ರಾಜ್ಯ

ಕುರಿಗಳಿಗೆ ರೋಗ ಕುರುಬ ಕಂಗಾಲು..

Srinivas Rao BV

ಹೊಸಪೇಟೆ: ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಕಾಣಿಸಿಕೊಂಡ ಮಾರಕ ಕಾಯಿಲೆಗೆ ಕುರುಬರ ಕುರಿಗಳು ಬಲಿಯಾಗುತ್ತಿವೆ.

ದಿನ ಬೆಳಗಾಗುತಿದ್ದಂತೆ ಹಿಂಡಿನಲ್ಲಿರುವ ಒಂದೊಂದೆ ಕುರಿಗಳು ಸಾವನ್ನಪ್ಪುತಿದ್ದು, ಕಳೆದ ಒಂದು ವಾರದಲ್ಲಿ ನೂರಕ್ಕು ಹೆಚ್ಚು ಕುರಿಗಳು ಸತ್ತಿರುವುದು ಬೆಳಕಿಗೆ ಬಂದಿದೆ, ಜಿಲ್ಲೆಯ ಹೊಸಪೇಟೆ ತಾಲೂಕಿನ ಗಾದಿಗನೂರು, ಗುಂಡ್ಲೊದ್ದಿಗೇರಿ, ಬೈಲೊದ್ದಿಗೇರಿ, 
ಕಾಕುಬಾಳು, ದೇವಲಾಪುರ, ದೇವಸಮುದ್ರ,ಗ್ರಾಮಗಳ ಸುತ್ತ ಮುತ್ತಲ್ಲಿ ಈ ರೋಗ ಉಲ್ಬಣವಾಗಿದೆ,ಮೂರು ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುವ ನೀಲಿ ನಾಲಿಗೆ ಎಂಬ ಹೆಸರಿನ ಈ ರೋಗ, ಕಾಡು ನೊಣಗಳ ಮೂಲಕ ಹರಡುತಿದೆ ಎಂದು ಪಶು ವೈದ್ಯಾದಿಕಾರಗಳು ಹೇಳುತ್ತಿದ್ದಾರೆ.

ಇತ್ತೀಚೆಗೆ ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಮಳೆ ನೀರು ನಿಂತಿರುವ ಕಾರಣ ಈ ನೊಣಗಳ ಸಂತತಿ ಕೂಡ ಹೆಚ್ಚಾಗಿದೆ ಎಂದು ವೈದ್ಯರು ಹೇಳುತ್ತಾರೆ, ಈ ವೈರಾಣು ರೋಗವನ್ನ ಔಷದಿ ಮೂಲಕ ನಿಯಂತ್ರಣಕ್ಕೆ ತರಬೇಕು, ಆದರೆ ಈ ರೋಗ ಬರದಂತೆ ತಡೆ ಹಿಡಿಯಲು ಕಡ್ಡಾಯವಾಗಿ ಲಸಿಕೆಯನ್ನ ಹಾಕಿಸಲೇ ಬೇಕು, ಆದರೆ ಇಲಾಖೆಯಲ್ಲಿ ಈ ರೋಗಕ್ಕೆ ಬೇಕಾಗುವ ಲಸಿಕೆ ಲಭ್ಯವಿಲ್ಲ ಎನ್ನುತ್ತಾರೆ ಹೊಸಪೇಟೆ ಪಶು ವೈದ್ಯಾದಿಕಾರಿ ಬಸವರಾಜ್ ಬೆಣ್ಣಿಯವರು, ಅದಲ್ಲದೆ ಔಷದಿ ಲಭ್ಯವಿದ್ದರೂ ಹೊಸಪೇಟೆ ತಲುಪಲು ಎರಡರಿಂದ ಮೂರು ದಿನಗಳು ಬೇಕಾಗುತ್ತದೆ, ಔಷದಿ ಬಂದ ನಂತರ ಚಿಕಿತ್ಸೆಯನ್ನ ಪ್ರಾರಂಬಿಸಲಾಗುತ್ತದೆ ಎನ್ನುತ್ತಾರೆ. ವೈದ್ಯರ ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕುರಿಗಾಯಿಗಳು ಸಾವಿನ್ನಪ್ಪಿರುವ ಕುರಿಗಳಿಗೆ ಸೂಕ್ತ ಪರಿಹಾರ ನೀಡುವುದಲ್ಲದೆ ಆದಷ್ಟು ಬೇಗ ರೋಗವನ್ನ ನಿಯಂತ್ರಣಮಾಡಬೇಕೆಂದು ಆಗ್ರಹಿಸಿದ್ದಾರೆ ಇಲ್ಲದಿದ್ದರೆ ಸತ್ತ ಕುರಿಗಳನ್ನ ಆಸ್ಪತ್ರೆಯ ಮುಂದೆ ತಂದು ಹಾಕಿ ಪ್ರತಿಭಟನೆಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
 

SCROLL FOR NEXT