ರಾಜ್ಯ

ಬೆಂಗಳೂರು: ಮಸಾಜ್ ಹೆಸರಲ್ಲಿ ಮಾಂಸ ದಂಧೆ, ವ್ಯಕ್ತಿಯಿಂದ 12 ಸಾವಿರ ಕಿತ್ತುಕೊಂಡು ಗ್ಯಾಂಗ್ ಪರಾರಿ!

Raghavendra Adiga

ಬೆಂಗಳೂರು: ಮಾಂಸ ದಂಧೆಯಲ್ಲಿ ತೊಡಗಿರುವ ಗ್ಯಾಂಗ್ ಒಂದರ ವಿರುದ್ಧ ಎಫ್‌ಐಆರ್ ದಾಖಲಿಸುವುದಕ್ಕಾಗಿ ಒಂದು ತಿಂಗಳಿಗೆ ಹೆಚ್ಚು ಕಾಲ ಪರದಾಡುತ್ತಿದ್ದ ವ್ಯಕ್ತಿಗೆ ಕಡೆಗೂ ಎಫ್‌ಐಆರ್ ದಾಖಲಿಸುವ ಅವಕಾಶ ಸಿಕ್ಕಿದೆ.ವ್ಯಕ್ತಿಯು ಮಾಡಿರುವ ಆರೋಪದಂತೆ ತಾನು  ಆಯುರ್ವೇದ ಮಸಾಜ್ ಸೆಂಟರ್ ಹುಡುಕುತ್ತಿದ್ದ ವೇಳೆ ಗ್ಯಾಂಗ್ ನಿಂದ 12,000 ರು. ವಂಚನೆಗೊಳಗಾಗಿದ್ದಾರೆ.

ಬೆಂಗಳೂರಿನ ದಣ್ಣಾಯಕನಹಳ್ಳಿ ನಿವಾಸಿಯಾದ ಜಗದೀಶ್ ಟಿ ತಮ್ಮ ದೂರಿನಲ್ಲಿ ಜುಲೈ 29 ರಂದು ಸೆಂಟ್ರಲ್ ಮಾಲ್‌ಗೆ ಬರಲು ಆರೋಪಿಗಳು ಕೇಳಿಕೊಂಡಿದ್ದಾಗಿ ಹೇಳಿದ್ದಾರೆ. . ಅವರನ್ನು ಅಲ್ಲಿಂದ ಮಸಾಜ್ ಕೇಂದ್ರಕ್ಕೆ ಕರೆದೊಯ್ಯಲಾಗುವುದು ಎಂದು ತಿಳಿಸಿದ್ದರಿಂದ ತಾನು ಅಲ್ಲಿಗೆ ತೆರಳಿದ್ದೆ.ಅಲ್ಲಿ  ವ್ಯಕ್ತಿಯೊಬ್ಬ ನನ್ನನ್ನು ಭೇಟಿಯಾಗಿ ಕೆಎಸ್‌ಆರ್‌ಟಿಸಿ ಲೇಔಟ್ ನ ಎಸ್‌ಎಲ್‌ವಿ ಟವರ್ಸ್ ಬಳಿ ಕರೆದೊಯ್ದರು. ಅಲ್ಲಿ ಇನ್ನಿಬ್ಬರು ಸೇರಿ  ಜಗದೀಶ್‌ಗೆ ಹಣ ಪಾವತಿಸಲು ಹೇಳಿದರು. ಮತ್ತು ಮೂವರೂ ಜಗದೀಶ್ ಅವರ ಬಳಿಯಿದ್ದ  12,000 ರೂಗಳನ್ನು ಕಿತ್ತುಕೊಂಡು ಕಾರಿಗೆ ಹತ್ತಲು ಹೇಳಿದ್ದಾರೆ. ಕಾರಿನಲ್ಲಿ ಐದು ಮಹಿಳೆಯರು ಕುಳಿತಿದ್ದರು. ಅದರಲ್ಲಿ ಒಬ್ಬಳನ್ನು ಆಯ್ಕೆ ಮಾಡಿಕೊಳ್ಳಲು ತನಗೆ ಹೇಳಲಾಗಿತ್ತು. ಆದರೆ ನಾನು ಅದಕ್ಕೆ ನಿರಾಕರಿಸಿದೆ ಎಂದು ವಿವರಿಸಿದ್ದಾರೆ.

ಅಷ್ಟೇ ಅಲ್ಲದೆ ತಾನು ಹಣ ವಾಪಾಸು ಕೇಳಿದೆ. ಆದರೆ ಆಗ ಮೂವರೂ ಹಣ ಹಿಂದಿರುಗಿಸಲು ನಿರಾಕರಿಸಿದ್ದು ನಮ್ಮ ನಡುವೆ ವಾಗ್ವಾದ ನಡೆಇದ್ತ್ತು. ಕಡೆಗೆ ಅವರು ಪರಾರಿಯಾಗುವ ಮುನ್ನ ತನಗೆ ಬೆದರಿಕೆ ಹಾಕಿದ್ದರೆಂದು ಹೇಳಿದ್ದಾರೆ.

ಅದೇ ದಿನ, ಜಗದೀಶ್ ಅವರು ಜೆಪಿ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋದರು, ಆದರೆ ಅವರ ದೂರನ್ನು ಸ್ವೀಕರಿಸಲು ಪೋಲೀಸರು ನಿರಾಕರಿಸಿದ್ದಾರೆ.ಈ ಕುರಿತು ಪತ್ರಿಕೆಗೆ ಮಾತನಾಡಿದ ಜಗದೀಶ್ “ಜೆಪಿ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಮಯದಲ್ಲಿ ಅಧಿಕಾರಿ ದೀಪಕ್ ಎಂಬ ವ್ಯಕ್ತಿಯನ್ನು ಕರೆದು ನಾನು ಅವರ ವಿರುದ್ಧ ದೂರು ನೀಡಲು ಬಂದಿದ್ದೇನೆ ಎಂದು ತಿಳಿಸಿದೆ. ಅಧಿಕಾರಿ ನಮ್ಮನ್ನು ನೀವೇ ವಿವಾದವನ್ನು ಬಗೆಹರಿಸಿಕೊಳ್ಳಿ ಎಂದು ಕೇಳಿಕೊಂಡಿದ್ದಾರೆ. ಅಲ್ಲದೆ ನಾನೆಷ್ಟು ಬಾರಿ ಪೋಲೀಸ್ ಠಾಣೆಗೆ ಹೋದರೂ ಅದೇ ದೀಪಕ್ ನನ್ನನ್ನು ಭೇಟಿಯಾಗುತ್ತಿದ್ದ." ಎಂದಿದ್ದಾರೆ.

ಇನ್ನು ಜಗದೀಶ್ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರನ್ನು ಭೇಟಿಯಾಗಿ ಮನವಿ ಮಾಡಿದಾಗ ರಾವ್ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದರು ಕಡೆಗೆ ಪೋಲೀಸರಿಗೆ ಜಗದೀಶ್ ದೂರು ಕೊಡುವಾಗಲೂ ಆರೋಪಿಯಿಂದ ಮತ್ತೆರಡು ಸಂದೇಶ ಸ್ವೀಕರಿಸಿದ್ದಾರೆ.ಅದರಲ್ಲಿ ಆರೋಪಿಯು ಜಗದೀಶ್ ಹಣವನ್ನು ಹಿಂದಿರುಗಿಸಲು ಅವನ ಗೂಗಲ್ ಪೇ ಖಾತೆಗೆ ಲಿಂಕ್ ಮಾಡಿರುವ ಮೊಬೈಲ್ ಸಂಖ್ಯೆ ನೀಡುವಂತೆ ವಿನಂತಿಸಿದ್ದಾನೆ ಎಂದು ತಿಳಿದುಬಂದಿದೆ.

SCROLL FOR NEXT