ರಾಜ್ಯ

ಟಿಡಿಆರ್ ಹಗರಣ; ಎಸ್ಐಟಿ ರಚನೆ ಕುರಿತ ಏಕಸದಸ್ಯ ಪೀಠದ ಆದೇಶ ರದ್ದು

Raghavendra Adiga

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರದ (ಬಿಬಿಎಂಪಿ) ವ್ಯಾಪ್ತಿಯ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ಮತ್ತು ಸ್ವಾಧೀನಾನುಭವ ಪತ್ರಗಳ ‌(ಒಸಿ) ಕುರಿತ ದೂರುಗಳ ತನಿಖೆತೆ ಎಸ್.ಪಿ ಅಬ್ದುಲ್ ಅಹದ್ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ನಿರ್ದೇಶಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ವಿಭಾಗೀಯ ಪೀಠ ರದ್ದುಪಡಿಸಿದೆ.

ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಏಕಸದಸ್ಯ ಪೀಠದ ಆದೇಶವನ್ನು ಭಾಗಶಃ ಪುರಸ್ಕರಿಸಿದೆ. 

ಟಿಡಿಆರ್ ಪ್ರಕರಣವು ಗಂಭೀರ ಸ್ವರೂಪದ್ದಾಗಿದ್ದು, ಈ ಪ್ರಕರಣದ ತನಿಖೆಯನ್ನು ಎಸಿಬಿ ಅವರೇ ನಡೆಸಲಿ. ಹಾಗೇ ತನಿಖಾಧಿಕಾರಿ ಯಾರಾಗಬೇಕೆಂಬುದನ್ನು ಎಸಿಬಿ ಐಜಿಪಿ ನಿರ್ಧಾರ ಮಾಡಲಿ ಎಂದು ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ.
 

SCROLL FOR NEXT