ರಾಜ್ಯ

ಸಿದ್ದರಾಮಯ್ಯ ಶಾಸ್ತ್ರ ಹೇಳುತ್ತಾರಾ?:ಸೋಮಣ್ಣ

Srinivas Rao BV

ಬಾಗಲಕೋಟೆ: ಕೈಲಾಗದವರು ಮೈ ಪರಚಿಕೊಂಡರು ಎನ್ನುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ ವಿಡಿಯೋ ಮಾಡಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿರುವ ಕುರಿತು ಮಾತನಾಡಿರುವ ವಸತಿ ಸಚಿವ ವಿ.ಸೋಮಣ್ಣ, ಅವರೇನು ಶಾಸ್ತ್ರ ಹೇಳುತ್ತಾರೆ ಎಂದು ಪ್ರಶ್ನಿಸಿದರು.

ಈಲ್ಲೆಯ ಮುಧೋಳ ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಆಗಿದ್ದವರಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ ಎಂದರು. ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನವನ್ನುಟು ಮಾಡಿರುವ  ಬಿಎಸ್‌ವೈ ಆಡಿಯೋ ಸೋರಿಕೆ ವಿಚಾರವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಂಗಳವಾರ ಟ್ವೀಟ್ ಮಾಡಿ ಯಡಿಯೂರಪ್ಪನವರಿಗೆ ಕೆಟ್ಟ ಹೆಸರು ಬಂದು, ಅವರು ರಾಜೀನಾಮೆ ನೀಡಬೇಕು ಎನ್ನುವ ಕಾರಣಕ್ಕೆ ಯಾರೋ ಆಡಿಯೋ ಬಿಡುಗಡೆ ಮಾಡಿಸಿದ್ದಾರೆ. ಹಿರಿಯ ನಾಯಕರಷ್ಟೆ ಇರುವ  ಕೋರ್ ಕಮೀಟಿ ಸಭೆಯಲ್ಲಿ  ಬಿಎಸ್‌ವೈಗೆ ಅಗದವರು ಇದ್ದಾರೆ ಎಂದು ಆಪಾದಿಸಿದ್ದರು. ಆ ಹಿನ್ನೆಲೆಯಲ್ಲಿ  ಸಚಿವ ಸೋಮಣ್ಣ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದರು. ಯಾವ ಆಡಿಯೋವನ್ನು ಬೇಕಾರದರೂ ಫೇಕ್ ಮಾಡಬಹುದು. ಆಪರೇಷನ್ ಕಮಲ ಬಗ್ಗೆ ಯಡಿಯೂರಪ್ಪ ಆಡಿಯೋ ಪ್ರಕರಣದಲ್ಲಿ ಇದೇ ರೀತಿ ಆಗಿದೆ. ಸಿದ್ದರಾಮಯ್ಯನವರಂತಹ ದೊಡ್ಡವರು ಈ ರೀತಿ ಮಾಡಿದಲ್ಲಿ ಅವರ ಗಾಂಭೀರ್ಯತೆ ಏನಾಗಬೇಕು ಎಂದು ಅವರು ಪ್ರಶ್ನಿಸಿದರು.

ಸಿದ್ದರಾಮಯ್ಯನವರು ಯಡಿಯೂರಪ್ಪನವ ವಿರುದ್ಧ ಏನೇನು ಮಾಡಬೇಕೋ ಅದೆಲ್ಲವನ್ನೂ ಮಾಡಲು ಹೊರಟಿದ್ದಾರೆ. ಆದರೆ ಬಿಎಸ್‌ವೈ ಅವರನ್ನು ಅವರ ಅದೃಷ್ಟ ಕಾಪಾಡುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ರಾಜ್ಯದಲ್ಲಿ ಬರವಿತ್ತು. ಈಗ ಉತ್ತಮ ಮಳೆ ಆಗಿದೆ ಎಂದು ಹೇಳಿದರು.

ಉಪ ಚುನಾವಣೆ ಬಳಿಕ ಸರ್ಕಾರ ಬೀಳುತ್ತದೆ ಎನ್ನುವ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು  ಅದು ತೋಳ, ಕುರಿಮರಿ ಕಥೆ ರ‍್ರೀ, 17 ಜನ ಶಾಸಕರು ರಾಜೀನಾಮೆ ಕೊಟ್ಟಿದ್ದು ಸ್ವಾಭಿಮಾನಕ್ಕಾಗಿ, ಅವರ ಕ್ಷೇತ್ರದ ಅಭಿವೃದ್ಧಿಗೋಸ್ಕರ ರಾಜೀನಾಮೆ ನೀಡಿದ್ದಾರೆ. ಅವರು ರಾಜೀನಾಮೆ ನೀಡಿದ್ದರಿಂದಾಗಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಸರ್ಕಾರ ಇರುತ್ತೋ ಇಲ್ಲವೋ ಎನ್ನುವುದನ್ನು ಕಾಯ್ದು ನೋಡಿ ಎಂದರು.

ವರದಿ: ವಿಠ್ಠಲ ಆರ್. ಬಲಕುಂದಿ

SCROLL FOR NEXT