ರಾಜ್ಯ

ಇದೇ ಮೊದಲ ಬಾರಿಗೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದಸರಾ ಸಂಭ್ರಮ

Manjula VN

ಬೆಂಗಳೂರು: ನಾಡಿನೆಲ್ಲೆಡೆ ದಸರಾ ಹಬ್ಬಕ್ಕೆ ಅದ್ದೂರು ಚಾಲನೆ ದೊರೆತಿದ್ದು ಈ ನಡುವೆ ಇದೇ ಮೊದಲ ಬಾರಿಗೆ ನೃಪತುಂಗ ರಸ್ತೆಯಲ್ಲಿರುವ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದಸರಾ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಜೋಡಿಸಲಾಗಿರುವ ನೂರಾರು ಗೊಂಬೆಗಳು ಇದೀಗ ನೋಡುಗರನ್ನು ಆಕರ್ಷಿಸುತ್ತಿದೆ. 

ಪೊಲೀಸ್ ಆಯುಕ್ತರ ಇಡೀ ಕಚೇರಿ ಆವರಣ ಮಾವಿನತೋರಣ, ಬಾಳೆಕಂಬ, ಅಲಂಕೃತ ವಿದ್ಯುತ್ ದೀಪಗಳಿಂಗ ಮಧವಣಗಿತ್ತಿಯಂತೆ ಸಿಂಗಾರಗೊಂಡಿದೆ. 

ಕಲಾವಿದ ಅರುಣ್ ಸಾಗರ್ ನೇತೃತ್ವದ ತಂಡ ಅತ್ಯಂತ ಸುಂದರವಾಗ ಅರಮನೆ ರೀತಿ ಶೃಂಗರಿಸಿ ಬಣ್ಣ-ಬಣ್ಣದ ವಿವಿಧ ಪುಷ್ಪಗಳಿಂದ ಅಲಂಕರಿಸಿ ಜಗಮಗಿಸುವ ದೀಪಾಲಂಕಾರ ನೋಡುಗರನ್ನು ಸೆಳೆಯುತ್ತಿದೆ. 

ಆಯುಕ್ತರ ಕಚೇರಿಯ ಪ್ರವೇಶ ದ್ವಾರದ ಎಡಭಾಗದಲ್ಲಿ ನಿರ್ಮಾಣ ಮಾಡಲಾಗಿರುವ ಸುಂದರವಾದ ವೇದಿಕೆಯಲ್ಲಿ ನಾನಾ ರೀತಿಯ ಬೊಂಬೆಗಳನ್ನು ಪ್ರದರ್ಶನಕ್ಕಿಡಲಾಗಿದೆ. ಮೈಸೂರು ದಸರಾ ಇತಿಹಾಸ ಬಿಂಬಿಸುವ, ಜಂಬೂ ಸವಾರಿ, ಆನೆಗಳು, ಕುದುರೆಗಳು, ಆರಗಿನ ಅರಮನೆ, ಖಾಸಗಿ ದರ್ಬಾರ್, ದಶಾವತಾರ ಗೊಂಬೆಗಳು, ಹಳ್ಳಿ ಸೊಗಡು, ಮಹಾಭಾರತ, ಮಸೀದಿ, ಮದರ್ ತೆರೆಸಾ, ವಿಶ್ವದ ಹಾಸ್ಯ ಚಕ್ರವರ್ತಿ ಚಾರ್ಲಿ ಚಾಪ್ಲಿನ್, ದುರ್ಗೆ, ಸರಸ್ವತಿ, ಮಹಿಷಾಸುರ, ಗೌತಮ ಬುದ್ಧ, ಅಬ್ದುಲ್ ಕಲಾಂ, ಸ್ವಾಮಿ ವಿವೇಕಾನಂದ ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಮಾದರಿಯ ನೂರಾರು ಬೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. 

ತಮ್ಮ ದೂರು ಹೊತ್ತು ಅಧಿಕಾರಿಗಳನ್ನು ಭೇಟಿ ಮಾಡಲು ಬರುತ್ತಿದ್ದ ಸಾರ್ವಜನಿಕರು ದಸರಾ ಸಂಭ್ರಮಾಚರಣೆ ನೋಡಿ ಕಣ್ತುಂಬಿಕೊಂಡರು. ಪೊಲೀಸರು ತಮ್ಮ ಕುಟುಂಬದವರನ್ನು ಕರೆ ತಂದಿದ್ದು ಕೂಡ ಇಲ್ಲಿ ವಿಶೇಷವಾಗಿತ್ತು. 

SCROLL FOR NEXT