ರಾಜ್ಯ

ಧರ್ಮಸ್ಥಳ ನಂತರ ಸಿದ್ದಗಂಗಾ ಮಠದಲ್ಲಿ ನೀರಿನ ಅಭಾವ: ವಿದ್ಯಾರ್ಥಿಗಳ ಪ್ರವೇಶ ನಿರಾಕರಣೆ

Shilpa D
ತುಮಕೂರು: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿದ್ದಗಂಗಾ ಮಠ ವಸತಿ ಶಾಲೆ ವಿದ್ಯಾರ್ಥಿಗಳ ಪ್ರವೇಶಾತಿ ನಿರಾಕರಿಸಿದೆ. ಸದ್ಯಕ್ಕಿರುವ ಮೂಲಭೂತ ಸೌಕರ್ಯದಲ್ಲಿ ಹೆತಚ್ಚಿನ ವಿದ್ಯಾರ್ಥಿಗಳು ದಾಖಲಾದರೇ, ಭಷ್ಯದಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂಬ ಕಾರಣಕ್ಕಾಗಿ ಸಿದ್ಧಗಂಗಾ ಮಠದ ವಸತಿ ಶಾಲೆಗೆ ವಿದ್ಯಾರ್ಥಿಗಳ ದಾಖಲಾತಿಯನ್ನು ಸ್ಥಗಿತಗೊಳಿಸಲಾಗಿದೆ 
ಈಗಾಗಲೇ ನೀರಿನ ಸಮಸ್ಯೆ ಗಂಭೀರವಾಗಿದೆ. ಹೊಸದಾಗಿ ದಾಖಲಾಗಲು 10  ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಪ್ರತಿವರ್ಷ 5 ಸಾವಿರ ಮಕ್ಕಳನ್ನು ದಾಖಲಿಸಿಕೊಳ್ಳಲಾಗುತ್ತದೆ. 
ನೀರಿನ ಸಮಸ್ಯೆ ಕಾರಣಕ್ಕೆ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಸಾಧ್ಯವಾಗುತ್ತಿಲ್ಲ. ಆದ್ದರಿಂದ 15 ದಿನ ಮುಂಚೆಯೇ ಅರ್ಜಿ ವಿತರಣೆ ಸ್ಥಗಿತಗೊಳಿಸಲಾಗಿದೆ' ಎಂದು ಮಠದ ಆಡಳಿತಾಧಿಕಾರಿ ಎಸ್.ವಿಶ್ವನಾಥಯ್ಯ ತಿಳಿಸಿದರು. 
'ನೀರಿನ ಅಭಾವದ ಕಾರಣಕ್ಕೆ ಮಠದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಹೆಚ್ಚು ಮಕ್ಕಳನ್ನು ದಾಖಲಿಸಿಕೊಳ್ಳಲು ಆಗುತ್ತಿಲ್ಲ' ಎಂದು ಅವರು ತಿಳಿಸಿದರು. 
ನಡೆದಾಡುವ ದೇವರು ಎಂದೇ ಪ್ರಸಿದ್ದರಾಗಿದ್ದ ಶ್ರೀಶಿವಕುಮಾರ ಸ್ವಾಮೀಜಿಗಳ ಅಂತ್ಯ ಸಂಸ್ಕಾರಕ್ಕೆ ಸುಮಾ3ರು 18 ಲಕ್ಷ ಭಕ್ತರು ಆಗಮಿಸಿದ್ದರು. ಈ ವೇಳೆ ಮಠದ ಜನಪ್ರಿಯತೆ ಬಗ್ಗೆ ತಿಳಿದ ಜನರು ತಮ್ಮ ಮಕ್ಕಳನ್ನು ಇದೇ ಶಾಲೆಗೆ ಸೇರಿಸಲು ಬಯಸುತ್ತಿದ್ದಾರೆ.
ನಮ್ಮಲ್ಲಿ ಮೂರು ಪ್ರೌಢಶಾಲೆ ಇದ್ದು, ಅದರಲ್ಲಿ 25 ಸೆಕ್ಷನ್ ಗಳಿವೆ. ಪ್ರತಿ ಸೆಕ್ಷನ್ 80 ವಿದ್ಯಾರ್ಥಿಗಳಿದ್ದಾರೆ,. ಹೀಗಾಗಿ ನಾವು ಹೆಚ್ಚಿನ ವಿದ್ಯಾರ್ಥಿಗಳನ್ನ ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ,.
ಸಿದ್ದಗಂಗಾ ಮಠ ನಗರದ ಹೊರವಲಯದಲ್ಲಿದೆ, ಮಠಕ್ಕೆ ಹೇಮಾವತಿ ನದಿ ನೀರು ನಿಯಮಿತವಾಗಿ ಸರಬರಾಜಾಗುತ್ತಿಲ್ಲ,  ನಮ್ಮಲ್ಲಿ 30 ಕೊಳವೆ ಬಾವಿಗಳಿದ್ದು, 15 ಬತ್ತಿಹೋಗಿವೆ, ಹೀಗಾಗಿ ಭವಿಷ್ಯದಲ್ಲಿ ನೀರಿನ ಅಭಾವ ತಲೆದೋರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. 
SCROLL FOR NEXT