ಶಿಬಾರಾಣಿ ಹಾಗೂ ಆರೋಪಿ ರಾಜು ಪೂಜಾರಿ 
ರಾಜ್ಯ

ಕಲಬುರ್ಗಿಯಲ್ಲೊಂದು ಲವ್ ಸೆಕ್ಸ್ ದೋಖಾ! ಪೋಲೀಸ್ ಅಧಿಕಾರಿ ಮಗನಿಂದ ಪ್ರೇಯಸಿಯ ಬರ್ಬರ ಹತ್ಯೆ!

ಇದು ಕಲಬುರ್ಗಿಯಲ್ಲಿ ನಡೆದ ಲವ್ ಸೆಕ್ಸ್ ದೋಖಾ ಕಥೆ!  ಕಾಲೇಜು ಯುವತಿಯನ್ನು ಪ್ರೀತಿಸುತ್ತಿದ್ದ ಪೋಲೀಸ್ ಅಧಿಕಾರಿ ಮಗನೊಬ್ಬ ಆಕೆ ಗರ್ಭಿಣಿ ಎಂದು ತಿಳಿದ ನಂತರ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.

ಕಲಬುರ್ಗಿ: ಇದು ಕಲಬುರ್ಗಿಯಲ್ಲಿ ನಡೆದ ಲವ್ ಸೆಕ್ಸ್ ದೋಖಾ ಕಥೆ!  ಕಾಲೇಜು ಯುವತಿಯನ್ನು ಪ್ರೀತಿಸುತ್ತಿದ್ದ ಪೋಲೀಸ್ ಅಧಿಕಾರಿ ಮಗನೊಬ್ಬ ಆಕೆ ಗರ್ಭಿಣಿ ಎಂದು ತಿಳಿದ ನಂತರ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.

ಕಲಬುರ್ಗಿಯ ರಾಜಾಪುರದ ರಾಜು ಪೂಜಾರಿ ಎಂಬಾತ ಕಲಬುರ್ಗಿಯ ಕುವೆಂಪು ನಗರ ನಿವಾಸಿ,   ಫೈನ್ ಆರ್ಟ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ  ಶಿಬಾರಾಣಿ(22), ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಅಲ್ಲದೆ ಆಕೆಯ ಜತೆ ದೇಹ ಸಂಪರ್ಕವನ್ನು ಬೆಳೆಸಿದ್ದ. ಆದರೆ ಆಕೆ ಗರ್ಭಿಣಿಯಾಗಿದ್ದಾಳೆಂದು ತಿಳಿದೊಡನೆ ಬಲವಂತದಿಂದ ಅಬಾರ್ಷನ್ ಮಾಡಿಸಿದ್ದ.  ಕಾಲೇಜಿನಲ್ಲಿದ್ದ ಯುವತಿಯನ್ನು ಸೆ. 4ರಂದು ಬಲವಂತವಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಗರ್ಭಫಾತ ಮಾಡಿಸಿದ್ದ. ಅದಕ್ಕಾಗಿ ಯುವತೊಗೆ ತೀವ್ರ ಪ್ರಭಾವ ಬೀರುವ ಇಂಜಕ್ಷನ್ ನೀಡಿದ್ದನೆನ್ನಲಾಗಿದೆ.

ಈ ರೀತಿ ಅತಿಯಾದ ಪರಿಣಾಮ ಬೀರುವ ಹೆವಿ ಡೋಸೇಜ್ ಇಂಜೆಕ್ಷನ್ ನೀಡಿದ ಪರಿಣಾಮ ಯುವತಿ ಗರ್ಭಪಾತದ ವೇಳೆಯೇ ಸಾವನ್ನಪ್ಪಿದ್ದಾಳೆ. ಆಕೆಯ ಶವವನ್ನು ಬರೋಬ್ಬರಿ ಎರಡು ದಿನಗಳ ಕಾಲ ಕಾರಿನಲ್ಲಿಟ್ಟು ಸುತ್ತಾಡಿದ ಆರೋಪಿ ಕಡೆಗೆ ಶವ ಕೊಳೆಯಲು ಪ್ರಾರಂಭವಾಗಿ ವಾಸನೆ ಬರುವಾಗ ತೆಲಂಗಾಣದ ಜಹಿರಬಾದ್ ನ ಪರಗಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿನ ರಸ್ತೆ ಬದಿಯಲ್ಲಿ ಪೆಟ್ರೋಲ್ ಸುರಿದು ಶವವನ್ನು ಸುಟ್ಟು ಹಾಕಿದ್ದಾನೆ.

ಇತ್ತ ಯುವತಿಯ ಪೋಷಕರು ಕಾಲೇಜಿಗೆ ತೆರಳಿದ್ದ ಯುವತಿ ಎರಡು ದಿನಗಳಿಂದ ಕಾಣೆಯಾಗಿರುವುದರಿಂದ ಗಾಬರಿ ಆಗಿದ್ದಾರೆ. ಸೆ.4ರಂದು ಕಾಣೆಯಾದ ಮಗಳ ಸಂಬಂಧ ಸೆ. 6ರಂದು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಪೋಲೀಸರು ರಾಜು ಪೂಜಾರಿಯನ್ನು ವಿಚಾರಣೆ ನಡೆಸಿದಾಗ ತಾನು ಯುವತಿಯನ್ನು ಕೊಂದು ಸುಟ್ಟು ಹಾಕಿರುವುದಾಗಿ ಒಪ್ಪಿಕೊಂಡಿದ್ದಾನೆ.

ಆರೋಪಿ ನೀಡಿದ್ದ ಮಾಹಿತಿ ಮೇಲೆ ಪರಿಶೀಲನೆ ನಡೆಸಿದಾಗ ತೆಲಂಗಾಣದ ಜಹೀರಾಬಾದ್​ ನಲ್ಲಿ,ಯುವತಿಯ ಸುಟ್ಟು ಕರಕಲಾದ ಶವ ದೊರಕಿದೆ. ಕೃತ್ಯಕ್ಕೆ ಕಾಸಗಿ ಆಸ್ಪತ್ರೆಯ ವೈದ್ಯರೂ ಸಹಕರಿಸಿದ್ದಾರೆಂದು ಶಂಕೆ ವ್ಯಕ್ತವಾಗಿದ್ದು ಇದೀಗ ಪೋಲೀಸರು ಯುವತಿ ಗರ್ಭಪಾತ ಂಆಡಿಸಿಕೊಂಡ ಆಸ್ಪತ್ರೆಯ ವೈದ್ಯರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ