ಸಂಗ್ರಹ ಚಿತ್ರ 
ರಾಜ್ಯ

ನಿಯಂತ್ರಣ ತಪ್ಪಿ ಸರ್ಕಾರಿ ಬಸ್ಸು ಪಲ್ಟಿ; ಹಲವು ಪ್ರಯಾಣಿಕರಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ಸೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಬಳಿಕ ಉರುಳಿ ಬಿದ್ದ ಪರಿಣಾಮ ಹಲವು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರು ಗ್ರಾಮದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ನಡೆದಿದೆ.

ರಾಮನಗರ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ಸೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಬಳಿಕ ಉರುಳಿ ಬಿದ್ದ ಪರಿಣಾಮ ಹಲವು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರು ಗ್ರಾಮದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ನಡೆದಿದೆ.

ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ 32 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಇಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.

ಗಂಭೀರವಾಗಿ ಗಾಯಗೊಂಡಿರುವ ಗಾಯಾಳುಗಳನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೀಡಾದ ಬಸ್ ಪುತ್ತೂರಿನಿಂದ ಬೆಂಗಳೂರಿಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಸ್ಥಳೀಯರು ಮತ್ತು ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೋವಿಡ್ ವೇಳೆ ಆಕ್ಸಿಜನ್ ಇಲ್ಲದೆ ಜನ ಪ್ರಾಣ ಬಿಟ್ಟಾಗ ಸಂವೇದನೆಯನ್ನೂ ICU ನಲ್ಲಿಟ್ಟಿದ್ರಾ? ಬಿಜೆಪಿಗೆ ಸಿದ್ದರಾಮಯ್ಯ ತರಾಟೆ!

ಸದನದಲ್ಲಿ 'CM ಕುರ್ಚಿ ಕಿತ್ತಾಟ' ಪ್ರತಿಧ್ವನಿ: ಸಿದ್ದರಾಮಯ್ಯ ಸೇರಿ 139 ಶಾಸಕರೂ ನನ್ನ ಬಲ ಎಂದ DCM ಡಿ.ಕೆ ಶಿವಕುಮಾರ್!

ಚೀನಾ ಸೇನೆಯಲ್ಲಿ ಭ್ರಷ್ಟಾಚಾರ ಕಡಿವಾಣಕ್ಕೆ ಭಾರಿ ಕ್ರಮ; ಪರಮಾಣು ಕ್ಷಿಪಣಿಗಳಲ್ಲಿ ಇಂಧನದ ಬದಲು ನೀರು!

'ವಿಬಿ-ಜಿ ರಾಮ್ ಜಿ' ಕಾನೂನು ವಾಪಸ್ ಪಡೆಯಲು ಮಹಾ ಪಂಚಾಯತ್ ಆಗ್ರಹ! ರಾಷ್ಟ್ರಪತಿಗೆ ಮನವಿ ಪತ್ರ

ಲಡಾಖ್ ಗಡಿ ಸಂಘರ್ಷ: ಮಾಜಿ ಸೇನಾಧಿಕಾರಿ ನರವಾಣೆ ಪುಸ್ತಕ ಪ್ರಸ್ತಾಪಿಸಿದ ರಾಹುಲ್ ಗಾಂಧಿ; ಸಂಸತ್ ನಲ್ಲಿ ಕೋಲಾಹಲ; Video

SCROLL FOR NEXT