ರಾಜ್ಯ

ಕಲಬುರಗಿ: ಅಸಮರ್ಪಕ ಡಯಾಲಿಸಿಸ್ ಘಟಕ, 16 ವರ್ಷದ ಬಾಲಕ ದುರ್ಮರಣ

Nagaraja AB

ಕಲಬುರಗಿ: ಇಲ್ಲಿನ ಹಳೆಯ ಜಿಲ್ಲಾಸ್ಪತ್ರೆಯಲ್ಲಿನ  ಡಯಾಲಿಸಿಸ್ ಘಟಕದ ತಾಂತ್ರಿಕ ತೊಂದರೆಯಿಂದಾಗಿ  16 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದು, ಇತರ ಮೂವರು ರೋಗಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ.

ಮೃತನನ್ನು ಶಾಹಬಾದ್ ಪಟ್ಟಣದ ಆಕಾಶ್ ಬಡಿಗೇರ್  ಎಂದು ಗುರುತಿಸಲಾಗಿದೆ. ಗುರಣ್ಣ, ರಾಜೇಂದ್ರ ಹಾಗೂ ಸಿಂಗೊಡಿ ಅವರ ಪರಿಸ್ಥಿತಿ ಗಂಭೀರವಾಗಿದ್ದು, ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಸರ್ಜನ್ ಡಾ. ಶಿವಾನಂದ್ ಸುರ್ಗಾಲಿ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ 14 ಡಯಾಲಿಸಿಸ್  ಹಾಸಿಗೆಗಳಿದ್ದು, ಅವುಗಳಲ್ಲಿ 13 ರೋಗಿಗಳಿಗೆ ಲಭ್ಯವಾಗಿವೆ. ಡಯಾಲಿಸಿಸ್ ರೋಗಿಗಳಿಗೆ ಮೂರು ಪಾಳಿಯಲ್ಲಿ ಉಚಿತವಾಗಿ  ಚಿಕಿತ್ಸೆ ನೀಡಲಾಗುತ್ತಿದೆ, ಬೆಳಗ್ಗೆ ಹಾಗೂ ಎರಡನೇ ಸೆಷನ್ಸ್  ವೇಳೆಗೆ ಯಾವುದೇ ತೊಂದರೆ ಇರಲಿಲ್ಲ ಆದರೆ, 3-30ರಿಂದ 4 ಗಂಟೆ ಸಂದರ್ಭದಲ್ಲಿ ತೊಂದರೆ ಉಂಟಾಯಿತು. ಎಲ್ಲಾ 13 ರೋಗಿಗಳಿಗೂ ಕೆಮ್ಮು, ವಾಂತಿ ಹಾಗೂ ಉಸಿರಾಟದ ಸಮಸ್ಯೆ ಆರಂಭವಾಯಿತು ಆಕಾಶ್ ಸ್ಥಳದಲ್ಲಿಯೇ ಮೃತಪಟ್ಟರು. ಉಳಿದ ಮೂವರನ್ನು ಐಸಿಯು ಹಾಗೂ ಇತರ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ. ಸುರ್ಗಾಲಿ ವಿವರಿಸಿದರು.

ಒಂದೇ ವೇಳೆಯಲ್ಲಿ  ಎಲ್ಲ ರೋಗಿಗಳಿಗೂ ತೊಂದರೆ ಕಾಣಿಸಿಕೊಂಡದ್ದು ಅಪರೂಪದ ಪ್ರಕರಣವಾಗಿದೆ ಎಂದು ಡಾ. ಸುರ್ಗಾಲಿ ಹೇಳುತ್ತಾರೆ.

ಬಿಆರ್ ಎಸ್ ಆರೋಗ್ಯ ಮತ್ತು ಸಂಶೋಧನಾ ಸಂಸ್ಥೆಯ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಡಿಯಲ್ಲಿ ಈ ಯೂನಿಟ್ ಕಾರ್ಯನಿರ್ವಹಿಸುತ್ತಿದ್ದು, ಈಗ ಯಾವುದೇ ಚಿಕಿತ್ಸೆ ನೀಡಲಾಗುತ್ತಿಲ್ಲ. ರೋಗಿಗಳನ್ನು ತಾಲೂಕು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT