ರಾಜ್ಯ

ಡೆಲಿವರಿ ಬಾಯ್ಸ್ ಗಳಿಗೆ ಸಾಮಾಜಿಕ ಭದ್ರತಾ ಸೌಲಭ್ಯ- ಎಸ್. ಸುರೇಶ್ ಕುಮಾರ್ 

Nagaraja AB

ಬೆಂಗಳೂರು: ಡೆಲಿವರಿ ಬಾಯ್ಸ್ ಹಾಗೂ ಮೊಬೈಲ್ ಆಪ್  ಆಧಾರಿತ ಕೆಲಸ ಮಾಡುವ ಚಾಲಕರಿಗೆ ಸೂಕ್ತ ಸಾಮಾಜಿಕ ಭದ್ರತಾ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಕಾರ್ಮಿಕ ಸಚಿವ ಎಸ್. ಸುರೇಶ್ ಕುಮಾರ್  ತಿಳಿಸಿದ್ದಾರೆ.

ವಿವಿಧ ಕಾರ್ಮಿಕ ಸಂಘಟನೆಗಳೊಂದಿಗೆ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಡೆಲಿಬಾಯ್ಸ್ ಹಾಗೂ  ಚಾಲಕರಿಗೆ ಸಾಮಾಜಿಕ ಸೇವ ಒದಗಿಸುವ ಸಂಬಂಧ ವರದಿ ಸಲ್ಲಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ಸ್ಥಾಪಿಸಲಾಗುವುದು, ಆ ವರದಿ ಆಧಾರದ ಮೇಲೆ ಕರಡು ನೀತಿಯೊಂದನ್ನು ರೂಪಿಸಲಾಗುವುದು ಎಂದು ಹೇಳಿದರು.

ಮೊಬೈಲ್ ಆಪ್ ಆಧಾರಿತ ಸೇವೆ ನೀಡುವ ಟ್ಯಾಕ್ಸಿ ಚಾಲಕರ ಬಗ್ಗೆಯೂ ಗಮನಹರಿಸಲಾಗಿದೆ. ಈ ಸಂಬಂಧ ಕಂಪನಿಗಳು ಹಾಗೂ ಮಾಲೀಕರೊಂದಿಗೆ ಶೀಘ್ರದಲ್ಲಿಯೇ  ಸಭೆ ನಡೆಸಲಾಗುವುದು ಎಂದರು.

ಆಡಳಿತ ಮಂಡಳಿ ಹಾಗೂ ನೌಕರರ ನಡುವಿನ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ನೀತಿಯೊಂದರ ಅಗತ್ಯವಿದೆ. ಇದರಿಂದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಲಿದೆ.  ಕಟ್ಟಡ ನಿರ್ಮಾಣದ ಕಾರ್ಮಿಕರಿಗಾಗಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ  ಸಹಾಯವಾಣಿ 155214 ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.

SCROLL FOR NEXT