ಸಂಗ್ರಹ ಚಿತ್ರ 
ರಾಜ್ಯ

ತನ್ನನ್ನು ಕಂಡು ಹಸ್ತಮೈಥುನ ಮಾಡಿಕೊಂಡ ವಿಕೃತ ವ್ಯಕ್ತಿ ವಿರುದ್ಧ ವೀಡಿಯೋ ಸಾಕ್ಷಿ ನೀಡಿದ ಯುವತಿ

ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿನಿಯೊಬ್ಬಳ ಸಮಯೋಚಿತ ಆಲೋಚನೆಯು ಆಕೆಯನ್ನು ಕಾಡುತ್ತಿದ್ದ  ವಿಕೃತ ಮನಸ್ಥಿತಿಯ ವ್ಯಕ್ತಿಯನ್ನು ಬಂಧಿಸಲು ಪೊಲೀಸರಿಗೆ ಸಹಾಯ ಮಾಡಿತು.  

ಬೆಂಗಳೂರು: ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿನಿಯೊಬ್ಬಳ ಸಮಯೋಚಿತ ಆಲೋಚನೆಯು ಆಕೆಯನ್ನು ಕಾಡುತ್ತಿದ್ದ  ವಿಕೃತ ಮನಸ್ಥಿತಿಯ ವ್ಯಕ್ತಿಯನ್ನು ಬಂಧಿಸಲು ಪೊಲೀಸರಿಗೆ ಸಹಾಯ ಮಾಡಿತು. 

ಸೋಮವಾರ ಮಧ್ಯಾಹ್ನ 2.30 ರ ಸುಮಾರಿಗೆ ಬೆಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ರಿಯಾ (ಹೆಸರು ಬದಲಿಸಲಾಗಿದೆ)ವೈಟ್‌ಫೀಲ್ಡ್‌ನ ಪಟ್ಟಂದೂರು ಅಗ್ರಹಾರ ಕೆರೆಗೆ ಭೇಟಿಕೊಟ್ಟು ಕೆರೆಯ ಸ್ಥಿತಿಗತಿ ಕುರಿತು ಸಂಶೋಧನೆ ನಡೆಸಲು ಮುಂದಾಗಿದ್ದರು.ಆಕೆ ಕೆರೆ ಸಮೀಪದಲ್ಲಿದ್ದಾಗ ಕೆರೆಯ ಸಂರಕ್ಷಿತ ವಲಯದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಕೊಳಗೇರಿಯಲ್ಲಿನ ವ್ಯಕ್ತಿಯೊಬ್ಬ ತನ್ನನ್ನು ಗಮನಿಸುತ್ತಿರುವುದು ಕಂಡುಕೊಂಡಲು.ಮೊದಲಿಗೆ ರಿಯಾ ಆತನ ಬಗೆಗೆ ಅಸಡ್ಡೆ ಹೊಂದಿದಳು. ಆದರೆ ಆ ವ್ಯಕ್ತಿ ನಿರಂತರವಾಗಿ ತನ್ನನ್ನೇ ಗಮನಿಸುತ್ತಿದ್ದು ತನ್ನತ್ತಲೇ ಫ್ಲಾಶ್ ಮಾಡುತ್ತಿರುವುದನ್ನು ಕಂಡ ರಿಯಾ ಭೀತಿಗೊಳಗಾಗಿದ್ದಾಳೆ.“

“ನಾನು ಕೆಲಸದ ನಿಮಿತ್ತ ಕೆರೆಗೆ ಬರಬೇಕಾದ ಯಾರನ್ನಾದರೂ ಕಾಯುತ್ತಿದ್ದೆ. ಈ ವ್ಯಕ್ತಿಯು ನನ್ನನ್ನೇ ದಿಟ್ಟಿಸುತ್ತಿರುವುದನ್ನು ನಾನು ನೋಡಿದೆ, ಆದರೆ ನಾನು ಅದನ್ನು ನಿರ್ಲಕ್ಷಿಸಿದೆ. ಅವನು ಅಲ್ಲಿಂದ ಚಲಿಸಲಿಲ್ಲ ಮತ್ತು ನಾನು ಅವನನ್ನು ಮತ್ತೆ ನೋಡಿದಾಗ ಅವನು ನನ್ನನ್ನು ತೀಕ್ಷ್ಣವಾಗಿ ಗಮನಿಸುತ್ತಿದ್ದ. ಅಲ್ಲದೆ ಅವನು ಮಾಡುತ್ತಿದ್ದುದನ್ನು ಕಂಡು ನನಗೆ ಅಸಹ್ಯವಾಯಿತು. ತಕ್ಷಣ ನನ್ನ ಫೋನ್ ತೆಗೆದುಕೊಂಡು ಅವನು ಈ ಕೃತ್ಯವನ್ನು ಪ್ರದರ್ಶಿಸುವ ವೀಡಿಯೊವನ್ನು ಚಿತ್ರೀಕರಿಸಿದೆ ”ಎಂದು ರಿಯಾ ಹೇಳಿದರು.

ಕೆರೆ ಆವರಣದಿಂದ ದೂರ ಬಂದ ರಿಯಾಳನ್ನು ಆ ವಿಕೃತ ಮನಸ್ಸಿನ ವ್ಯಕ್ತಿ ಮತ್ತೆ ಹಿಂಬಾಲಿಸಿದ್ದ.  ಆಟೋರಿಕ್ಷಾ ಅಥವಾ ಕ್ಯಾಬ್ ಅನ್ನು ಕರೆಯಲು ಅವಳು ಮುಖ್ಯ ರಸ್ತೆಯಲ್ಲಿ ನಿಂತಾಗ ಗ, ಆ ವ್ಯಕ್ತಿ ಹತ್ತಿರದ ಮರದ ಹಿಂದೆ ಅಡಗಿಕೊಂಡು ಮತ್ತೆ ಅಸಹ್ಯವಾಗಿ ವರ್ತಿಸಲು ಪ್ರಾರಂಭಿಸಿದ್ದ. ಅಲ್ಲದೆ ಆತ ಅವಳ ಕಡೆ ನೋಡಿ ಸನ್ನೆಯನ್ನು ಂಆಡಿದ್ದಾನೆ. ಅವಳನ್ನು ತನ್ನೊಂದಿಗೆ ಸೇರಲು ಕೇಳಿಕೊಂಡಿದ್ದಾನೆ.  "ಮರದ ಹಿಂದೆ ಅಡಗಿರುವಾಗ ಅವನು ಮತ್ತೆ ಅಸಹ್ಯವಾಗಿ ವರ್ತಿಸಿದ್ದ. ನಾನು ಎರಡನೇ ವೀಡಿಯೊವನ್ನು ರೆಕಾರ್ಡ್ ಮಾಡಿದ್ದೆ. ನಾನು ಕ್ಯಾಬ್ ಪಡೆದುಕೊಂಡು ನೇರವಾಗಿ ಎಫ್‌ಐಆರ್ ದಾಖಲಿಸಲು ವೈಟ್‌ಫೀಲ್ಡ್  ಪೊಲೀಸ್ ಠಾಣೆಗೆ ಹೋದೆ ”ಎಂದು ರಿಯಾ ಹೇಳಿದರು.

ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆಆರೋಪಿಗಳನ್ನು ಸುಲಭವಾಗಿ ಗುರುತಿಸಲು ಮತ್ತು ಆತನನ್ನು ಬಂಧಿಸಲು ಸಹಾಯ ಮಾಡಿದ ವೀಡಿಯೊಗಳನ್ನು ಅವಳು ಪೊಲೀಸರಿಗೆ ತೋರಿಸಿದಳು. 

ವಿಡಿಯೋ ಆಧರಿಸಿ, ನಾವು ಆ ವ್ಯಕ್ತಿಯನ್ನು ಗುರುತಿಸಿ ಆತನನ್ನು ಬಂಧಿಸಿ ಐಪಿಸಿ ಸೆಕ್ಷನ್ 354 ರ ಅಡಿಯಲ್ಲಿ ಬುಕ್ ಮಾಡಿದ್ದೇವೆ. ನಂತರ ನಾವು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ ಎಂದು ತನಿಖಾಧಿಕಾರಿಯೊಬ್ಬರುವಿವರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ