ರಾಜ್ಯ

ಬಿಎಸ್'ವೈ ಆಡಿಯೋ ಲೀಕ್ ಪ್ರಕರಣ: ಆಂತರಿಕ ತನಿಖೆ ನಡೆಸಲು ಮುಂದಾದ ಬಿಜೆಪಿ

Manjula VN

ಬೆಂಗಳೂರು: ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀಡಿದ್ದಾರೆಂದು ಹೇಳಲಾಗುತ್ತಿರುವ ಆಡಿಯೋ ಬಹಿರಂಗಗೊಂಡ ಬಗ್ಗೆ ಆಂತರಿಕ ತನಿಖೆ ನಡೆಸುವುದಾಗಿ ಬಿಜೆಪಿ ಹೇಳಿದೆ. 

ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತುಕೆತ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಪಕ್ಷದ ಸಭೆಯ ಹೇಳಿಕೆಯ ಆಡಿಯೋ ಬಹಿರಂಗ ಮಾಡಿರುವ ಸಂಬಂಧ ಎಲ್ಲವನ್ನೂ ಹೊರಗೆ ತರುತ್ತೇವೆ. ಆಂತರಿಕ ತನಿಖೆ ಕೂಡ ನಡೆಸಲಾಗುವುದು. ಯಡಿಯೂರಪ್ಪ ಅವರ ಆಡಿಯೋ ಮಾಡಿದ್ದು, ಬಿಜೆಪಿಯವರೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆಡಿಯೋ ಮಾಡಿದವರು ಬಿಜೆಪಿ ಕಾರ್ಯಾಕರ್ತರೇ ಎಂಬುದು ಎಲ್ಲಿ ಸ್ಪಷ್ಟವಾಗಿದೆ? ಪಕ್ಷದ ಕಡೆಯಿಂದ ಆಡಿಯೋ ಬಗ್ಗೆ ತನಿಖೆ ನಡೆಸುತ್ತೇವೆಂದು ಹೇಳಿದ್ದಾರೆ. 

ಆಡಿಯೋ ಬಗ್ಗೆ ನಾವು ಚಿಂತೆ ಮಾಡುತ್ತಿಲ್ಲ. ಆಡಿಯೋ ಲಾಭ ಪಡೆದುಕೊಳ್ಳಲು ಸಿದ್ದರಾಮಯ್ಯ ಅವರು ಮುಂದಾಗಿದ್ದು, ಅದರಲ್ಲಿ ಅವರು ಯಶಸ್ವಿಯಾಗುವುದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅನರ್ಹ ಶಾಸಕರ ಕುರಿತು ನೀಡಿರುವ ಹೇಳಿಕೆಯ ಆಡಿಯೋ ವಿರುದ್ದ ಕಾಂಗ್ರೆಸ್ ಕಾನೂನು ಸಮರ ಮಾಡಬಹುದು. ಸಿದ್ದರಾಮಯ್ಯ ಕಾನೂನನ್ನು ಸರಿಯಾಗಿ ತಿಳಿದುಕೊಂಡಿಲ್ಲ. ಸುಳ್ಳು ಪ್ರಚಾರ ಮಾಡಲು ಹೊರಟಿದ್ದಾರೆ. ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ. ಬಿಜೆಪಿ ಸರ್ಕಾರ ಪತವಾದರೆ ಮುಖ್ಯಮಂತ್ರಿಯಾಗುವುದಾಗಿ ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿದ್ದು, ದ್ರಾಕ್ಷಿ ಸಿಗದ ನರಿಯಂತಾಗಿದ್ದಾರೆಂದು ತಿಳಿಸಿದ್ದಾರೆ. 

SCROLL FOR NEXT