ದುಬೈನಲ್ಲಿ ಮತ್ತೆ ಸ್ಫೋಟ: ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಬಳಿ ದಟ್ಟ ಕಪ್ಪು ಹೊಗೆ!

ಮಧ್ಯ ದುಬೈನ ಕಟ್ಟಡದ ಹೊರಭಾಗದಲ್ಲಿ ಸಣ್ಣ ಪ್ರಮಾಣದ ದಾಳಿಯಾಗಿದೆ ಆದರೆ ಯಾರೂ ಕೂಡಾ ಗಾಯಗೊಂಡಿಲ್ಲ ಎಂದು ದುಬೈ ಮಾಧ್ಯಮ ಕಚೇರಿ ಹೇಳಿದೆ. ಇಲ್ಲಿಯವರೆಗೂ ಯಾವುದೇ ಗಾಯದ ಕುರಿತು ವರದಿಯಾಗಿಲ್ಲ.
loud explosions were heard near Burj Khalifa
ಬುರ್ಜ್ ಖಲೀಫಾ ಬಳಿ ದಟ್ಟ ಕಪ್ಪು ಹೊಗೆ
Updated on

ದುಬೈ: ಇರಾನ್ ವಿರುದ್ಧ ಇಸ್ರೇಲ್, ಅಮೆರಿಕ ಜಂಟಿಯಾಗಿ ನಡೆಸುತ್ತಿರುವ ಯುದ್ಧ 14ನೇ ದಿನಕ್ಕೆ ಕಾಲಿಟ್ಟಿರುವಂತೆಯೇ ಕೊಲ್ಲಿ ರಾಷ್ಟ್ರಗಳ ಮೇಲೆ ದಾಳಿ ಮುಂದುವರೆದಿದೆ.

ಜಗತ್ತಿನ ಅತ್ಯಂತ ಎತ್ತರದ ಕಟ್ಟಡವಿರುವ ದುಬೈನ ಬುರ್ಜ್ ಖಲೀಜಾ ಬಳಿ ಶುಕ್ರವಾರವೂ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ. ಬಳಿಕ ನಗರದ ಕೇಂದ್ರ ಭಾಗದಲ್ಲಿ ದಟ್ಟವಾದ ಹೊಗೆ ಕಂಡುಬಂದಿದೆ. ಕೇಂದ್ರ ಜಿಲ್ಲೆಯಲ್ಲಿ ದಟ್ಟವಾದ ಕಪ್ಪು ಹೊಗೆ ಹೇಗೆ ಆವರಿಸಿತು ಎಂದು AAP ವರದಿಗಾರರೊಬ್ಬರು ಘಟನೆಯನ್ನು ವರದಿ ಮಾಡಿದ್ದಾರೆ.

ಮಧ್ಯ ದುಬೈನ ಕಟ್ಟಡದ ಹೊರಭಾಗದಲ್ಲಿ ಸಣ್ಣ ಪ್ರಮಾಣದ ದಾಳಿಯಾಗಿದೆ ಆದರೆ ಯಾರೂ ಕೂಡಾ ಗಾಯಗೊಂಡಿಲ್ಲ ಎಂದು ದುಬೈ ಮಾಧ್ಯಮ ಕಚೇರಿ ಹೇಳಿದೆ. ಇಲ್ಲಿಯವರೆಗೂ ಯಾವುದೇ ಗಾಯದ ಕುರಿತು ವರದಿಯಾಗಿಲ್ಲ.

ದುಬೈನ ಪ್ರಮುಖ ಪ್ರದೇಶವಾದ ಶೇಖ್ ಜಾಯೆದ್ ರಸ್ತೆಯ ದಿಕ್ಕಿನಿಂದ ಸೈರನ್‌ಗಳು ಬರುತ್ತಿವೆ ಎಂದು AAP ವರದಿ ಮಾಡಿದೆ. ಘಟನೆಯ ನಂತರ ದುಬೈ ಪೊಲೀಸರು ಸ್ಥಳಕ್ಕೆ ತಲುಪಿದ್ದು, ಪರಿಶೀಲನೆ ನಡೆಸಿದ್ದಾರೆ. ಕಟ್ಟಡಕ್ಕೆ ಗಮನಾರ್ಹ ಹಾನಿಯಾಗಿದೆ.

ದುಬೈ ಇಂಟರ್‌ನ್ಯಾಶನಲ್ ಫೈನಾನ್ಶಿಯಲ್ ಸೆಂಟರ್ (ಡಿಐಎಫ್‌ಸಿ) ನಲ್ಲಿ ಈ ಘಟನೆ ನಡೆದಿದೆ. ಈ ಹಿಂದೆ ಗುರುವಾರವೂ ದುಬೈನ ಡೌನ್ ಟೌನ್ ನಲ್ಲಿ ಸಣ್ಣ ಡ್ರೋನ್ ದಾಳಿ ನಡೆದಿತ್ತು ಎಂದು ದುಬೈ ಸರ್ಕಾರದ ಮಾಧ್ಯಮ ಕಚೇರಿಯು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

loud explosions were heard near Burj Khalifa
ಇಂದು ಏನಾಗಲಿದೆ ಎಂಬುದನ್ನು ನೋಡಿ: ಇರಾನ್ ಗೆ ಟ್ರಂಪ್ ಹೊಸ ಬೆದರಿಕೆ!

ಫೆಬ್ರವರಿ 28 ರಂದು ಮಧ್ಯಪ್ರಾಚ್ಯ ಯುದ್ಧವು ಪ್ರಾರಂಭವಾದಾಗಿನಿಂದ ಗಲ್ಫ್ ರಾಷ್ಟ್ರಗಳಲ್ಲಿ ಇರಾನ್ ದಾಳಿ ನಡೆಸುತ್ತಿದ್ದು, ಇಲ್ಲಿಯವರೆಗೂ ಏಳು ಯುಎಸ್ ಸೇವಾ ಸದಸ್ಯರು ಮತ್ತು 11 ನಾಗರಿಕರು ಸೇರಿದಂತೆ 24 ಜನರು ಈ ಪ್ರದೇಶದಲ್ಲಿ ಹತ್ಯೆಯಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com