ರಾಜ್ಯ

ಮದ್ದೂರು: ಕಾರ್ಖಾನೆ ಕ್ಯಾಂಟೀನ್​​ ಊಟ ತಿಂದು 20ಕ್ಕೂ ಹೆಚ್ಚು ಮಹಿಳಾ ನೌಕರರು ಅಸ್ವಸ್ಥ

Srinivasamurthy VN

ಮಂಡ್ಯ: ಕ್ಯಾಂಟೀನ್‌ನಲ್ಲಿ ಊಟ ಮಾಡಿದ 20ಕ್ಕೂ ಹೆಚ್ಚು ಮಹಿಳಾ ನೌಕರರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ  ಘಟನೆ ಮದ್ದೂರು ತಾಲೂಕಿನ ಸೋಮನಹಳ್ಳಿಯ  ಕಾರ್ಖಾನೆಯೊಂದರಲ್ಲಿ ನಡೆದಿದೆ.

ಸರವಿ ಎಂಬ ಕಾರ್ಖಾನೆಯಲ್ಲಿಯೆ 20ಕ್ಕೂ ಹೆಚ್ಚು ಮಹಿಳಾ ನೌಕರರು ಅಸ್ವಸ್ಥಗೊಂಡಿದ್ದಾರೆ

ನಿನ್ನೆ ಮಧ್ಯಾಹ್ನ ಕ್ಯಾಂಟೀನ್‌ನಲ್ಲಿ ಊಟ ಮಾಡಿದ ಮಹಿಳಾ ನೌಕರರು, ಸ್ವಲ್ಪ ಹೊತ್ತಿನಲ್ಲೇ ತಲೆ ಸುತ್ತು, ವಾಂತಿ-ಭೇದಿಯಿಂದ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಮದ್ದೂರಿನ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಲಾಯಿತು.ಫುಡ್ ಪಾಯಿಸನ್​​ನಿಂದ ನೌಕರರು‌ ಅಸ್ವಸ್ಥರಾಗಿರೋ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಕ್ಯಾಂಟೀನ್​ ಪರಿಶೀಲನೆ ನಡೆಸಿದ್ದಾರೆ.

ಮಾಹಿತಿ: ಅರ್ ಸಿ ನೆಟ್ವರ್ಕ್

SCROLL FOR NEXT