ರಾಜ್ಯ

ನಗರದ ಪ್ರತಿಷ್ಠಿತ 2 ಡ್ಯಾನ್ಸ್ ಬಾರ್'ಗಳ ಮೇಲೆ ಸಿಸಿಬಿ ದಾಳಿ: 71 ಮಹಿಳೆಯರ ರಕ್ಷಣೆ 

Manjula VN

ಬೆಂಗಳೂರು: ನಗರದ 2 ಪ್ರತಿಷ್ಠಿತ ಡ್ಯಾನ್ಸ್ ಬಾರ್ ಗಳ ಮೇಲೆ ಕೇಂದ್ರೀಯ ಅಪರಾಧ ವಿಭಾಗ (ಸಿಸಿಬಿ)ದ ಪೊಲೀಸರು ದಾಳಿ ನಡೆಸಿದ್ದು, 71 ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆಂದು ಬುಧವಾರ ತಿಳಿದುಬಂದಿದೆ. 

ಮೊದಲಿಗೆ ಮೆಟ್ರೋ ನೈಟ್ ಕ್ಲಬ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಮುಂಬೈ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಹಾಗೂ ನೇಪಾಳ ಮೂಲದ 71 ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. 

ನಂತರ ದೇವನಹಳ್ಳಿಯಲ್ಲಿರುವ ಡ್ಯಾನ್ಸ್ ಬಾರ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ರೂ.2,22,500 ಹಣ ಹಾಗೂ ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

SCROLL FOR NEXT