ರಾಜ್ಯ

ಕರ್ನಾಟಕದಲ್ಲಿ ಮೊದಲು! ಐತಿಹಾಸಿಕ ಹಂಪಿಯ 6 ಸ್ಮಾರಕಗಳ ದತ್ತು ಪಡೆದ ಖಾಸಗಿ ಸಂಸ್ಥೆಗಳು

Raghavendra Adiga

ಹೊಸಪೇಟೆ: ಯುನೆಸ್ಕೋ ವಿಶ್ವ ಪರಂಪರೆ ತಾಣವಾಗಿರುವ ವಿಶ್ವಖ್ಯಾತಿಯ ಐತಿಹಾಸಿಕ ಪ್ರವಾಸಿ ತಾಣ ಹಂಪಿಯ ಆರು  ಸ್ಮಾರಕಗಳನ್ನು ಈಗ ಖಾಸಗಿ ಸಂಸ್ಥೆಗಳು ನಿರ್ವಹಣೆ ಮಾಡಲು ಮುಂದಾಗಿವೆ.ನವದೆಹಲಿಯಲ್ಲಿ ನಡೆಯುತ್ತಿರುವ ಪರ್ಯಾತನ ಪರ್ವ್ ಕಾರ್ಯಕ್ರಮದಲ್ಲಿ ಬುಧವಾರ ಮೂರು ಕಂಪನಿಗಳೊಂದಿಗೆ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಕಂಪನಿಗಳು ಕೆಲವು ತಿಂಗಳ ಹಿಂದೆ ತಾವು ಸ್ಮಾರಕ ನಿರ್ವಹಣೆ ಮಾಡುವುದಕ್ಕೆ ಆಸಕ್ತಿ ತೋರಿ ಬಿಡ್ ಸಲ್ಲಿಸಿದ್ದವು.ಇದೀಗ ಪ್ರವಾಸೋದ್ಯಮ ಸಚಿವಾಲಯವು ಈಗ ಖಾಸಗಿ ಸಂಸ್ಥೆಗಳಿಗೆ ಸ್ಮಾರಕಗಳ ನಿರ್ವಹಣೆಗಾಗಿ ಅನುಮತಿ ನೀಡಿದೆ.

ಕೇಂದ್ರ ಸರ್ಕಾರದ ಅಡಾಪ್ಟ್ ಎ ಹೆರಿಟೇಜ್ ಮಾನ್ಯುಮೆಂಟ್ ಕಾರ್ಯಕ್ರಮದಡಿ ಈ ಮೂರು ಸಂಸ್ಥೆಗಳು ಹಂಪಿಯ ಸ್ಮಾರಕಗಳನ್ನು ನಿರ್ವಹಿಸುವ ಜವಾಬ್ದಾರಿ ಹೊತ್ತಿವೆ.

ಕಮಲ ಮಹಲ್, ಕೋದಂಡರಾಮ ದೇವಸ್ಥಾನ, ಕೃಷ್ಣ ದೇವಸ್ಥಾನ, ಆನೆಲಾಯ ಬಡವಿಲಿಂಗ ದೇವಸ್ಥಾನ ಮತ್ತು ಉಗ್ರ ನರಸಿಂಹ ದೇವಸ್ಥಾನಗಳ ನಿರ್ವಹಣೆಯನ್ನು ಮೂರು ಖಾಸಗಿ ಕಂಪನಿಗಳು ಪಡೆದುಕೊಂಡಿದೆ.

ಆರೆಂಜ್ ಕೌಂಟಿ ಆಂಡ್ ರೆಸಾರ್ಟ್ಸ್, ಹೋಟೆಲ್ ಮಲ್ಲಿಗೆ ಹಾಗೂ ಹೆರಿಟೇಜ್ ಹೋಟೆಲ್ ಗಳು ಹಂಪಿಯ ಸ್ಮಾರಕಗಳನ್ನು ನಿರ್ವಹಣೆಗಾಗಿ ಪಡೆದಿವೆ. ದಾಲ್ಮಿಯಾ ಸಿಮೆಂಟ್ ಸಂಸ್ಥೆ ದೆಹಲಿಯ ಕೆಂಪುಕೋಟೆಯನ್ನು ನಿರ್ವಹಿಸುವ ಜವಾಬ್ದಾರಿ ಹೊತ್ತ ಬಳಿಕ ಹಲವಾರು ಖಾಸಗಿ ಸಂಸ್ಥೆಗಳು ಸೇಶಾದ್ಯಂತದ ಐತಿಹಾಸಿಕ ಸ್ಮಾರಕಗಳನ್ನು ನುರ್ವಹಣೆ ಮಾಡುವ ಜವಾಬ್ದಾರಿ ಹೊರಲು ಉತ್ಸುಕತೆ ತೋರಿದೆ.ಕಳೆದ ವರ್ಷ, ಮಹಾರಾಷ್ಟ್ರದ ಪ್ರಸಿದ್ಧ ಅಜಂತಾ ಗುಹೆಗಳು, ಆಂಧ್ರದ ಗಂಡಿಕೋಟ ಕೋಟೆ ಮತ್ತು ದೆಹಲಿಯ ಕುತುಬ್ ಮಿನಾರ್ ಸೇರಿದಂತೆ ಸುಮಾರು ಹತ್ತು ಐತಿಹಾಸಿಕ ಪ್ರವಾಸಿ ತಾಣ್ಗಳನ್ನು ನಿರ್ವಹಣೆಗಾಗಿ ಗುತ್ತಿಗೆ ಪಡೆಯಲಾಗಿತ್ತು.

"ಇದು ಭಾರತದಲ್ಲಿ ಹೊಸ ಪ್ರವೃತ್ತಿಯಾಗಿದೆ ಮತ್ತು ಹಂಪಿ ಈಗ ಕರ್ನಾಟಕದಲ್ಲಿ ಇಂತಹಾ ಪ್ರವೃತ್ತಿ ಕಾಣುತ್ತಿರುವ ಮೊದಲ ಪ್ರವಾಸಿ ತಾಣವಾಗಿದೆ.ಕಳೆದ ವರ್ಷ, ಹಂಪಿಯ ಹಜಾರ ರಾಮ ದೇವಾಲಯ ಸೇರಿದಂತೆ ಭಾರತದ ಸುಮಾರು 10 ಸ್ಮಾರಕಗಳನ್ನು ದತ್ತು ಪಡೆಯಲು ಪರಿಗಣಿಸಲಾಗಿದ್ದು, ಮಾತುಕತೆ ಇನ್ನೂ ಪ್ರಗತಿಯಲ್ಲಿದೆ. ಸ್ಮಾರಕಗಳನ್ನು ದತ್ರ್ತು ಪಡೆಯುವ  ಸಂಸ್ಥೆಗಳು ಶೌಚಾಲಯ, ಕುಡಿಯುವ ನೀರು, ಗಾಳಿ, ಬೆಳಕು, ಇಂಟರ್ನೆಟ್ ಸೌಲಭ್ಯದಂತಹ ಮೂಲಭೂತ ಸೌಕರ್ಯಗಳನ್ನು ಖಾತ್ರಿಪಡಿಸಿಕೊಳ್ಳಬೇಕು ”ಎಂದು ಹೊಸಪೇಟೆಯ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಂಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಇತ್ತೀಚಿನ ದಿನಗಳಲ್ಲಿ ಹಲವಾರು ವಿಧ್ವಂಸಕ ಪ್ರಕರಣಗಳಿಗೆ ಸಾಕ್ಷಿಯಾಗಿವೆ. "ಚಳಿಗಾಲ ಮತ್ತು ಬೇಸಿಗೆಯ ತಿಂಗಳುಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ. ಹಾಗಾಗಿ ಅಷ್ಟು ದೊಡ್ಡ ಸಂಖ್ಯೆಯ ಪ್ರವಾಸಿಗರನ್ನು ನಿರ್ವಹಿಸುವುದು ಏಜನ್ಸಿಗಳಿಗೆ ಹೊರೆಯಾಗುತ್ತದೆ.  ಖಾಸಗಿ ಕಂಪನಿಗಳು, ಪಾಲುದಾರಿಕೆಯ ನಂತರ, ಸ್ಮಾರಕಗಳನ್ನು ಸರಿಯಾದ ರೀತಿಯಲ್ಲಿ ರಕ್ಷಿಸಲಾಗುತದೆ ಎಂದು ಖಚಿತಪಡಿಸಿಕೊಳ್ಳಬೇಕಿದೆ" ಅಧಿಕಾರಿ ಹೇಳಿದರು.

SCROLL FOR NEXT