ರಾಜ್ಯ

ಹುಲಿಯನ್ನು ರಾಷ್ಟ್ರೀಯ ಪ್ರಾಣಿ ಮಾಡಿದ್ದರಿಂದ ದೇಶದಲ್ಲಿ ಭಯೋತ್ಪಾದನೆ ಹೆಚ್ಚಳ: ಪೇಜಾವರ ಶ್ರೀ

Raghavendra Adiga

ಉಡುಪಿ: ಈ ದೇಶದ ರಾಷ್ಟ್ರೀಯ ಪ್ರಾಣಿಯಾಗಿ ಹುಲಿಯನ್ನು ಆರಿಸಿಕೊಂಡಿದ್ದೇ ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಲು ಕಾರಣವಾಗಿದೆ ಎಂದು ಉಡುಪಿಯ  ಶ್ರೀ ಪೆಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.  ನಾವು ಹುಲಿಯನ್ನು ನಮ್ಮ ರಾಷ್ಟ್ರೀಯ ಪ್ರಾಣಿ ಎಂದು ಒಪ್ಪಿಕೊಂಡಿದ್ದೇವೆ.ಹಾಗಾಗಿ  ಭಯೋತ್ಪಾದನೆ ಚಟುವಟಿಕೆಗಳ ನಿದರ್ಶನಗಳು ನಮಗೆ ಎದುರಾಗುತ್ತಿದೆ. ಅಏ ನಾವು ಪ್ರೀತಿ ಮತ್ತು ಮುಗ್ಧತೆಯ ಸಂಕೇತವಾದ ಹಸುವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಮಾಡಿದ್ದರೆ ನಮ್ಮಲ್ಲಿ ಯಾವುದೇ ಭಯೋತ್ಪಾದಕರು ಜನಿಸುತ್ತಿರಲಿಲ್ಲ ಎಂದು ಶ್ರೀಗಳು ಪ್ರತಿಪಾದಿಸಿದರು

ಮಂಗಳವಾರ ಉಡುಪಿಯಲ್ಲಿ ನಡೆದ "ಸಂತ ಸಮಾಗಮ" ಸಂತರ ಸಭೆಯಲ್ಲಿ ಮಾತನಾಡಿದ ಹಿರಿಯ ಸ್ವಾಮೀಜಿ ಭಾರತದಲ್ಲಿ ಗೋಹತ್ಯೆ ನಿಷೇಧವನ್ನು ಜಾರಿಗಾಗಿ  ಕೇಂದ್ರ ಸರ್ಕಾರ ಕಠಿಣ ಕಾನೂನು ತರಬೇಕು ಎಂದು ಹೇಳಿದಹಸುಗಳ ಸಂರಕ್ಷಣೆಯ ಜೊತೆಗೆ ಗಂಗಾ ನದಿಯ ಶುದ್ಧೀಕರಣವು ಜನರ ಮತ್ತೊಂದು ಧ್ಯೇಯವಾಕ್ಯವಾಗಿರಬೇಕು ಎಂದು ಪೆಜಾವರ ಶ್ರೀಗಳು ಹೇಳಿದ್ದಾರೆ.

ಇನ್ನು ಶ್ರೀಗಳು ಏಕರೂಪದ ನಾಗರಿಕ ಸಂಹಿತೆಯ ಪರ ಬ್ಯಾಟ್ ಬೀಸಿದ್ದಾರೆ.  ಈ ರಾಷ್ಟ್ರದ ಪ್ರತಿಯೊಬ್ಬ ನಾಗರಿಕರನ್ನು ಸಮಾನವಾಗಿ ಪರಿಗಣಿಸುವುದು ಬಹಳ ಅಗತ್ಯವಾಗಿದೆ. . ಹಿಂದೂ ಸಂತರು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಮುಖಂಡರೊಂದಿಗೆ ಸಮಾಲೋಚನಾ ಕಾರ್ಯಕ್ರಮ ನಡೆಸಬಹುದು ಇದರಿಂದಾಗಿ ಏಕರೂಪದ ನಾಗರಿಕ ಸಂಹಿತೆಯ ಅನುಷ್ಠಾನಕ್ಕೆ ತರಲು ಒಮ್ಮತ ಮೂಡಿಸಲು ಸಾಧ್ಯವಿದೆ ಎಂದು ಶ್ರೀಗಳು ಹೇಳಿದ್ದಾರೆ.

ಸಂತರ ಸಭೆಯಲ್ಲಿ ಮಾತನಾಡಿದ ಯೋಗಗುರು ಬಾಬಾ ರಾಮದೇವ್ ಮಾಂಸಾಹಾರಿ ಆಹಾರ ಪದ್ಧತಿ ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಿದೆ ಎಂದಿದ್ದಾರೆ.ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಬೇಕು. ಬಾಬರ್, ಔರಂಗಜೇಬ್, ಅಕ್ಬರನ ಕಾಲದಲ್ಲಿ ಭಾರತದಲ್ಲಿ ಗೋಹತ್ಯೆ ನಿಷೇಧ ಜಾರಿಯಲ್ಲಿತ್ತು.  ಇತರ ಮಾಂಸವಲ್ಲದಿದ್ದರೂ ಗೋಮಾಂಸ ತಿನ್ನುವುದನ್ನು ಬಿಟ್ಟುಬಿಡಬೇಕೆಂದು ರಾಮದೇವ್ ಆಗ್ರಹಿಸಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿನ ಶ್ರೀ ಪಲಿಮಾರು ಮಠ  ಶ್ರೀ ವಿದ್ಯಾಧೀಶ ತೀರ್ಥ, 370 ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಂದಿಗೆ ಹೇಗೆ ಸೇರ್ಪಡಿಸಲಾಗಿದೆಯೋ ಮುಂದಿನ ದಿನದಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನೂ ಸಹ ಭಾರತಕ್ಕೆ ಸೇರಿಸಿಕೊಳ್ಲಬೇಕು ಎಂದು ಹೇಳಿದ್ದಾರೆ.

SCROLL FOR NEXT