ವೀಣಾ-ಮಾವ 
ರಾಜ್ಯ

ಮಂಡ್ಯ: ಮಗನ ಬದುಕಿಗೆ ಕೊಳ್ಳಿಯಿಟ್ಟ ತಂದೆ, ಮಂಚಕ್ಕೆ ಬರಲಿಲ್ಲವೆಂದು ಸೊಸೆಗೆ ಚೂರಿ ಇರಿದು ಕೊಂದ ಮಾವ!

ಹಾಡಹಗಲೇ ಮಾವನಿಂದಲೇ ಸೊಸೆ ಹತ್ಯೆಯಾಗಿರುವ ಘಟನೆ  ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.

ಮಂಡ್ಯ: ಹಾಡಹಗಲೇ ಮಾವನಿಂದಲೇ ಸೊಸೆ ಹತ್ಯೆಯಾಗಿರುವ ಘಟನೆ  ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.

ವೀಣಾ (24) ಕೊಲೆಯಾದ ಮಹಿಳೆ. ಮಾವ ನಾಗರಾಜ್‌ ಕೊಲೆ ಆರೋಪಿ. ಹಾಸನ ಜಿಲ್ಲೆಯ ಹಳ್ಳಿಯೊಂದರಿಂದ ರಾಗಿಮುದ್ದನಹಳ್ಳಿ ನಾಗರಾಜು ಪುತ್ರ ಅನಿಲ್‌ಗೆ 10 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಗೆ ಸಿಂಚನಾ(5), ದರ್ಶಿನಿ(4) ಇಬ್ಬರು ಪುತ್ರಿಯರು ಇದ್ದರು. ಕೌಟುಂಬಿಕ ಕಾರಣಕ್ಕಾಗಿ ಮನೆಯಲ್ಲಿ ಸದಾ ಜಗಳ ನಡೆಯುತ್ತಿತ್ತು. ಮಾವ ನಾಗರಾಜುನೆ ಸೊಸೆಯ ಮೇಲೆ ಕಣ್ಣುಹಾಕಿದ್ದ ತನ್ನ ಕಾಮತೃಸೆಗೆ ಸಹಕರಿಸದ ಸೊಸೆಯ ಮೇಲೆ ದ್ವೇಷವಿತ್ತು, ಇದೇ ವಿಚಾರಕ್ಕೆ ನ್ಯಾಯ ಪಂಚಾಯತಿ ಕೂಡ ನಡೆದಿತ್ತು. ಪೊಲಿಸರಿಗೂ ದೂರು ನೀಡಲಾಗಿತ್ತು. ಮಾವನ ಕಿರುಕುಳದಿಂದ ಬೇಸತ್ತು ಬೇರೆ ಮನೆ ಮಾಡಿಕೊಂಡಿದ್ದರು.

ಟೈಲರಿಂಗ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ವೀಣಾ ಶನಿವಾರ ಟೈಲರಿಂಗ್ ಅಂಗಡಿಯಲ್ಲಿದ್ದರು, ಅಲ್ಲಿಗೆ ಬಂದ ಮಾವ ನಾಗರಾಜು ವೀಣಾ ಜೊತೆ  ಜಗಳ ಮಾಡಿದ್ದಾನೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಮಾವ ನಾಗರಾಜ್‌ ಸೊಸೆಯನ್ನು ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ. 

ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಗಾಯಾಳು ಮಹಿಳೆಯನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ಸಾಗಿಸುವ ಯತ್ನ ಮಾಡಿದ್ದಾರೆ. ಅದರೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ನಾಗಯ್ಯ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

SCROLL FOR NEXT