ರಾಜ್ಯ

ಸರ್ಕಾರಿ  ಸವಲತ್ತುಗಳಿಗಾಗಿ ಕಿತ್ತಾಡುವ ವ್ಯವಸ್ಥೆಯಲ್ಲಿ ಬಂಜಾರ ಸಮುದಾಯ ಮಾದರಿ: ನ್ಯಾ. ಎನ್. ಸಂತೋಷ್ ಹೆಗ್ಡೆ 

Nagaraja AB

ಬೆಂಗಳೂರು: ಮೀಸಲಾತಿ, ಸರ್ಕಾರಿ ಸವಲತ್ತುಗಳಿಗಾಗಿ ಕಿತ್ತಾಡುವ ಜನ ಸಮುದಾಯದ ನಡುವೆ ಬಂಜಾರ ಸಮುದಾಯ ತಾವು ಹಿಂದುಳಿದವರಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವುದು ಶ್ಲಾಘನೀಯ. ಇತರೆ ಜಾತಿಗಳಿಗೆ ಬಂಜಾರ ಸಮಾಜ ಮಾದರಿಯಾಗಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿಂದು ಶಿವಪುತಳಾ ಪ್ರಕಾಶನ ಹೊರ ತಂದಿರುವ ಸಂತೋಷ ಶಿವಲಾಲ ರಾಥೋಡ ಅವರ " ಬಂಜಾರ ಚರಿತಾಮೃತ " ಕೃತಿ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದಿಂದ ಮೀಸಲಾತಿ, ವಿವಿಧ ಸವಲತ್ತುಗಳನ್ನು ಪಡೆಯಲು ಪೈಪೋಟಿ ನಡೆಸುವ ವಿವಿಧ ಜಾತಿ, ಜನಾಂಗಗಳ ನಡುವೆ ಬಂಜಾರ ಸಮುದಾಯ ವಿಭಿನ್ನವಾಗಿ ಕಾಣುತ್ತದೆ. ಎಲ್ಲರೂ ಅಂದುಕೊಂಡಂತೆ ನಾವು ನಾವು ಹಿಂದುಳಿದವರಲ್ಲ. ನಾವು ಕ್ಷತ್ರಿಯ ಸಮುದಾಯಕ್ಕೆ ಸೇರಿದವರು ಎಂದು ಗರ್ವದಿಂದ ಹೇಳಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು. 

ಬಂಜಾರ ಸಮುದಾಯದಲ್ಲಿ ಹತ್ತು ಹಲವು ವೈಶಿಷ್ಟ್ಯಗಳಿವೆ. ಅಂತಹ ವಿಶೇಷತೆಯನ್ನು ತೆರೆದಿಡುವ ಪ್ರಯತ್ನವನ್ನು " ಬಂಜಾರ ಚರಿತಾಮೃತ" ಕೃತಿ ಮಾಡುತ್ತಿದೆ. ಬಂಜಾರ ಜನಾಂಗದ ಬಗ್ಗೆ ನಾವು ತಿಳಿದುಕೊಂಡಿದ್ದು ಅತ್ಯಲ್ಪ. ಆದರೆ ಈ ಕೃತಿ ನಮ್ಮೆಲ್ಲರ ತಪ್ಪು ಕಲ್ಪನೆಗಳನ್ನು ದೂರ ಮಾಡುತ್ತದೆ. ಬಂಜಾರ ಜನಾಂಗದಲ್ಲಿ ಎಲ್ಲಕ್ಕಿಂತ ಹೆಚ್ಚು ಸಾಂಸ್ಕೃತಿಕ ಶ್ರೀಮಂತಿಕೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು

SCROLL FOR NEXT