ರಾಜ್ಯ

ಸರ್ಕಾರಿ ಯೋಜನೆಯಡಿ ಹೃದಯ ಕಸಿ: ಮೊದಲ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಬಾಗಲಕೋಟೆ ವ್ಯಕ್ತಿಗೆ ಮರುಜನ್ಮ

Raghavendra Adiga

ಬೆಂಗಳೂರು: ಹುಟ್ಟಿನಿಂದಲೂ ಸಂಕೀರ್ಣ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಬಾಗಲಕೋಟೆ ಮೂಲದ 38 ವರ್ಷದ ವ್ಯಕ್ತಿಯೊಬ್ಬರಿಗೆ ತಮ್ಮ ಸಾವಿಗೆ ಸಮೀಪವಾಗಿದ್ದ ವೇಳೆ ರಾಜ್ಯ ಸರ್ಕಾರದ ಅಂಗಾಂಗ ಕಸಿ ಯೋಜನೆಯ್ಯಡಿಯಲ್ಲಿ ದಾನಿಯೊಬ್ಬನ ಹೃದಯ ಸಿಕ್ಕು ಹೊಸ ಬದುಕು ದೊರಕಿದೆ.

ನಾರಾಯಣ ಹೆಲ್ತ್ ಸಿಟಿಯ ಪೀಡಿಯಾಟ್ರಿಕ್ ಮತ್ತು ವಯಸ್ಕರ ಜನ್ಮಜಾತ ಹೃದಯ ಕಾಯಿಲೆಗಳ ಪ್ರಮುಖ ವೈದ್ಯ ಡಾ.ಶಶಿರಾಜ್ ಎಸ್, “ರೋಗಿಯು ದೊಡ್ಡ ಅಪಧಮನಿ ಸ್ಥಳಾಂತರದಿಂದ ಬಳಲುತ್ತಿದ್ದರು.  ಮತ್ತು ತೀವ್ರವಾದ ಅಪಸಾಮಾನ್ಯ ಕ್ರಿಯೆಯಿಂದ ನಿಧಾನವಾಗಿ IV ನೇ ತರಗತಿಯ ಹೃದಯ ವೈಫಲ್ಯಕ್ಕೆ ತುತ್ತಾಗಿದ್ದರು.ಇದು ಬಹು ಅಪರೂಪದ ಜನ್ಮಜಾತ ಹೃದಯ ದೋಷವಾಗಿದ್ದು, ಭ್ರೂಣದ ಬೆಳವಣಿಗೆಯ ಸಮಯದಲ್ಲಿ ಹೃದಯವು ಅಸಹಜವಾಗಿ ತಿರುಗುತ್ತದೆ ಮತ್ತು ಕುಹರಗಳು ವ್ಯತಿರಿಕ್ತವಾಗಿರುತ್ತದೆ. ಕಳೆದ ವರ್ಷ ರೋಗಿಯು ನಮ್ಮ ಆಸ್ಪತ್ರೆಗೆ ಬಂದಿದ್ದರು. ನಾನು ಅವನಿಗೆ ಔಷಧಿಗಳ ಅಳತೆಗಳೊಡನೆ  ಚಿಕಿತ್ಸೆ ನೀಡಲು ಪ್ರಯತ್ನಿಸುತ್ತಿದ್ದೆ, ಆದರೆ ಅವರ ಸ್ಥಿತಿಯು  ಹದಗೆಟ್ಟಿತು, ಅವರಿಗೆ ಚಲಿಸಲು ಸಹ ಸಾಧ್ಯವಾಗಲಿಲ್ಲ ಮತ್ತು ಉಸಿರಾಟದ ತೊಂದರೆಯೂ ಇತ್ತು. ಅವನಿಗೆ ಬೇಗನೆ ದಾನಿಯ ಅಗತ್ಯವಿತ್ತು. ” ಎಂದಿದ್ದಾರೆ.

ಮೈಸೂರಿನ 28 ವರ್ಷದ ದಾನಿಗಳಿಂದ ಪಡೆದ ಹೃದಯವನ್ನು ಹಸಿರು ಕಾರಿಡಾರ್ ರಚಿಸುವ ಮೂಲಕ ಬೆಂಗಳೂರಿಗೆ ತಂದು ವ್ಯಕ್ತಿಗೆ ಜೋಡಿಸಲಾಗಿದೆ.ಆಗಸ್ಟ್ 16 ರಂದು ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು  ರೋಗಿಯು ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ.

ಕಸಿ ತನ್ನ ಜೀವವನ್ನು ಉಳಿಸಿದ್ದು ಮಾತ್ರವಲ್ಲ, ಅಂಗಾಂಗ ಕಸಿ ಯೋಜನೆಯಡಿ ಹೃದಯ ಕಸಿ ಮಾಡಿದ ಬೆಂಗಳೂರಿನ ಮೊದಲ ರೋಗಿ ಎಂಬ ದಾಖಲೆಗೆ ತಾನು ಪಾತ್ರನಾಗಿದ್ದೇನೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

 ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ. ಬಡ ರೋಗಿಗಳಿಗೆ ಅಂಗಾಂಗ ಕಸಿ ಮಾಡಲು ರಾಜ್ಯ ಸರ್ಕಾರ 30 ಕೋಟಿ ರೂ. ಮೀಸಲಿರಿಸಿದೆ.

SCROLL FOR NEXT