ರಾಜ್ಯ

ನಾಳೆಯೇ ಬಿಬಿಎಂಪಿ ಮೇಯರ್ ಚುನಾವಣೆ, ವೇಳಾಪಟ್ಟಿ ಪ್ರಕಟ: ಗೊಂದಲಕ್ಕೆ ತೆರೆ

Lingaraj Badiger

ಬೆಂಗಳೂರು: ಬಿಜೆಪಿ ಅಭ್ಯರ್ಥಿಯ ಆಯ್ಕೆ ಗೊಂದಲದ ನಡುವೆಯೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನಿಗದಿಯಂತೆ ಅ. 31ರಂದು ನಡೆಯಲಿದೆ.

ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯ ಹೊಣೆ ಹೊತ್ತಿರುವ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಅವರು ಸೋಮವಾರ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿದ್ದಾರೆ.

ಮೇಯರ್ ಚುನಾವಣೆಯನ್ನು 45 ದಿನಗಳ ಕಾಲ ಮುಂದೂಡುವಂತೆ ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿಗೆ ಪತ್ರ ಬರೆದಿದ್ದರಿಂದ ಉಂಟಾಗಿರುವ ಗೊಂದಲಕ್ಕೆ ಇಂದು ತೆರೆ ಎಳೆಯಲಾಗಿದೆ.
  
ಅ.1ರ ಮಂಗಳವಾರ ಬೆಳಗ್ಗೆ 8ರಿಂದ 9.30ರವರೆಗೆ ಮೇಯರ್ ಹಾಗೂ ಉಪಮೇಯರ್ ಹುದ್ದೆಗೆ ಸ್ಪರ್ಧಿಸುವವರ ನಾಮಪತ್ರ ಸಲ್ಲಿಕೆಗೆ ಗಡುವು ನಿಗದಿಪಡಿಸಲಾಗಿದೆ. 9.30ರಿಂದ 11ರವರೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 11.30ರ ನಂತರ ಚುನಾವಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. 

ಇದಕ್ಕೂ ಮುನ್ನ ಮೇಯರ್ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ವಿಫಲವಾಗಿರುವ ಬಿಜೆಪಿ ಸರ್ಕಾರ ಚುನಾವಣೆಯನ್ನೇ ಮುಂದೂಡಲು ಮುಂದಾಗಿತ್ತು.
  
ಈ ಸಂಬಂಧ ಸರ್ಕಾರ ಪ್ರಾದೇಶಿಕ ಆಯುಕ್ತ ಹಾಗೂ ಮೇಯರ್, ಉಪಮೇಯರ್ ಚುನಾವಣಾ ಉಸ್ತುವಾರಿ ಹರ್ಷಗುಪ್ತ ಅವರಿಗೆ ಪತ್ರ ಬರೆದಿದ್ದು, ಅ. 1ರಂದು ನಿಗದಿಯಾಗಿರುವ ಚುನಾವಣೆಯನ್ನು 45 ದಿನಗಳ ಕಾಲ ಮುಂದೂಡುವಂತೆ ಸೂಚಿಸಿತ್ತು. ಆದರೆ, ಇದನ್ನು ಆಯುಕ್ತರು ನಿರಾಕರಿಸಿದ್ದಾರೆ.

SCROLL FOR NEXT