ರಾಜ್ಯ

ಟಿಪ್ಪು ಸುಲ್ತಾನ್ ಪಠ್ಯ ಸೇರ್ಪಡೆ ನ. 7ಕ್ಕೆ ತೀರ್ಮಾನ: ಸಚಿವ ಸುರೇಶ್ ಕುಮಾರ್ 

Sumana Upadhyaya

ಬೆಂಗಳೂರು: ಟಿಪ್ಪು ಸುಲ್ತಾನ್ ಕುರಿತ ಇತಿಹಾಸವನ್ನು ರಾಜ್ಯ ಸರ್ಕಾರದ ಪಠ್ಯಪುಸ್ತಕದಲ್ಲಿ ಸೇರ್ಪಡೆ ಮಾಡಬೇಕೆ ಅಥವಾ ತೆಗೆದುಹಾಕಬೇಕೆ ಎಂಬ ಬಗ್ಗೆ ಇದೇ 7ರಂದು ಕರ್ನಾಟಕ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಸಭೆಯ ನಂತರ ನಿರ್ಧಾರ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.


ಈ ಮಧ್ಯೆ ವಿಜಯಪುರದ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಕಾಂಗ್ರೆಸ್ ನಾಯಕರು ಮತ್ತು ಕಮ್ಯೂನಿಸ್ಟ್ ಬಣಗಳು ಟಿಪ್ಪು ಸುಲ್ತಾನ್ ಕುರಿತ ಇತಿಹಾಸದ ವಿಷಯಗಳನ್ನು ತಿರುಚಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಿವೆ ಎಂದಿದ್ದಾರೆ.


ಟಿಪ್ಪುವನ್ನು ಸಮರ್ಥಿಸುವ ಮಾಜಿ ಸಿಎಂ ಸಿದ್ದರಾಮಯ್ಯನವರು ಇತಿಹಾಸವನ್ನು ಅಗೆಯುವ ಮೊದಲು ತಾವು ಸುಶಿಕ್ಷಿತರಾಗಬೇಕು. ಟಿಪ್ಪು ಸುಲ್ತಾನ್ ಸಾವಿರಾರು ಮಂದಿ ಹಿಂದೂಗಳನ್ನು ಹತ್ಯೆ ಮಾಡಿದ್ದು ಹಿಂದೂ ದೇವಾಲಯಗಳನ್ನು ಕೂಡ ಧ್ವಂಸಗೊಳಿಸಿದ್ದಾನೆ. ಹೀಗಾಗಿ ಇತಿಹಾಸದ ಪಠ್ಯಪುಸ್ತಕದಿಂದ ಟಿಪ್ಪು ಕುರಿತ ಪಾಠಗಳನ್ನು ತೆಗೆದುಹಾಕುವುದು ನ್ಯಾಯಸಮ್ಮತ ಎಂದಿದ್ದಾರೆ.

SCROLL FOR NEXT