ರಾಜ್ಯ

ದಿವಂಗತ ಅನಂತ್ ಕುಮಾರ್ ನೆನೆದು ಭಾವುಕರಾದ ಸಿಎಂ ಯಡಿಯೂರಪ್ಪ

Shilpa D

ಬೆಂಗಳೂರು:  ಬಿಜೆಪಿ ನಾಯಕ ದಿವಂಗತ ಅನಂತ್ ಕುಮಾರ್ ತಮ್ಮ ರಾಜಕೀಯ ಜೀವನದುದ್ದಕ್ಕೂ ಶೋಷಿತರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ಹೇಳಿದ್ದಾರೆ. 

ಬೆಂಗಳೂರಿನ ಜಯನಗರದ ಎನ್ಎಂಕೆಆರ್ ವಿ ಮಹಿಳಾ ಕಾಲೇಜಿನ 'ಮಂಗಳ ಮಂಟಪ ಸಭಾಂಗಣ'ದಲ್ಲಿ ನಡೆದ ಅನಂತಕುಮಾರ್ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು.  ಬಿಜೆಪಿ ಪಕ್ಷದಲ್ಲಿ ಹಾಗೂ ಸರಕಾರದಲ್ಲಿ ಮಹತ್ವದ ಹುದ್ದೆಯನ್ನು ಅಲಂಕರಿಸಿದ್ದ ಅನಂತ್ ಕುಮಾರ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಬಡವರು ಹಾಗೂ ಶೋಷಿತರ ಪರವಾಗಿದ್ದರು. ಬಡವರಿಗೆ ಕಡಿಮೆ ದರದಲ್ಲಿ ಔಷಧಿ ದೊರೆಯುವಂತೆ ಮಾಡಿದ ಜನ ಔಷಧಿ ಯೋಜನೆ ಜಾರಿಯ ಹಿಂದೆ ದಿವಂಗತ ಅನಂತ್ ಕುಮಾರ್ ಅವರ ಪಾತ್ರ ಮಹತ್ವದ್ದಾಗಿತ್ತು ಎಂದು ಜೆ ಪಿ ನಡ್ಡಾ ಹೇಳಿದ್ದಾರೆ. ಈ ಯೋಜನೆ ಜಾರಿಗೆ ಬಂದ ಪರಿಣಾಮ 1000 ರೂಪಾಯಿ ಮೌಲ್ಯದ ಔಷಧಗಳು 100 ರೂಪಾಯಿಗೆ ಬಡವರ ಕೈಗೆಟಕುವಂತಾಯಿತು ಎಂದರು. 

ಅನಂತ್ ಕುಮಾರ್ ಅವರನ್ನು ನೆನೆದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಭಾವುಕರಾದರು, ಕಣ್ಣೀರು ಒರೆಸಿಕೊಂಡು ಭಾಷಣ ಮಾಡಿದ ಮುಖ್ಯಮಂತ್ರಿ ಪಕ್ಷ ಕಟ್ಟಿದ ಧೀಮಂತ ಅವರು ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಅನಂತ್ ಕುಮಾರ್ ಪಾತ್ರ ಹಿರಿದು. ಅನಂತ್ ಕುಮಾರ್ ಇನ್ನೂ ಬಹಳ ವರ್ಷ ಬದುಕಬೇಕಿತ್ತು ಕೇಂದ್ರದಲ್ಲಿ ಬಹಳ ವರ್ಷ ಸಚಿವರಾಗಿ ಇದ್ದವರು. ನನಗೆ ಐದು‌ ನಿಮಿಷದಲ್ಲಿ ಅದ್ಭುತವಾಗಿ ಭಾಷಣ ತಯಾರಿಸಿಕೊಡ್ತಿದ್ರು ಅನಂತ್‌ಕುಮಾರ್ ನೆನಪಿನ ಶಕ್ತಿಗೆ ಸರಿ ಸಾಟಿ ಇಲ್ಲ ಬೆಂಗಳೂರಿನ ಅಭಿವೃದ್ಧಿಯ ಕನಸು ಕಂಡವರು, ಸಾಕಾರ ಮಾಡಿದವರು.

ಬೆಂಗಳೂರಿನಲ್ಲಿ ಸಿಪೆಟ್ ಸಂಸ್ಥೆ‌ ಮೂಲಕ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ನಿರ್ಮಾಣವಾಗ್ತಿದೆ ಅದಕ್ಕೆ ದಿವಂಗತ ಅನಂತ್ ಕುಮಾರ್ ಹೆಸರಿಡಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದರು. ಕೇಂದ್ರ ಸಚಿವ ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಜಗದೀಶ್ ಶೆಟ್ಟರ್, ವಿ.ಸೋಮಣ್ಣ, ವಿ.ಮುರಳೀಧರ್ ಮತ್ತಿತರರು ಭಾಗಿಯಾಗಿದ್ದಾರೆ. 

SCROLL FOR NEXT