ಗೃಹ ಸಚಿವರು 
ರಾಜ್ಯ

ಉಗ್ರರ ನಿಗ್ರಹಕ್ಕೆ ಬೆಂಗಳೂರಿನಲ್ಲಿ ಎಟಿಎಸ್ ಸ್ಥಾಪನೆ- ಬಸವರಾಜ್ ಬೊಮ್ಮಾಯಿ

ನಗರಕ್ಕೆ ಉಗ್ರರ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಸಿಮೀತವಾಗಿ ನವೆಂಬರ್ 1 ರಿಂದ  ಭಯೋತ್ಪಾದನಾ ನಿಗ್ರಹ ದಳ ಆರಂಭಿಸಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರು:  ನಗರಕ್ಕೆ ಉಗ್ರರ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಸಿಮೀತವಾಗಿ ನವೆಂಬರ್ 1 ರಿಂದ  ಭಯೋತ್ಪಾದನಾ ನಿಗ್ರಹ ದಳ ಆರಂಭಿಸಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಧಾನಿ ಬೆಂಗಳೂರು ಉಗ್ರರ ನೆಲೆಯಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ನಗರದ ಕಮಿಷನರೇಟ್ ನ ಹಿರಿಯ ಪೊಲೀಸ್ ಅಧಿಕಾರಿಗಳ ಪರಿಶೀಲನಾ ಸಭೆ ನಡೆಸಲಾಗಿದೆ. ಸಭೆಯಲ್ಲಿ ಎಟಿಎಸ್ ನ್ನು ಸ್ಥಾಪಿಸುವ ಅಗತ್ಯದ ಬಗ್ಗೆ ಚರ್ಚಿಸಲಾಗಿದೆ. ಮಾತ್ರವಲ್ಲ ರಾಜ್ಯದ ಸೂಕ್ಷ್ಮ ಹಾಗೂ ಕರಾವಳಿ ಪ್ರದೇಶಗಳಲ್ಲಿ ಹೈ ಆಲರ್ಟ್ ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ 20 ರಿಂದ 22  ಉಗ್ರ ಗುಂಪಿನ ಘಟಕಗಳು ಕಾರ್ಯನಿರ್ವಹಿಸುತ್ತಿರುವುದಾಗಿ ರಾಷ್ಟ್ರೀಯ ತನಿಖಾ ದಳ ಶಂಕೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಭಯೋತ್ಪಾದನಾ ನಿಗ್ರಹ ದಳ ಸ್ಛಾಪಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಕಳೆದೊಂದು ವರ್ಷದಲ್ಲಿ ಬೆಂಗಳೂರು ಸಮೀಪ ಅನೇಕ ಸಂಖ್ಯೆಯ ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ ಉಗ್ರರನ್ನು ಬಂಧಿಸಲಾಗಿದ್ದು, ಸ್ಟೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಜಿಹಾದಿ ಚಟುವಟಿಕೆಗಳಿಗಾಗಿ ಕೃಷಗಿರಿ ಬೆಟ್ಟವನ್ನು ತಾಣವನ್ನಾಗಿ ಮಾಡಿಕೊಂಡಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ. ರಾಷ್ಟ್ರೀಯ ತನಿಖಾ ದಳದೊಂದಿಗೆ ಸಮನ್ವಯತೆಯೊಂದಿಗೆ ಭಯೋತ್ಪಾದನಾ ನಿಗ್ರಹ ದಳ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬರಗಾಲ ಕುರಿತು ಮುಗಿಯದ ಚರ್ಚೆ: ರಾಜ್ಯ ವಿಧಾನಸಭೆ ಅಧಿವೇಶನ ಒಂದು ದಿನ ವಿಸ್ತರಣೆ

CEC ಆಗಲು ಅನ್ ಫಿಟ್, ಜ್ಞಾನೇಶ್ ಕುಮಾರ್​ರನ್ನು ತಕ್ಷಣ ಬಂಧಿಸಿ; ಮತ್ತೆ ಚುನಾವಣೆ ನಡೆಸಿ: ಮಮತಾ ಬ್ಯಾನರ್ಜಿ

ನಾವು 'ಭಯೋತ್ಪಾದನೆಯ ಸಂತ್ರಸ್ತರು, ಆದರೆ ಮಂಡಿಯೂರಿ ಶರಣಾಗಲಿಲ್ಲ; UN ಸಾಮಾನ್ಯ ಸಭೆಯಲ್ಲಿ ಇರಾನ್ ಅಧ್ಯಕ್ಷರ ಪ್ರಬಲ ಭಾಷಣ!

ಆ ಮೆಂಟಲ್ ಬಗ್ಗೆ ನನ್ನ ಕೇಳಬೇಡ್ರಿ; ನೀವ್ಯಾಕೆ ದಿನಾ ಆ ವ್ಯಕ್ತಿಗೆ ಮೈಕ್ ಹಿಡೀತೀರಾ: ಮಾಧ್ಯಮ ವಿರುದ್ಧ ಪ್ರತಾಪ್ ಸಿಂಹ ಗರಂ!

IPL Auction: ಮೂರು ವರ್ಷದ ಬಳಿಕ ಮತ್ತೆ ಭಾರತದಲ್ಲೇ ಐಪಿಎಲ್ ಹರಾಜು; ಸ್ಥಳ, ದಿನಾಂಕ ಘೋಷಣೆ