡಬ್ಲಿಂಗ್ ನಡೆಸುವ ಗ್ಯಾಂಗ್ ಸದಸ್ಯಎನ್ನಲಾದ ಸುಕ್ವಿಂದರ್  ಕುಟುಂವ್ಬಸ್ಥರು ಮೈಸೂರಿಗೆ ಆಗಮಿಸಿದ ನಂತ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಒಟ್ಟಾರೆ ಪ್ರಕರಣದ ಹಿಂದೆ ಯಾರಿದ್ದಾರೆನ್ನುವ್ಬುದನ್ನು ಸಿಐಡಿ ತಂಡ ತನಿಖೆ ನಡೆಸಿ ಪತ್ತೆ ಮಾಡಲಿದೆ ಎಂದು ಮೂಲಗಳು ಹೇಲೀದೆ.
ಮೈಸೂರಿನಲ್ಲಿ ಗುರುವಾರ ಬೆಳ್ಳಂಬೆಳಿಗ್ಗೆ ಪೋಲೀಸರು ಕಾರ್ಯಾಚರಣೆ ನಡೆಸಿದ್ದು ಡಬ್ಲಿಂಗ್ ದಂಧೆಕೋರರ ಮೇಲೆ ಶೂಟೌಟ್ ನಡೆಸುವ ವೇಳೆ ಮುಂಬೈ ಮೂಲದ ವ್ಯ್ಕ್ತಿಯೊಬ್ಬ ಗುಂಡೇಟಿಗೆ ಬಲಿಯಾಗಿದ್ದ.
SCROLL FOR NEXT