ತುಕಾರಾಮ 
ರಾಜ್ಯ

ಬಾಗಲಕೋಟೆ: ಮತಾಂತರಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರಿಂದ ಗೂಸ

ಮತಾಂತರಕ್ಕೆ ಪ್ರಚೋಜಿಸುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರು ಥಳಿಸಿದ ಘಟನೆ ಬಾಗಲಕೋಟೆಯ ನವನಗರದಲ್ಲಿ ನಡೆದಿದೆ.

ಬಾಗಲಕೋಟೆ: ಮತಾಂತರಕ್ಕೆ ಪ್ರಚೋಜಿಸುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರು ಥಳಿಸಿದ ಘಟನೆ ಬಾಗಲಕೋಟೆಯ ನವನಗರದಲ್ಲಿ ನಡೆದಿದೆ. 

ಲಂಬಾಣಿ ಜನಾಂಗದ ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರನ್ನು ತುಕಾರಾಮ ರಾಠೋಡ ಎಂಬಾತ ಮತಾಂತರಕ್ಕೆ ಯತ್ನಿಸುತ್ತಿದ್ದ, ಅಲ್ಲದೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರೆ ಹಣದ ನೀಡುವ ಆಮಿಷ ಸಹ ಒಡ್ಡಿದ್ದ. 35ಕ್ಕೂ ಹೆಚ್ಚು ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರನ್ನು ಒಂದೆಡೆ ಕೋಣೆಯೊಳಗೆ ಸೇರಿಸಿ ಮತಾಂತರಕ್ಕೆ ಪ್ರೇರಣೆ ನೀಡುತ್ತಿದ್ದ.
 
ಮತಾಂತರ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಮುದಾಯದ ಮುಖಂಡರು, ಹಿಂದೂ ಪರ ಸಂಘಟನೆ ಮುಖಂಡರು ಆತನನ್ನು ಮನೆಯಿಂದ ಹೊರಗೆ ಕರೆತಂದು ಥಳಿಸಿದ್ದಾರೆ. 

ಘಟನಾ ಸ್ಥಳಕ್ಕೆ ಬಂದ ನವನಗರದ ಪೊಲೀಸರು ಪರಿಶೀಲನೆ ನಡೆಸಿದರು. ವಿಚಿತ್ರ ಎಂದರೆ ತುಕಾರಾಮ ವೃತ್ತಿಯಲ್ಲಿ ಡಿಆರ್ ಪೊಲೀಸ್ ಪೇದೆ ಎನ್ನುವುದು ತಿಳಿದುಬಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಜಲಸಂಧಿಯನ್ನು ಮುಚ್ಚಿಸಿದ್ದ ಇರಾನ್‌ನ IRGC ನೌಕಾಪಡೆ ಮುಖ್ಯಸ್ಥ ಅಲಿರೆಜಾನನ್ನು ಹೊಡೆದುರುಳಿಸಿದ ಇಸ್ರೇಲ್!

ನಾವು VIPಗಳು, ಕ್ಯೂನಲ್ಲಿ ನಿಲ್ಲಲು ಸಾಧ್ಯವಿಲ್ಲ: ತಮ್ಮ ಕುಟುಂಬಕ್ಕೆ IPL ಟಿಕೆಟ್ ನೀಡುವಂತೆ ಸದನದಲ್ಲಿ ಶಾಸಕರ ಆಗ್ರಹ!

ಕಲಬುರಗಿ: ನಡುರಸ್ತೆಯಲ್ಲೇ ಪತ್ನಿ ಕತ್ತು ಕೊಯ್ದು ಹತ್ಯೆ; ಶವದ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಪತಿಯ ಬಂಧನ

ಬೆಂಗಳೂರು: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಡಬಲ್ ಮರ್ಡರ್; ಅಪ್ರಾಪ್ತನಿಂದ ಇಬ್ಬರ ಹತ್ಯೆ!

'ತನ್ನನ್ನು ಸರ್ವೋಚ್ಚ ನಾಯಕನನ್ನಾಗಿ ಮಾಡಲು ಇರಾನ್ ಬಯಸಿದೆ; ಆದರೆ ನಾನು ತಿರಸ್ಕರಿಸಿದೆ': ಡೊನಾಲ್ಡ್ ಟ್ರಂಪ್

SCROLL FOR NEXT