ರಾಜ್ಯ

ರೈತರಿಂದ ಹಾಲು ಖರೀದಿಸಲು ಬಮುಲ್ ನಿರ್ಧಾರ

Sumana Upadhyaya

ಬೆಂಗಳೂರು: ಬೆಂಗಳೂರು ನಗರ, ಗ್ರಾಮಾಂತರ, ಕನಕಪುರ ಜಿಲ್ಲೆಯ ಗ್ರಾಹಕರಿಗೆ ಶುಭಸುದ್ದಿ. ಈ ಭಾಗದ ಉತ್ಪಾದಕರಿಗೆ ಯಾವುದೇ ತೊಂದರೆಯುಂಟಾಗದಂತೆ ತಡೆಯಲು ರೈತರಿಂದ ಹಾಲು ಖರೀದಿಸಲು ಬಮೂಲ್(ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕನಕಪುರ, ರಾಮನಗರ ಹಾಲು ಉತ್ಪಾದಕರ ಒಕ್ಕೂಟ) ನಿರ್ಧರಿಸಿದೆ.

ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷ ನರಸಿಂಹ ಮೂರ್ತಿ ಮಾತನಾಡಿ, ಕೊರೋನಾ ವೈರಸ್ ಹರಡದಂತೆ ತಡೆಯಲು ಕೇಂದ್ರ ಸರ್ಕಾರ ಲಾಕ್ ಡೌನ್ ವಿಧಿಸಿರುವ ಹಿನ್ನೆಲೆ, ಹೋಟೆಲ್, ಹಾಸ್ಟೆಲ್ ಇತರ ಕಾರ್ಯನಿರ್ವಹಿಸದ ಹಿನ್ನೆಲೆ 1.5 ಲಕ್ಷ ಲೀಟರ್ ಹಾಲು ಹಾಗೂ 40 ಸಾವಿರ ಲೀಟರ್ ಮೊಸರು ಬಳಕೆ ಕಡಿಮೆಯಾಗಿದೆ. ಇದರಿಂದ ಬಮೂಲ್ ಸಂಸ್ಥೆಗೆ ನಿತ್ಯ 10 ಲಕ್ಷ ರೂಪಾಯಿ ನಷ್ಟ ಉಂಟಾಗುತ್ತಿದೆ. ಆದರೂ ರೈತರಿಂದ ಹಾಲನ್ನು ಖರೀದಿಸಲಾಗುತ್ತಿದೆ. ಮುಂದೆಯೂ ಖರೀದಿಸಲಾಗುವುದು. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಅವರು ತಿಳಿಸಿದರು.

ಹಾಲು ಸಿಗದಿದ್ದ ಸಂದರ್ಭದಲ್ಲಿ ರೂಟ್ ಏಜೆಂಟ್ ಗಳ ನಂಬರ್ ಗಳನ್ನು ಬಮುಲ್ ವೆಬ್ ಸೆಟ್ ನಲ್ಲಿ ಹಾಕಲಾಗಿದೆ. ಹಾಲಿನ ಕೊರತೆ ಉಂಟಾದರೆ ಆ ಭಾಗದ ಏಜೆಂಟ್ ಗಳಿಗೆ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದರು.

ಹೆಚ್ಚುವರಿಯಾಗಿ ಉಳಿಯುವ ಹಾಲನ್ನು ಕನಕಪುರ ಹಾಲಿನ ಪುಡಿ ಘಟಕ ಹಾಗೂ ಹೊರ ರಾಜ್ಯಗಳಿಗೂ ಹಾಲು ಕಳಿಸಲಾಗುತ್ತಿದೆ.

ತೃಪ್ತಿ ಮಾದರಿಯ ಹಾಲನ್ನ ಬಿಡುಗಡೆ ಮಾಡಲು ನಿರ್ಧಾರ: ಗುಡ್ ಲೈಫ್ ಹಾಲಿಗಿಂತ ಕಡಿಮೆ ದರವಿರುವ ತೃಪ್ತಿ ಎಂಬ ಮಾದರಿಯ ಹಾಲು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಅರ್ಧ ಲೀಟರ್ ಹಾಲಿಗೆ ೨೩ ರೂಪಾಯಿ ದರ ನಿಗದಿ ಮಾಡಲಾಗಿದೆ. ಮೂರು ಲೇಯರ್ ಇರುವ ಈ ಹಾಲನ್ನ ೩ ತಿಂಗಳು ಶೇಖರಣೆ ಮಾಡಬಹುದು ಎಂದರು.

SCROLL FOR NEXT