ಬೆಂಗಳೂರು ಐಟಿ ಸಿಟಿ ಬೆಂಗಳೂರು,ದಿನದಿನಕ್ಕೆ ಅಭಿವೃದ್ಧಿ ಹೊಂದುತ್ತಿರುವ ವ್ಯಾಪಾರ ವಹಿವಾಟಿನೊಡನೆ ದೆಹಲಿ ಮತ್ತು ಮುಂಬೈನಂತಹ ಮಹಾನಗರಗಳನ್ನು ಸಹ ಹಿಂದಿಕ್ಕಿ Prosperity & Inclusion City Seal and Awards (PICSA) ಸೂಚ್ಯಂಕದಲ್ಲಿ ಮೊದಲ ಸ್ಥಾನ ಗಳಿಸಿದೆ.ಆರ್ಥಿಕ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯ ದೃಷ್ಟಿಯಿಂದ ವಿಶ್ವದ 113 ನಗರಗಳ ಸೂಚ್ಯಂಕದಲ್ಲಿ ನಗರವು 83 ನೇ ಸ್ಥಾನದಲ್ಲಿದೆ. ಉತ್ತರ ಸ್ಪೇನ್‌ನ ಬಾಸ್ಕ್ ಕಂಟ್ರಿ ರಾಜಧಾನಿ ಬಿಲ್ಬಾವೊದಲ್ಲಿ ನಡೆದ ಸಂಶೋಧನೆ ಇದನ್ನು ಸಾಬೀತು ಮಾಡಿದೆ.
ಶ್ರೇಯಾಂಕಗಳು ನಗರದ ಆರ್ಥಿಕ ಬೆಳವಣಿಗೆಯ ಪ್ರಮಾಣವನ್ನು ಮಾತ್ರವಲ್ಲ, ಜನಸಂಖ್ಯೆಗನುಗುಣ ಗುಣಮಟ್ಟ ಮತ್ತು ವಿತರಣೆಯನ್ನು ಸಹ ತೋರಿಸುತ್ತವೆ. ಭಾರತದಲ್ಲಿ, ಬೆಂಗಳೂರಿನ ನಂತರ, ದೆಹಲಿಯು 101 ನೇ ಸ್ಥಾನದಲ್ಲಿದೆ ಮತ್ತು ಮುಂಬೈ 107 ಸ್ಥಾನದಲ್ಲಿದೆ. ಅಗ್ರ ಇಪ್ಪತ್ತು ನಗರಗಳಿಗೆ PICSA ಸೀಲ್ ಗಳನ್ನು ನೀಡಲಾಗಿದೆ.
ವಿಶ್ವದ ಪ್ರಮುಖ ನಗರಗಳು ತಮ್ಮ ಆರ್ಥಿಕತೆಯ ಗಾತ್ರ ಮತ್ತು ಉತ್ತಮ ಆರೋಗ್ಯಕರ ವಾತಾವರಣದಿಂದಲ್ಲದೆ ಅದರ ಎಲ್ಲಾ ನಾಗರಿಕರಿಗಾಗಿ ಅಂತರ್ಗತ ಮತ್ತು ಸಮೃದ್ಧ ವಾತಾವರಣವನ್ನು ನಿರ್ಮಿಸುವ ಪ್ರಯತ್ನಗಳಿಗಾಗಿ ಈ ಸ್ಥಾನ ನೀಡಲ್ಪಟ್ಟಿದೆ. ಸ್ವಿಟ್ಜರ್ಲೆಂಡ್‌ನ ರಾಜಧಾನಿಯಾದ ಜುರಿಚ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತದಲ್ಲಿ ಬೆಂಗಳೂರು ಅಗ್ರ ಸ್ಥಾನದಲ್ಲಿದ್ದು ವಿಶ್ವದ ನಗರಗಳಲ್ಲಿ 100ರ ಒಳಗೆ ಸ್ಥಾನ ಗಿಟ್ಟಿಸಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ನಗರ ಯೋಜಕ ವಿ ರವಿಚಂದರ್, “ಇದು ಬೆಂಗಳೂರಿನ ಆರ್ಥಿಕ ಯಂತ್ರ ಉತ್ತಮವಾಗಿದೆ ಎಂಬುದರ ಸಂಕೇತವಾಗಿದೆ. ನಗರವು ಹೆಚ್ಚಿನ ಸಂಖ್ಯೆಯ ಸ್ಟಾರ್ಟ್ ಅಪ್ ಗಳನ್ನು ಹೊಂದಿದೆ ಮತ್ತು ಇದು ಐಟಿ ನಗರವಾಗಿದೆ.ಈ ಶ್ರೇಯಾಂಕವು ಅನೇಕ ಮೂಲಸೌಕರ್ಯ ಮತ್ತು ಸರ್ಕಾರದ ನಿರ್ಬಂಧಗಳ ಹೊರತಾಗಿಯೂ ಸಿಕ್ಕಿದೆ.". ನಗರ ಯೋಜಕ ವಿ ರವಿಚಂದರ್ ಹೇಳಿದ್ದಾರೆ,.
ಬಯೋಕಾನ್ ಅಧ್ಯಕ್ಷೆ “ನಾವು ಅಗ್ರ 100 ರಲ್ಲಿ ಸ್ಥಾನ ಪಡೆದಿರುವುದು ಒಂದು ದೊಡ್ಡ ಸಾಧನೆ ಮತ್ತು ನಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ. ಇದರ ಮೇಲೆ ನಾವು ಸುಲಭವಾಗಿ ಸುಧಾರಿಸಬಹುದು.ಮೂಲಸೌಕರ್ಯ ಮತ್ತು ಚಲನಶೀಲತೆಸುಧಾರಣೆಯಾಗಿದ್ದರೆ ನಾವು 25ರ ಒಳಗಿನ ಶ್ರೇಯಾಂಕ ಪಡೆಯಬಹುದು." ಎಂದರು.