ರಾಜ್ಯ

 ಶಿವಮೊಗ್ಗ:ಗಾರ್ಡನ್ ಹೌಸ್ ನಲ್ಲಿ 500 ಬಗೆಯ ಗಿಡಮೂಲಿಕೆ ಸಸ್ಯಗಳನ್ನು ಸಂರಕ್ಷಿಸುತ್ತಿರುವ ಪರಿಸರ ಪ್ರೇಮಿ

Nagaraja AB

ಶಿವಮೊಗ್ಗ: ಪರಿಸರ ಪ್ರೇಮಿ ಬಿ. ವೆಂಕಟಗಿರಿ ಎಂಬವರು ತಮ್ಮ ಮನೆಯಲ್ಲಿಯೇ ಉದ್ಯಾನವನ್ನು ನಿರ್ಮಿಸುವ ಮೂಲಕ 500 ಬಗೆಯ ಗಿಡ ಮೂಲಿಕೆ ಸಸ್ಯಗಳನ್ನು ಸಂರಕ್ಷಿಸುತ್ತಿದ್ದಾರೆ.

 73 ವರ್ಷದ ವೆಂಕಟಗಿರಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡು , ಗಿಡಮೂಲಿಕೆ ಸಸ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.ವೆಂಕಟಗಿರಿ 1500 ಬಗೆಯ ಬೀಜಗಳನ್ನು ಸಂಗ್ರಹಿಸಿದ್ದಾರೆ. ತನ್ನ ಸಾಧನೆಗಳನ್ನು ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಹಂಚಿಕೊಂಡ ಅವರು, ಯುವ ಜನರಲ್ಲಿ ಜ್ಞಾನವನ್ನು ಪಸರಿಸುವ ನಿಟ್ಟಿನಲ್ಲಿ ಈ ಕೆಲಸ ಮಾಡಿದ್ದಾಗಿ ಹೇಳುತ್ತಾರೆ.

ರಾಜ್ಯದಾದ್ಯಂತ ಸಂಚರಿಸಿ ಈ ತಳಿಯನ್ನು ಸಂಗ್ರಹಿಸಿದ್ದೇನೆ. ನವಗ್ರಹವನ, ನಂದನವನ, ನಕ್ಷತ್ರವನ, ಪವಿತ್ರ ವನ, ಅಶ್ವಿನಿ ವನ ಮತ್ತಿತರ ರೀತಿಯಲ್ಲಿ ಗಿಡಮೂಲಿಕೆ ಸಸ್ಯಗಳನ್ನು ಬೆಳೆಸಲಾಗುತ್ತಿದೆ. ಶಾಲಾ, ಕಾಲೇಜುಗಳಿಗೆ ತೆರಳಿ ಗಿಡಮೂಲಿಕೆ ಸಸ್ಯಗಳ ಬಗ್ಗೆ ಪ್ರದರ್ಶನ ಆಯೋಜಿಸುವ ಮೂಲಕ ಯುವ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

SCROLL FOR NEXT