ಸಂಗ್ರಹ ಚಿತ್ರ 
ರಾಜ್ಯ

ಸರ್ಪದೋಷ ನಿವಾರಣೆಗಾಗಿ 5 ಬಾರಿ ಸೆಕ್ಸ್ ಮಾಡು ಎಂದ ಕಾಮಿಸ್ವಾಮಿ ಅಂದರ್!

ಸರ್ಪದೊಷ ಪರಿಹಾರವಾಗಬೇಕಾದರೆ ತನ್ನೊಡನೆ ಐದು ಬಾರಿ ಸೆಕ್ಸ್ ಮಾಡಬೇಕೆಂದು ನಂಬಿಸಿ ಯುವತಿಯ ಅತ್ಯಾಚಾರ ನಡೆಸಲು ಯತ್ನಿಸಿದ್ದ  ಕಾಮಿಸ್ವಾಮಿಯ ಪುತ್ರವನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ. ಪ್ರಧಾನಿ ಆರೋಪಿ  ಪರಾರಿಯಾಗಿದ್ದು ಶೋಧ ಕಾರ್ಯ ಮುಂದುವರಿದಿದೆ.

ಬೆಂಗಳೂರು: ಸರ್ಪದೊಷ ಪರಿಹಾರವಾಗಬೇಕಾದರೆ ತನ್ನೊಡನೆ ಐದು ಬಾರಿ ಸೆಕ್ಸ್ ಮಾಡಬೇಕೆಂದು ನಂಬಿಸಿ ಯುವತಿಯ ಅತ್ಯಾಚಾರ ನಡೆಸಲು ಯತ್ನಿಸಿದ್ದ ಕಾಮಿಸ್ವಾಮಿಯ ಪುತ್ರವನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ. ಪ್ರಧಾನಿ ಆರೋಪಿ  ಪರಾರಿಯಾಗಿದ್ದು ಶೋಧ ಕಾರ್ಯ ಮುಂದುವರಿದಿದೆ.

ಘಟನೆ ವಿವರ

ಬಾಣಸವಾಡಿ ಪೋಲೀಸ್ ಠಾಣೆ ವ್ಯಾಪ್ತಿಯ ಸಂಸ್ಥೆಯೊಂದರಲ್ಲಿ ಎಚ್​​ಆರ್​​ ಆಗಿ ಕೆಲಸ ಮಾಡುತ್ತಿದ್ದ ಯುವತಿಗೆ ಕೆಲ ಸಮಸ್ಯೆ ತಲೆದೋರಿದ್ದು ಸಲಹೆ ಪಡೆಯುವುದಕ್ಕಾಗಿ ಗಣೇಶ್ ಎಂಬ ಸ್ವಾಮೀಜಿಯನ್ನು ಭೇಟಿಯಾಗುತ್ತಾಳೆ. ಆಗ ಗಣೇಶ್ ಯುವತಿಗೆ ಸರ್ಪದೊಷವಿರುವುದಾಗಿ ಹೇಳಿದ್ದು  ಪರಿಹರಿಸಲು ಪೂಜೆ ಮಾಡಬೇಕಿದೆ ಎಂದು ಹೇಳಿದ್ದಾನೆ. ಅಲ್ಲದೆ ಪೂಜಾ ಕೆಲಸಕ್ಕಾಗಿ ನಲವತ್ತು ಸಾವಿರ ರು. ನೀಡಬೇಕೆಂದು ಬೇಡಿಕೆ ಇಟ್ಟಿದ್ದಾನೆ.

ಕಳೆದ ಶನಿವಾರ ರಾತ್ರಿ ಹತ್ತರಿಂದ ಪೂಜೆ ಪ್ರಾರಂಭಿಸಿ ಸುಮಾರು ಒಂದು ಗಂಟೆ ಕಾಲ ಪೂಜೆ ಮುಂದುವರಿಸಿದ್ದಾನೆ. ಬಳಿಕ ಪೂಜಾ ಸಲಕರಣೆಗಳನ್ನು ಕ್ಕೆ ಸುಬ್ರಹ್ಮಣ್ಯದಲ್ಲಿ ವಿಸರ್ಜನೆ ಮಾಡಬೇಕು ಎಂದು ಹೇಳಿದ ಗಣೇಶ್ ಯುವತಿಯನ್ನು ಸಹ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕರೆದೊಯ್ಯುತ್ತಾನೆ. ಸಂತ್ರಸ್ಥೆ ಸಹ ಆರೋಪ್ಪಿಯ ಮಾತಿಗೆ ಮರುಳಾಗಿ ಅದೇ ದಿನ ರಾತ್ರಿ ಸುಬ್ರಹ್ಮಣ್ಯಕ್ಕೆ ತೆರಳುತ್ತಾಳೆ. ಅಲ್ಲಿ ಆತ ಮೊದಲೇ ಎರಡು ಕೋಣೆಗಳನ್ನು ಬುಕ್ ಮಾಡಿದ್ದು ಯುವತಿಯೊಡನೆ ಕಾಮಕೇಳಿ ಆಡಲು ಸಿದ್ದತೆ ನಡೆಸಿದ್ದನೆನ್ನಲಾಗಿದೆ.

ಅಲ್ಲಿ ಆತ "ನಿನ್ನ ಗುಪ್ತಾಂಗದಲ್ಲಿ ದೋಷವಿದೆ, ಇದನ್ನು ನಿವಾರಿಸಲು ನನ್ನೊಡನೆ ಐದು ಬಾರಿ ಸಂಭೋಗ ನಡೆಸಬೇಕು. ನನ್ನ ಪುತ್ರನೊಡನೆ ಸಹ ದೇಹ ಹಂಚಿಕೊಳ್ಳಬೇಕು. ಇದನ್ನು ಯಾರೊಡನೆ ತಪ್ಪಿಯೂ ಬಾಯಿ ಬಿಡಬಾರದು" ಎಂದು ಹೇಳಿ ಆಕೆಯನ್ನು ಲೈಂಗಿಕ ಕ್ರಿಯೆಗೆ ಪುಸಲಾಯಿಸಿದ್ದಾನೆ. ಇದನ್ನು ಕಂಡ ಯುವತಿಗೆ ಅನುಮಾನ ಬಂದಿದ್ದು ಆಕೆ ಅದೇನೋ ಸಾಹಸ ಮಾಡಿ ಸುಬ್ರಹ್ಮಣ್ಯದಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ಮರಳಿದ್ದಾಳೆ.

ಬೆಂಗಳೂರಿಗೆ ಆಗಮಿಸಿದ ನಂತರ ಯುವತಿ ಬಾಣಸವಾಡಿ ಪೋಲೀಸರಿಗೆ ದೂರು ಸಲ್ಲಿಸಿದ್ದು ಪೋಲೀಸರು ಗಣೇಶ್ ಮನೆ ಮೇಲೆ ದಾಳಿ ಮಾಡಿ ಆತನ ಪುತ್ರ ಮಣಿಕಂಠನನ್ನು ಬಂಧಿಸಿದ್ದಾರೆ. ಸದ್ಯ ಗಣೇಶ್ ತಲೆಮರೆಸಿಕೊಂಡಿದ್ದು ತೀವ್ರ ಶೋಧ ಮುಂದುವರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!