ರಾಜ್ಯ

ನಳಿನ್ ಕುಮಾರ್ ಸಾಹೇಬ್ರೇ ಎಲ್ಲಿದ್ದೀರಾ..? ದತ್ತು ಗ್ರಾಮದ ಜನರ ಪ್ರಶ್ನೆ

Nagaraja AB

ಮಂಗಳೂರು:ಬಿಜೆಪಿ ರಾಜ್ಯಾಧ್ಯಕ್ಷರು ಆಗಿರುವ  ಸಂಸದ ನಳಿನ್ ಕುಮಾರ್ ಕಟೀಲ್ , ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ದತ್ತು ಪಡೆದಿರುವ ಗ್ರಾಮದಲ್ಲಿ ಅನಾರೋಗ್ಯಪೀಡಿತ ಹಿರಿಯ ವ್ಯಕ್ತಿಯೊಬ್ಬರನ್ನು ಆಸ್ಪತ್ರೆಗೆ ಸೇರಿಸಲು ಕಿಲೋಮೀಟರ್ ದೂರ ಕುಟುಂಬ ಸದಸ್ಯರು ಮರದ ಚೇರ್ ನಲ್ಲಿ ಹೊತೊಯ್ದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬಾಲ್ಪಾ ಗ್ರಾಮ ಪಂಚಾಯಿತಿಯಲ್ಲಿ ಭಾನುವಾರ ಈ ಘಟನೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ಲಾಗ್ ಶಿಪ್ ಕಾರ್ಯಕ್ರಮದಡಿಯಲ್ಲಿ ಈ ಗ್ರಾಮವನ್ನು ಸಂಸದರು ದತ್ತು ಪಡೆದುಕೊಂಡಿದ್ದಾರೆ.

ಹಳೆಯ ಮರದ ಚೇರ್ ನಲ್ಲಿ ವ್ಯಕ್ತಿಯೊಬ್ಬರನ್ನು ಕುಟುಂಬಸ್ಥರು ಹೊತೊಯ್ಯುತ್ತಿರುವ ಪೋಟೋವನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಪಿತ್ತಜನಕಾಂಗ ಸಂಬಂಧಿತ ಕಾಯಿಲೆಯಿಂದಾಗಿ ರಾಮಣ್ಣ ಪೂಜಾರಿ (72) ಆರೋಗ್ಯ ಪರಿಸ್ಥಿತಿ ಗಂಭೀರವಾಗಿತ್ತು. ಅವರು ವಾಸಿಸುತ್ತಿದ್ದ ಸ್ಥಳಕ್ಕೆ ಅಂಬ್ಯುಲೆನ್ಸ್ ಬರಲು ಆಗುತ್ತಿರಲಿಲ್ಲ. ಹಾಗಾಗಿ ಕುಟುಂಬ ಸದಸ್ಯರು ಮರದ ಚೇರ್ ನಲ್ಲಿ ಕಿಲೋ ಮೀಟರ್ ದೂರ ಹೊತೊಯ್ದಿದ್ದಾಗಿ  ಸಂಬಂಧಿ ಸತೀಶ್ ಕೆ ಬಿರ್ವಾ ತಿಳಿಸಿದ್ದಾರೆ.

ಪಾಡ್ಕಿಲಯ ಗ್ರಾಮದಲ್ಲಿ ರಾಮಣ್ಣ ವಾಸಿಸುತ್ತಿದ್ದು,ರಸ್ತೆ ದುರಸ್ಥಿ ಮಾಡಿಸಿಕೊಳ್ಳುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ  ಹಲವು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.ರಾಮಣ್ಣ ಅವರನ್ನು ಈಗ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿರುವುದಾಗಿ ಅವರು ಹೇಳಿದ್ದಾರೆ. 

ಪಾಡ್ಕಿಲಯ ಗ್ರಾಮದಲ್ಲಿ 50 ಗ್ರಾಮಗಳಿವೆ. ಇದು ನಳಿನ್ ಕುಮಾರ್  ಕಟೀಲ್ ಅವರ ಆದರ್ಶ ಗ್ರಾಮ ಯೋಜನೆ ವ್ಯಾಪ್ತಿಗೆ ಬಂದರೂ ಯಾವುದೇ ರಸ್ತೆ ಸಂಪರ್ಕ ವ್ಯವಸ್ಥೆ ಹೊಂದಿಲ್ಲ. ಮಳೆಗಾಲದಲ್ಲಿ ಪರಿಸ್ಥಿತಿ ಹೇಳತೀರದಾಗುತ್ತದೆ.ಯಾವುದೇ ಕೆಲಸ ಮಾಡದ ನಳಿನ್ ಕುಮಾರ್ ಗೆ ನಾಚಿಕೆಯಾಗಬೇಕು,ಆದರೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುಳ್ಳು ಭರವಸೆ ನೀಡುತ್ತಾರೆ ಎಂದು ಇನ್ನಿತರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

 ಬಾಲ್ಪಾ  ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ ರಸ್ತೆಗಳು ಹದಗೆಟ್ಟಿವೆ. ಯಾವುದೇ ಸಮಸ್ಯೆಗಳಿಗೂ ನಳಿನ್ ಕುಮಾರ್ ಕಟೀಲ್ ಸ್ಪಂದಿಸುತ್ತಿಲ್ಲ. ಈ ಪ್ರಕರಣವಾದರೂ ಅವರ ಕಣ್ಣು ತೆರೆಸಬೇಕು ಎಂದು ಮತ್ತೊಬ್ಬರು ಹೇಳುತ್ತಾರೆ.

SCROLL FOR NEXT