ರಾಜ್ಯ

ವೈದ್ಯಕೀಯ ಸೀಟು ಹೆಸರಲ್ಲಿ ಲಕ್ಷಾಂತರ ರೂಪಾಯಿ ವಂಚನೆ: 11 ಮಂದಿ ಬಂಧನ

Manjula VN

ಬೆಂಗಳೂರು: ವೈದ್ಯಕೀಯ ಸೀಟು ಕೊಡಿಸುವುದಾಗಿ ಲಕ್ಷಾಂತರ ಹಣ ಪಡೆದು ವಂಚಿಸುತ್ತಿದ್ದ ಅಂತಾರಾಜ್ಯದ 11 ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 

ಜಯನಗರ 4ನೇ ಬ್ಲಾಕ್ ನಲ್ಲಿರುವ ಮೆರಿಟ್ ವೈಸ್ ಕನ್ಸಲ್'ಟೆಂಟ್ ಕಂಪನಿ ಮಾಲೀಕ ರಾಹುಲ್, ಈತನ ಸಹಚರರಾದ ಪವನ್ ಕುಮಾರ್ ಮೌನೀಸ್, ನಿಶಾಂತ್, ನಿತಿನ್, ತಿಂಕುಮಂಡಲ್, ಸೀಜು ಡಾನಿಯಲ್, ಸ್ನೇಹಲ್, ಕುನಾಲ್ ಕುಮಾರ್ ಸಿಂಗ್ ಮತ್ತು ಕುಶಾಲ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. 

ಆರೋಪಿಗಳೆಲ್ಲರೂ ಜಾರ್ಖಾಂಡ್, ಪಶ್ಚಿಮ ಬಂಗಾಳ, ಬಿಹಾರ ರಾಜ್ಯದವರಾಗಿದ್ದಾರೆಂದು ತಿಳಿದುಬಂದಿದೆ. 

ಪ್ರಕರಣದ ಪ್ರಮುಖ ಆರೋಪಿಗಳಾದ ಸೌರವ್ ಮತ್ತು ರಂಜಿತ್ ನಾಪತ್ತೆಯಾಗಿದ್ದು, ಇವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಆರೋಪಿಗಳ ಗ್ಯಾಂಗ್ ನಾಲ್ಕೈದು ತಿಂಗಳ ಹಿಂದೆ ನಗರಕ್ಕೆ ಬಂದು ಜಯನಗರದಲ್ಲಿ ಮೆರಿಟ್ ವೈಸ್ ಕನ್ಲಲ್ ಟೆನ್ಸಿ ಸಂಸ್ಥೆ ತೆರೆದಿತ್ತು. ನಿರುದ್ಯೋಗಿ ಎಂಜಿನಿಯರ್ ಮತ್ತು ಪದವೀಧರರನ್ನು ಮಧ್ಯವರ್ತಿಯಾಗಿ ಸೀಟು ಪಡೆಯಬೇಕಿದ್ದವರನ್ನು ಸಂಪರ್ಕ ಮಾಡುತ್ತಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರಾತು ನೀಡಿದ್ದರು. 

ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಉತ್ತರ ಭಾರತದ ಅಭ್ಯರ್ಥಿಗಳ ಮಾಹಿತಿಯನ್ನು ಆನ್ ಲೈನ್ ಮೂಲಕ ಪಡೆದು, ಕೊನೆಯ ದಿನಾಂಕ ಸಮೀಪಿಸುತ್ತಿದ್ದಾಗ ಸಂಪರ್ಕಿಸಿ ಬೆಂಗಳೂರಿನ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ಹೇಳುತ್ತಿದ್ದರು.ಅಭ್ಯರ್ಥಿಗಳು ಇಚ್ಛಿಸುವ ಕಾಲೇಜಿನಲ್ಲೇ ಸೀಟು ಕೊಡಿಸುವುದಾಗಿ ಹೇಳಿ ನಂಬಿಸುತ್ತಿದ್ದರು. ಒಂದು ವೈದ್ಯಕೀಯ ಸೀಟಿಗೆ ರೂ.2 ಲಕ್ಷದಿಂದ 5 ಲವಕ್ಷ ವರೆಗೆ ಹಣ ಪಡೆಯುತ್ತಿದ್ದರು. 

ಇತ್ತೀಚೆಗಷ್ಟೆ ನೀಟ್ ಪರೀಕ್ಷೆ ಬರೆದು ಮುಗಿಸಿದ್ದು ವಿದ್ಯಾರ್ಥಿಗಳನ್ನು ಗಾಳಕ್ಕೆ ಬೀಳಿಸಿಕೊಂಡಿದ್ದರು. ಅದರಲ್ಲೂ ಉತ್ತರ ಭಾರತ ಮೂಲದ ವಿದ್ಯಾರ್ಥಿಗಳೇ ಪ್ರಮುಖ ಗುರಿಯಾಗಿದ್ದರು. 

ಶನಿವಾರ ದಂತವೈದ್ಯ ಕಾಲೇಜಿಗೆ ದಾಖಲಾತಿ ಪಡೆಯಲು ಕೊನೆಯ ದಿನವಾಗಿತ್ತು. ಹೋಟೆಲ್ ನಿಂದ ಎಲ್ಲಾ ವಿದ್ಯಾರ್ಥಿಗಳನ್ನು ಅಂಬೇಡೇಡ್ಕರ್ ಕಾಲೇಜು ಬಳಿ ಕರೆ ತಂದು ಹಣ ಕೀಳಲು ಯತ್ನಿಸಿದ್ದರು. ಈ ಬಗ್ಗೆ ಖಚಿತ ಮಾಹಿತ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು, ಆರೋಪಿಗಳನ್ನು ಬಂಧಿಸಿದ್ದಾರೆ. 

SCROLL FOR NEXT