ರಾಜ್ಯ

ಬೆಂಗಳೂರು: ಥಿಯೇಟರ್ ನಲ್ಲಿ ರಾಷ್ಟ್ರಗೀತೆ ಪ್ರಸಾರ ವೇಳೆ ಎದ್ದು ನಿಲ್ಲದ್ದಕ್ಕೆ ವಿದ್ಯಾರ್ಥಿಗಳ ಮೇಲೆ ಎಫ್ಐಆರ್ ದಾಖಲು 

Sumana Upadhyaya

ಬೆಂಗಳೂರು: ನಗರದ ಥಿಯೇಟರ್ ನಲ್ಲಿ ಚಿತ್ರ ವೀಕ್ಷಿಸುತ್ತಿದ್ದ ವೇಳೆ ರಾಷ್ಟ್ರಗೀತೆ ಪ್ರಸಾರವಾಗುತ್ತಿದ್ದಾಗ ನಿಂತುಕೊಳ್ಳಲಿಲ್ಲ ಎಂದು ವಿದ್ಯಾರ್ಥಿಗಳ ಮೇಲೆ ನಿಂದಿಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿದ್ಯಾರ್ಥಿಗಳ ಮೇಲೆ ಸ್ವಯಂ ಪ್ರೇರಿತ ಕೇಸು ದಾಖಲಿಸಿದ್ದಾರೆ. ಎಫ್ಐಆರ್ ನಲ್ಲಿ ಯಾರ ಹೆಸರನ್ನೂ ದಾಖಲಿಸಿಲ್ಲ.


ಕಳೆದ ತಿಂಗಳು 23ರಂದು ಪಿವಿಆರ್ ಒರಾಯನ್ ಮಾಲ್ ನಲ್ಲಿ ಸಿನಿಮಾ ಆರಂಭದಲ್ಲಿ ರಾಷ್ಟ್ರಗೀತೆ ಪ್ರಸಾರವಾಗುವಾಗ ಏಳು ವಿದ್ಯಾರ್ಥಿಗಳ ಗುಂಪೊಂದು ನಿಂತುಕೊಂಡು ಗೌರವ ಸೂಚಿಸಲಿಲ್ಲ ಎಂದು ಕನ್ನಡದ ನಟ ಮತ್ತು ಆತನ ಸ್ನೇಹಿತೆ ವಿದ್ಯಾರ್ಥಿಗಳನ್ನು ನಿಂದಿಸಿದ್ದರು. ಆ ಸಂದರ್ಭದಲ್ಲಿ ಮಾಡಿದ್ದ ವಿಡಿಯೊ ವೈರಲ್ ಆಗಿ ಸುದ್ದಿಯಾಗಿತ್ತು.


ಚಿತ್ರ ವೀಕ್ಷಣೆಗೆ ಬಂದಿದ್ದವರು ವಿದ್ಯಾರ್ಥಿಗಳನ್ನು ನಿಂದಿಸಿ ಅವಮಾನಿಸಿ ಕೊನೆಗೆ ಅವರು ಸಿನಿಮಾ ವೀಕ್ಷಿಸದೆ ಥಿಯೇಟರ್ ನಿಂದ ನಿರ್ಗಮಿಸಬೇಕಾದ ಪರಿಸ್ಥಿತಿ ಬಂದಿತ್ತು. ಕೆಲವರು ವಿದ್ಯಾರ್ಥಿಗಳನ್ನು ಭಯೋತ್ಪಾದಕರು, ದೇಶ ವಿರೋಧಿಗಳೆಂದು ನಿಂದಿಸಿದ್ದರು. ಅದು ಸುದ್ದಿವಾಹಿನಿಗಳಲ್ಲಿ ಕೂಡ ಪ್ರಸಾರವಾಯಿತು.


ಈ ಕೇಸಿನ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಯೊಬ್ಬರು, ನಾವು ವಾಸ್ತವಾಂಶಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ಆಧರಿಸಿ ನಾವು ವಿದ್ಯಾರ್ಥಿಗಳ ವಿರುದ್ಧ ಕೇಸು ದಾಖಲಿಸಿದ್ದೇವೆ. ವಿದ್ಯಾರ್ಥಿಗಳು ಎದ್ದು ನಿಂತಿದ್ದರೇ, ಇಲ್ಲವೇ ಎಂದು ನಾವು ಪರಿಶೀಲಿಸಬೇಕು. ಎರಡೂ ಗುಂಪಿನ ಮಧ್ಯೆ ನಡೆಯುತ್ತಿದ್ದ ಜಗಳಗಳನ್ನು ನಾವು ವಿಡಿಯೊದಲ್ಲಿ ನೋಡಿದೆವೆ ಹೊರತು ರಾಷ್ಟ್ರಗೀತೆ ಮೊಳಗುವಾಗ ಅಲ್ಲ. ಪಿವಿಆರ್ ಸಿನೆಮಾ ಸಿಬ್ಬಂದಿ ಬಳಿ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸುವಂತೆ ಕೇಳಿದ್ದೇವೆ. ಅದರಲ್ಲಿ ನೋಡದೆ ನಾವು ತೀರ್ಮಾನಕ್ಕೆ ಬರುವಂತಿಲ್ಲ ಎಂದು ಹೇಳಿದ್ದಾರೆ.

SCROLL FOR NEXT