ರಾಜ್ಯ

ಕಾವೇರಿ ನದಿಯ ಪುನಶ್ಚೇತನ, ಪರಿಸರ ರಕ್ಷಣೆಗೆ ಸರ್ಕಾರದ ಬೆಂಬಲ: ಸಿಎಂ ಬಿಎಸ್ ಯಡಿಯೂರಪ್ಪ

Srinivasamurthy VN

ಬೆಂಗಳೂರು: ಕಾವೇರಿ ನದಿಯ ಪುನಶ್ಚೇತನಕ್ಕೆ ಸಸಿ ನೆಡುವ ಕಾರ್ಯಕ್ರಮ ಶ್ಲಾಘನೀಯ, ಪರಿಸರ ರಕ್ಷಣೆಯ ಕಾರ್ಯಕ್ರಮಕ್ಕೆ ನಮ್ಮ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಇಶಾ ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ ‘ಕಾವೇರಿ ಕಾಲಿಂಗ್’ (ಕಾವೇರಿ ಕೂಗು) ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಕಾವೇರಿ ಕರ್ನಾಟಕ ಹಾಗೂ ತಮಿಳುನಾಡಿನ ಜೀವನದಿ. ಪ್ರಕೃತಿಯ ಮೇಲೆ ಜನರ ದೌರ್ಜನ್ಯ ಹೆಚ್ಚಿದ್ದು, ನದಿಗಳು ಬರಿದಾಗುತ್ತಿವೆ. ಅತಿ ವೃಷ್ಟಿ ಹಾಗೂ ಅನಾವೃಷ್ಟಿ ಪ್ರಕೃತಿ ನಮಗೆ ನೀಡುತ್ತಿರುವ ಎಚ್ಚರಿಕೆಯಾಗಿದೆ ಎಂದಿದ್ದಾರೆ.

ಜನರ ಬೌದ್ಧಿಕ ಆಧ್ಯಾತ್ಮಿಕ ಜಿಜ್ಞಾಸೆಗಳಿಗೆ ಪರಿಹಾರ ನೀಡುವ ಗುರು, ಸಮಾಜದಲ್ಲಿ ಬದಲಾವಣೆ ತರುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಾರೆ ಎನ್ನುವುದಕ್ಕೆ ಕಾವೇರಿ ಕಾಲಿಂಗ್ ಆದೋಲನ ಸಾಕ್ಷಿ. ಅರಣ್ಯ ಇಲಾಖೆಯಲ್ಲಿ ಸುಮಾರು 2 ಕೋಟಿ ಸಸಿಗಳಿದ್ದು, ಅವುಗಳನ್ನು ಅಭಿಯಾನದಡಿ ನೆಡಬಹುದು ಎಂದು ಅವರು ತಿಳಿಸಿದ್ದಾರೆ.

SCROLL FOR NEXT