ರಾಜ್ಯ

ಸಿಸಿಬಿ ಕಾರ್ಯಾಚರಣೆ: ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದ 30 ಪ್ರಜೆಗಳ ಬಂಧನ

Srinivas Rao BV

ಬೆಂಗಳೂರು: ನಗರ ಭಯೋತ್ಪಾದಕರ ಅಡಗುತಾಣವಾಗುತ್ತಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ನಗರದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿ,  ಅಕ್ರಮವಾಗಿ ನಗರದಲ್ಲಿ ನೆಲೆಸಿದ್ದ 30 ಮಂದಿ ಬಾಂಗ್ಲಾ ದೇಶದ ಪ್ರಜೆಗಳನ್ನು ಬಂಧಿಸಿದ್ದಾರೆ.

ನಗರದ ಮಾರತ್‌ಹಳ್ಳಿ, ರಾಮಮೂರ್ತಿ ನಗರ, ಕೆಆರ್ ಪುರ, ಹೆಚ್.ಎ.ಎಲ್ ಇನ್ನಿತರ ಕಡೆಗಳಲ್ಲಿ ಅಕ್ರಮವಾಗಿ ನೆಲೆಸಿರುವವರ ಮಾಹಿತಿ ಸಂಗ್ರಹಿಸಿ ನಿನ್ನೆ ರಾತ್ರಿಯಿಂದ ಕಾರ್ಯಾಚರಣೆ ನಡೆಸಿ, 60ಕ್ಕೂ ಹೆಚ್ಚು ಬಾಂಗ್ಲಾ ದೇಶದ ಪ್ರಜೆಗಳನ್ನು ಬಂಧಿಸಲಾಗಿದೆ. ಅವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಅವರನ್ನು ಸ್ವದೇಶಕ್ಕೆ ವಾಪಾಸು ಕಳುಹಿಸಲು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಬಂಧಿಸಿರುವ ಬಾಂಗ್ಲಾ ಪ್ರಜೆಗಳ ವಿರುದ್ಧ ವಿದೇಶಿ ಕಾಯ್ದೆಯಡಿ  ಪ್ರಕರಣ ದಾಖಲಿಸಿ ಅವರ ಪಾಸ್‌ಪೋರ್ಟ್ ಪರಿಶೀಲಿಸಲಾಗುತ್ತಿದೆ. ಹಲವು ವರ್ಷಗಳಿಂದ ಇಲ್ಲೇ  ನೆಲೆಸಿರುವ ಬಾಂಗ್ಲಾ ದೇಶಿಗರು ಅಕ್ರಮವಾಗಿ ಆಧಾರ್‌ಕಾರ್ಡ್. ಇನ್ನಿತರ ಸರ್ಕಾರಿ  ದಾಖಲೆಗಳನ್ನು ಪಡೆದಿದ್ದು, ಅವುಗಳ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು.

ಹಲವು ವರ್ಷಗಳ  ಹಿಂದೆ ನಗರಕ್ಕೆ ಬಂದಿರುವ ಬಾಂಗ್ಲಾ ದೇಶಿಗರಲ್ಲಿ ಬಹುತೇಕ ಮಂದಿ ಕೂಲಿ ಕೆಲಸ  ಮಾಡಿಕೊಂಡಿದ್ದಾರೆ. ಸ್ಥಳೀಯವಾಗಿಯೇ ಸಂಬಂಧ ಬೆಳೆಸಿಕೊಂಡು ಸರ್ಕಾರ ಸವಲತ್ತುಗಳನ್ನು  ಪಡೆಯುತ್ತಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದು ಹೇಳಿದರು. ಬಂಧಿಸಿರುವ  ಬಾಂಗ್ಲಾ ದೇಶದ ಪ್ರಜೆಗಳು ಎಷ್ಟು ವರ್ಷಗಳಿಂದ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ.  ಅವರ ವೀಸಾ ಅವಧಿ ಎಷ್ಟು ವರ್ಷವಿತ್ತು? ಯಾವ ಉದ್ದೇಶಕ್ಕಾಗಿ ಬಂದಿದ್ದರು ಹಾಗೂ ವೀಸಾ  ಪಡೆದಿದ್ದರು ಎಂಬುದರ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ವಿದ್ಯಾರ್ಥಿ  ಹಾಗೂ ಪ್ರವಾಸಿ ವೀಸಾದಡಿ ನಗರಕ್ಕೆ ಬಂದು ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ  ನೆಲೆಸಿದ್ದ ಆಫ್ರಿಕ ದೇಶದ 7 ಪ್ರಜೆಗಳನ್ನು ಪತ್ತೆ ಹಚ್ಚಿ ಲಾಗುತ್ತದೆ ಆಫ್ರಿಕಾ  ದೇಶಗಳಿಂದ ನಗರಕ್ಕೆ ಬಂದು ಪೊಲೀಸರ ಕಣ್ತಪ್ಪಿಸಿ ಇಲ್ಲೇ ವಾಸವಿರುವವರ ಮಾಹಿತಿ ಕಲೆಹಾಕಿ  ಅವರನ್ನು ಸ್ವದೇಶಕ್ಕೆ ಕಳುಹಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು

SCROLL FOR NEXT