ರಾಜ್ಯ

ಬೆಂಗಳೂರು: ನಕಲಿ‌ ಸಿಬಿಐ ಅಧಿಕಾರಿ ಬಂಧನ

Shilpa D

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಓರ್ವ ನಕಲಿ ಸಿಬಿಐ ಅಧಿಕಾರಿಯನ್ನು ಸಿಸಿಬಿ ಪೊಲೀಸರು ಬಂಧಿಸಿ, 24 ಲಕ್ಷ ರೂ ಹಣ ವಶಪಡಿಸಿಕೊಂಡಿದ್ದಾರೆ. 34 ವರ್ಷದ ನಕಲಿ ಸಿಬಿಐ ಅಧಿಕಾರಿ ಅಭಿಲಾಶ್ ಬಂಧಿತ ಆರೋಪಿ.

ಆರೋಪಿ ತಾನು ಸಿಬಿಐ ಅಧಿಕಾರಿ ಎಂದು ಹೇಳಿ ಸಾರ್ವಜನಿಕರಿಗೆ ವಂಚಿಸಿ, ಹಣ ಗಳಿಸುತ್ತಿದ್ದ ಎಂದು ತಿಳಿದು ಬಂದಿದ್ದು, ಸುಳ್ಳು ಕೇಸು ದಾಖಲಿಸುವುದಾಗಿ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ.

SCROLL FOR NEXT