ರಾಜ್ಯ

ನೆಹರು, ಗಾಂಧಿಯನ್ನು ಕೀಳಾಗಿ ಕಂಡು ಗೋಡ್ಸೆಯನ್ನು ದೇಶಭಕ್ತನೆನ್ನುವುದು ನಾಚಿಕೆಗೇಡು: ರಮಾನಾಥ ರೈ'

Raghavendra Adiga
ಮಂಗಳೂರು: ಮಹಾತ್ಮಾ ಗಾಂಧಿ, ಜವಹರಲಾಲ್ ನೆಹರು ಅವರಂತಹಾ ಬ್ರಿಟೀಷರಿಂದ ಭಾರತವನ್ನು ಮುಕ್ತಗೊಳಿಸಲು ತಮ್ಮ ಜೀವನವನ್ನು ತ್ಯಾಗ ಮಾಡಿದವರಿಗೆ ಅಗೌರವ ತೋರುವುದು ನಾಚಿಕೆಗೇಡಿನ ವಿಚಾರ ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ. ರಮಾನಾಥ ರೈ ಹೇಳಿದ್ದಾರೆ.
ಮಾಜಿ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ಪುಣ್ಯತಿಥಿಯ ಕಾರ್ಯಕ್ರಮದ ನಂತರ ಮಾದ್ಯಮದವರೊಡನೆ ಮಾತನಾಡಿದ ರೈ "ಭಾರತವು ಸ್ವಾತಂತ್ರ್ಯವನ್ನು ಪಡೆದ ವೇಳೆ ಭಾರತ ಹಿಂದುಳಿದ ರಾಷ್ಟ್ರವಾಗಿತ್ತು. ಆಗ ನೆಹರು ಅವರು ಜಗತ್ತಿನ ಇತರೆ ಮುಂದುವರಿದ ದೇಶಗಳ ಸಾಲಿನಲ್ಲಿ ಭಾರತವನ್ನೂ ನಿಲ್ಲಿಸುವ ಜವಾಬ್ದಾರಿಯನ್ನು ಹೊಂದಿದ್ದರು. ಆರ್ಥಿಕತೆಯ ಬಲಪಡಿಸುವಿಕೆಗೆ ಕಾರಣವಾದ ಅವರ ದೂರದೃಷ್ಟಿ ಮೆಚ್ಚಬೇಕು. ಆದರೆ ಅಂದು ಬ್ರಿಟೀಷರೊಡನೆ ಕೈಜೋಡಿಸಿದ  ಆ ಮೂಲಕ ಸ್ವಾತಂತ್ರ ಹೋರಾಟಗಾರರನ್ನು ವಂಚಿಸಿ ಇಂದು ಅಂತಹಾ ಮೇರು ನಾಯಕರಿಗೆ ಅಗೌರವ ಸೂಚಿಸುತ್ತಿದ್ದಾರೆ.ನೆಹರು ಕುಟುಂಬದ ಮುಂದಿನ ಪೀಳಿಗೆಯವರೂ ಕೂಡ  ಈ ದೇಶಕ್ಕೆ ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ  ಆದರೆ ಈಗ ಅವರನ್ನು ಅವಮಾನಿಸಲಾಗುತ್ತಿದೆ.. ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಬಿಂಬಿಸಲಾಗುತ್ತಿದೆ ಹಾಗೆಯೇ ಮಾಜಿ ಪ್ರಧಾನಿ ರಾಜೀವ್ ಗಾಂಧಿ ನಂ/೧ ಭ್ರಷ್ಟಾಚಾರಿ ಎಂದು ಹೇಳುತ್ತಿದ್ದಾರೆ.ಇದು ಶುದ್ದ ನಾಚಿಕೆಗೇಡಿನ ಸಂಗತಿ" ಎಂದರು.
"ಜವಾಹರಲಾಲ್ ನೆಹರು ಒಮ್ಮೆ ಹೇಳಿದ್ದರು- ಅಲ್ಪಸಂಖ್ಯಾತರು ಕೋಮುವಾದಿಗಳಾದರೆ ದೇಅಕ್ಕೆ ಮಾರಕವಾಗುತ್ತದೆ.ಒಂದೊಮ್ಮೆ ಕೋಮುವಾದಕ್ಕೆ ವಹುಮತ ಲಭಿಸಿದರೆ ದೇಶಕ್ಕೆ ಅದು ಸುರಕ್ಷಿತವಲ್ಲ. ಆದರೆ ಇಂದು ಕೋಮುವಾದ ಬಹುಮತ ಪಡೆದಿದೆ. ಆದರೆ ಇಂತಹಾ ಕೋಮುವಾದಿಗಳಿಂಡ ಜನತೆ ಅಂತರ ಕಾಯ್ದುಕೊಳ್ಳಬೇಕು" ರೈ ಹೇಳೀದ್ದಾರೆ.
SCROLL FOR NEXT