ಅಮಗಾಂವ್ ಭೂಪಟ 
ರಾಜ್ಯ

ದಕ್ಷಿಣದ ಚಿರಾಪುಂಜಿ ಯಾವುದು? ಪೈಪೋಟಿ ನೀಡುತ್ತಿದೆ ಬೆಳಗಾವಿಯ ಅಮಗಾಂವ್ ಗ್ರಾಮ!

ದಕ್ಷಿಣದ ಚಿರಾಪುಂಜಿ ಎಂದು ಖ್ಯಾತಿ ಗಳಿಸಿರುವ ಆಗುಂಬೆ ಜೊತೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಅಮಗಾಂವ್ ಗ್ರಾಮ ಸ್ಪರ್ಧೆಯೊಡ್ಡುತ್ತಿದೆ. 

ಬೆಳಗಾವಿ: ದಕ್ಷಿಣದ ಚಿರಾಪುಂಜಿ ಎಂದು ಖ್ಯಾತಿ ಗಳಿಸಿರುವ ಆಗುಂಬೆ ಜೊತೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಅಮಗಾಂವ್ ಗ್ರಾಮ ಸ್ಪರ್ಧೆಯೊಡ್ಡುತ್ತಿದೆ. 


2006ರಿಂದ ಅಮಗಾಂವ್ ಮಳೆ ಮಾಪನ ಕೇಂದ್ರದಲ್ಲಿ ಎರಡು ಬಾರಿ ಸರಾಸರಿ 10 ಸಾವಿರ ಮಿಲಿ ಮೀಟರ್ ಮಳೆ ಸುರಿದಿದೆ. ಈ ವರ್ಷ ಆಗಸ್ಟ್ ತಿಂಗಳ ಅಂತ್ಯದವರೆಗೆ 7 ಸಾವಿರದ 833 ಮಿಲಿ ಮೀಟರ್ ನಷ್ಟು ಮಳೆಯಾಗಿದೆ. ಸೆಪ್ಟೆಂಬರ್ ತಿಂಗಳ ಮಳೆಯ ಪ್ರಮಾಣದ ವರದಿ ಇನ್ನೂ ತಾಲ್ಲೂಕು ಕಚೇರಿಗೆ ಸಲ್ಲಿಕೆಯಾಗಿಲ್ಲ.


ಪಶ್ಚಿಮ ಘಟ್ಟದ ದಟ್ಟ ಅರಣ್ಯದ ನಡುವೆ ಅಮಗಾಂವ್ ಗ್ರಾಮವಿದ್ದು ಬೆಳಗಾವಿಯಿಂದ 31 ಕಿಲೋ ಮೀಟರ್ ದೂರದಲ್ಲಿದೆ. ಶಿವಮೊಗ್ಗ ಜಿಲ್ಲೆಯ ಆಗುಂಬೆ ಮತ್ತು ಹುಳಿಕಲ್ ನಂತರ ಕರ್ನಾಟಕದ ಮೂರನೇ ಅತ್ಯಂತ ತೇವ ಪ್ರದೇಶವೆನಿಸಿಕೊಂಡಿದೆ.


ಇನ್ನೆರಡು ದಿನಗಳಲ್ಲಿ ಸೆಪ್ಟೆಂಬರ್ 25ರವರೆಗಿನ ಮಳೆಯ ಪ್ರಮಾಣದ ವರದಿ ಸಿಗಲಿದೆ. ಈ ವರ್ಷ ಇಲ್ಲಿ ಹೊಸ ಮಳೆಯ ದಾಖಲೆಯಾಗಲಿದ್ದು ಅಮಗಾಂವ್ ನಲ್ಲಿ ಭಾರೀ ಮಳೆ ಸುರಿದಿದೆ. 10 ಸಾವಿರಕ್ಕೂ ಅಧಿಕ ಮಿಲಿ ಮೀಟರ್ ದಾಖಲೆಯ ಗಡಿ ದಾಟಲಿದೆ ಎನ್ನುತ್ತಾರೆ ತಹಶಿಲ್ದಾರ್ ಶಿವಾನಂದ ಉಳ್ಳಾಗಡ್ಡಿ.


2010ರಲ್ಲಿ ಅಮಗಾಂವ್ ಗ್ರಾಮದಲ್ಲಿ 10 ಸಾವಿರದ 68 ಮಿಲಿ ಮೀಟರ್, 2011ರಲ್ಲಿ 9 ಸಾವಿರದ 368 ಮಿಲಿ ಮೀಟರ್ ನಷ್ಟು ಮಳೆಯಾಗಿತ್ತು. ಆ ವರ್ಷ ಆಗುಂಬೆ ಮತ್ತು ಹುಳಿಕಲ್ ಮಳೆ ಮಾಪನ ಕೇಂದ್ರಗಳಲ್ಲಿ 6 ಸಾವಿರದಿಂದ 7 ಸಾವಿರ ಮಿಲಿ ಮೀಟರ್ ಮಳೆ ದಾಖಲಾಗಿದೆ. ಕಳೆದ 10 ವರ್ಷಗಳಲ್ಲಿ ಅಮಗಾಂವ್ ಆಗುಂಬೆಯ ದಾಖಲೆಯನ್ನು ಎರಡು ಬಾರಿ ಮುರಿದಿದೆ. ಈ ವರ್ಷ ಈಗಾಗಲೇ ಅಮಗಾಂವ್ ನಲ್ಲಿ  7ಸಾವಿರದ 833 ಮಿಲಿ ಮೀಟರ್ ಮಳೆಯಾಗಿದೆ.


ಭಾರೀ ಮಳೆಯಿಂದಾಗಿ ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟು ಹೋಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಖ್ಯಮಂತ್ರಿ ಬದಲಾವಣೆ, ದಲಿತ ಸಿಎಂ ಚರ್ಚೆ ಬಗ್ಗೆ ಡಿ.ಕೆ ಶಿವಕುಮಾರ್ ಹೇಳಿದ್ದೇನು?

ಮತ್ತೊಂದು 'ಮಹಾ' ಶರಣಾಗತಿ: ಒಟ್ಟಾರೆ 51 ನಕ್ಸಲರು ಶರಣು; 20 ನಕ್ಸಲರ ಮೇಲೆ ಒಟ್ಟು 6.6 ಮಿಲಿಯನ್ ಬಹುಮಾನ

'ವನ್ಯ ಜೀವಿಗಳಿಗೆ ತೊಂದರೆ..' 'ಕೊನೆಯ ಸಫಾರಿ ಕಡಿತ': ಸಚಿವ ಈಶ್ವರ್ ಖಂಡ್ರೆ ಮಹತ್ವದ ಆದೇಶ

ಟನಲ್ ಯೋಜನೆ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಅಂದ್ಕೊಂಡಿದ್ದೆ, ಕಾರಿಲ್ಲದೇ ಮದುವೆಯಾಗದವರ ಸಮಸ್ಯೆ ಪರಿಹಾರಕ್ಕೆ ಅಂತ ಗೊತ್ತಿರ್ಲಿಲ್ಲ: DKS ಹೇಳಿಕೆಗೆ ತೇಜಸ್ವಿ ವ್ಯಂಗ್ಯ

ಶುಕ್ರವಾರ ತೆಲಂಗಾಣ ನೂತನ ಸಚಿವರಾಗಿ ಮಾಜಿ ಕ್ರಿಕೆಟಿಗ ಅಜರುದ್ದೀನ್ ಪ್ರಮಾಣವಚನ?

SCROLL FOR NEXT