ಸಂಸದ ನಾರಾಯಣ ಸ್ವಾಮಿ 
ರಾಜ್ಯ

ಚಿತ್ರದುರ್ಗ ಸಂಸದ ಆನೇಕಲ್ ನಾರಾಯಣಸ್ವಾಮಿಗೆ ಅದ್ಧೂರಿ ಸ್ವಾಗತ

ತುಮಕೂರು: ದಲಿತರಿಗೆ ಪ್ರವೇಶ ನಿರಾಕರಿಸಿ ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದ ಗ್ರಾಮಕ್ಕೆ ಇಂದು ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಅದ್ಧೂರಿ ಸ್ವಾಗತದೊಂದಿಗೆ ಪ್ರವೇಶಿಸಿದ್ದಾರೆ.

ತುಮಕೂರು: ದಲಿತರಿಗೆ ಪ್ರವೇಶ ನಿರಾಕರಿಸಿ ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದ ಗ್ರಾಮಕ್ಕೆ ಇಂದು ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಅದ್ಧೂರಿ ಸ್ವಾಗತದೊಂದಿಗೆ ಪ್ರವೇಶಿಸಿದ್ದಾರೆ.

ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಈ ಹಿಂದೆ ಸಂಸದರು ದಲಿತ ಸಮುದಾಯಕ್ಕೆ ಸೇರಿದವರೆಂದು ಗ್ರಾಮದ ಒಳಗೆ ಪ್ರವೇಶಿಸಲು ಗ್ರಾಮಸ್ಥರು ನಿರಾಕರಿಸಿದ್ದರು. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಹಲವು ಸ್ವಾಮೀಜಿಗಳು ಸಹ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಇಂದು ಗೊಲ್ಲರಹಟ್ಟಿಗೆ ಸಂಸದ ನಾರಾಯಣಸ್ವಾಮಿಯವರನ್ನು ಆಹ್ವಾನಿಸಿ, ಅದ್ಧೂರಿ ಸ್ವಾಗತ ಕಾರ್ಯಕ್ರಮ ನಡೆಸಲಾಯಿತು.

ನಾರಾಯಣ ಸ್ವಾಮಿ ಅವರ ಜೊತೆ ಹಿರಿಯೂರು ಶಾಸಕಿ ಹಾಗೂ ಗೊಲ್ಲ ಸಮುದಾಯದ ನಾಯಕಿ ಪೂರ್ಣಿಮಾ ಇದ್ದರು, 

ದ್ವೇಷ ಹುಟ್ಟಿಸುವ ಕೆಲಸ ಆಗುತ್ತಿದೆ. ಈ ಬೆಳವಣಿಗೆ ದೇಶಕ್ಕೆ ಕಂಟಕ. ಹೀಗಾಗಿ ಸ್ವಾಮೀಜಿಗಳ ಬಳಿ ಮಾತನಾಡಿದ್ದೆ. ಸಮಾಜದ ನಡುವೆ ಇಂತಹ ಕಂದಕ ನೋಡಿಕೊಂಡು ಇರುವವರು ನಿಜವಾದ ಅಪರಾಧಿ. ಅಂಥ ಸಮಾಜವನ್ನು ಎಚ್ಚರಿಸುವವನೇ ನಿಜವಾದ ದಾರ್ಶನಿಕ, ಹಿಂದುಳಿದ ವರ್ಗಗಳಿಗೆ  ಸಾಮಾಜಿಕ ನ್ಯಾಯ ಒದಗಿಸುವುದಾಗಿ ತಿಳಿಸಿದ್ದಾರೆ. 

ನಿಜವಾದ ಸ್ವಾಮೀಜಿ. ಈ ಘಟನೆಯಿಂದ ಗೊಲ್ಲ ಸಮುದಾಯಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಈ ಗ್ರಾಮದ ಹಿರಿಯರಿಗೆ ವಂದಿಸುತ್ತೇನೆ. ದೇಶ ಕಟ್ಟಲು ಎಲ್ಲರ ಸಹಕಾರ ಬೇಕು. ಮೋದಿ ಅಥವಾ ಅಮಿತ್ ಶಾ ಮಾತ್ರ ದೇಶ ಕಟ್ಟಿಲ್ಲ ಅಥವಾ ಇಂದಿರಾ ಗಾಂಧಿ ಮಾತ್ರ ದೇಶ ಕಟ್ಟಿಲ್ಲ. ದೇಶದ 120 ಕೋಟಿ ಜನರು ದೇಶ ಕಟ್ಟಲು ಪಾಲುದಾರರು ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

CM ಕುರ್ಚಿ ಕಸರತ್ತು: ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ, ರಾಹುಲ್-ಸೋನಿಯಾ ಜೊತೆ ಚರ್ಚಿಸಿ ಗೊಂದಲ ಬಗೆಹರಿಸುವೆ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಸಿದ್ದುಗೆ ಪರೋಕ್ಷ ಟಾಂಗ್ ಕೊಟ್ಟರೇ ಡಿಕೆಶಿ..?

ಮೊದಲು ಪರಮೇಶ್ವರ್ ಕೂಲಿ ಚುಕ್ತಾ ಮಾಡಲಿ: ನಂತರ ವಿಧಾನಸಭೆ ವಿಸರ್ಜಿಸಿ ಡಿಕೆಶಿ ನೇತೃತ್ವದಲ್ಲೇ ಚುನಾವಣೆಗೆ ಹೋಗೋಣ!

SCROLL FOR NEXT