ರಾಜ್ಯ

12 ಐಎಎಸ್ ಅಧಿಕಾರಿಗಳ ವರ್ಗಾವಣೆ: ಬಿಎಂಟಿಸಿ ಮುಖ್ಯಸ್ಥರಾಗಿ ಸಿ.ಶಿಖಾ ನೇಮಕ

Raghavendra Adiga

ಬೆಂಗಳೂರು: ಮಹತ್ವದ ವರ್ಗಾವರ್ಗಿ ಪ್ರಕ್ರಿಯೆಯಲ್ಲಿ ಶುಕ್ರವಾರ ರಾಜ್ಯ ಸರ್ಕಾರ ಮತ್ತಷ್ಟು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಈ ವೇಳೆ  ಬೆಂಗಳೂರು ನಗರದಲ್ಲಿ ಎರಡು ಪ್ರಮುಖ ಹುದ್ದೆಗಳಿಗೆ ಮಹಿಳಾ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶಿಸಲಾಗಿದೆ

ಸಿ ಶಿಖಾ ಅವರನ್ನು ಎನ್ ವಿ ಪ್ರಸಾದ್ ಅವರ ಸ್ಥಾನಕ್ಕೆ  ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ವ್ಯವಸ್ಥಾಪಕ ನಿರ್ದೇಶಕರಾಗಿ (ಎಂಡಿ) ನೇಮಕ ಮಾಡಲಾಗಿದೆ.ಜತೆಗೆ ಶಿಖಾ ಅವರಿಗೆ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಎಂಡಿ ಆಗಿಯೂ ಏಕಕಾಲದಲ್ಲಿ ಉಸ್ತುವಾರಿ ವಹಿಸಲಾಗಿದೆ. 

ಇನ್ನೋರ್ವ ಮಹಿಳಾ ಐಎಎಸ್ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಇದುವರೆಗೆ ಖಾಲಿ ಬಿದ್ದಿದ್ದ ಬೆಂಗಳೂರು ಸ್ಮಾರ್ಟ್ ಸಿಟಿ ಕಾರ್ಪೊರೇಶನ್ ಲಿಮಿಟೆಡ್ ಎಂಡಿ ಆಗಿ ನೇಮಕ ಮಾಡಲಾಗಿದೆ.

ಇನ್ನುಳಿದಂತೆ ಒಟ್ಟಾರೆ 12 ಐಎಎಸ್​ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು ವರ್ಗಾವಣೆಯಾಗಿರುವ ಅಧಿಕಾರಿಗಳ ವಿವರ ಹೀಗಿದೆ-

ಡಾ. ರಾಜ್ ಕುಮಾರ್ ಖತ್ರಿ- ಎಸಿಎಸ್, ಉನ್ನತ ಶಿಕ್ಷಣ ಇಲಾಖೆ
ಅಮ್ಲಾನ್ ಆದಿತ್ಯ ಬಿಸ್ವಾಸ್- ಬೆಳಗಾವಿ ಪ್ರಾದೇಶಿಕ ಆಯುಕ್ತ, ಭೂಸ್ವಾಧೀನ, ಪುನರ್ವಸತಿ, ಕೃಷ್ಣಾ ಮೇಲ್ದಂಡೆ ಯೋಜನೆ, ಬಾಗಲಕೋಟೆ ( ಹೆಚ್ಚುವರಿ ಹೊಣೆ)
ಎ.ಬಿ. ಇಬ್ರಾಹಿಂ- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ( ಹೆಚ್ಚುವರಿ ಹೊಣೆ)
ಸಿ. ಶಿಖಾ- ಎಂಡಿ-ಬಿಎಂಟಿಸಿ,  ಎಂಡಿ-ಕೆಯುಐಡಿಎಫ್ ಸಿ ( ಹೆಚ್ಚುವರಿ ಹೊಣೆ)
ಸಲ್ಮಾ ಕೆ. ಫಾಹಿಮ್- ಎಂಡಿ- ಹಟ್ಟಿ ಗೋಲ್ಡ್ ಕಂಪನಿ
ಕೆ.ಜಿ. ಶಾಂತಾರಾಂ- ಆಯುಕ್ತ, ಕಾರ್ಮಿಕ ಇಲಾಖೆ
ಅನಿರುದ್ದ್ ಸ್ರವಣ್ - ಆಯುಕ್ತ, ಕಾಲೇಜು ಶಿಕ್ಷಣ ಇಲಾಖೆ
ಹೆಪ್ಸಿಬಾ ರಾಣಿ ಕೊರ್ಲಪಾಟಿ- ಎಂಡಿ, ಬೆಂಗಳೂರು ಸ್ಮಾರ್ಟ್ ಸಿಟಿ ಕಾರ್ಪೋರೇಷನ್
ಕೆ. ಶ್ರೀನಿವಾಸ್- ಆಯುಕ್ತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಎಂ.ಆರ್. ರವಿಕುಮಾರ್- ಎಂಡಿ, ರೇಷ್ಮೆ ಮಾರುಕಟ್ಟೆ ನಿಗಮ
ಕೆ. ಲೀಲಾವತಿ- ನಿರ್ದೇಶಕಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ
ಡಾ. ಅರುಂಧತಿ ಚಂದ್ರಶೇಖರ್- ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

SCROLL FOR NEXT