ರಾಜ್ಯ

ಲಾಕ್ ಡೌನ್ ಉಲ್ಲಂಘಿಸಿದ ಮೈಸೂರು ಜನತೆಗೆ ನೊಟೀಸ್ ಜಾರಿ

Shilpa D

ಮೈಸೂರು: ಲಾಕ್ ಡೌನ್ ನಿಯಮ ಉಲ್ಲಂಘಿಸಿ ಸುಖಾ ಸುಮ್ಮನೆ ತಿರುಗಾಡುತ್ತಿದ್ದವರ ವಿರುದ್ಧ ಕ್ರಮ ಕೈಗೊಂಡಿರುವ ಮೈಸೂರು ಪೊಲೀಸರು 303 ವಾಹನಗಳನ್ನು ಸೀಜ್ ಮಾಡಿದ್ದಾರೆ. 

ಅದರಲ್ಲಿ 285 ದ್ವಿಚಕ್ರ ವಾಹನಗಳು ಹಾಗೂ ನಾಲ್ಕು ಕಾರು ಮತ್ತು 10 ಆಟೋರಿಕ್ಷಾಗಳು ಸೇರಿವೆ,  ನರಸಿಂಹರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ವಾಹನ ಸೀಜ್ ಮಾಡಲಾಗಿದೆ. ಸಿದ್ದಾರ್ಥ ಟ್ರಾಫಿಕ್ ಪೊಲೀಸರು 47 ಬೈಕ್ ಹಾಗೂ ನಾಲ್ಕು ಕಾರು ಸೀಜ್ ಮಾಡಿದ್ದಾರೆ.

ಲಾಕ್ ಡೌನ್ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಪೊಲೀಸರು ವಾಹನ ಮಾಲಿಕರಿಗೆ ನೊಟೀಸ್ ಜಾರಿ ಮಾಡುತ್ತಿದ್ದಾರೆ, ಸಿಸಿಟಿವ ಕ್ಯಾಮೆರಾ ದೃಶ್ಯಗಳ ಮೂಲಕ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ.

ಯಾವ ಕಾರಣಕ್ಕಾಗಿ ಲಾಕ್ ಡೌನ್ ಉಲ್ಲಂಘಿಸಿದ್ದೀರಿ ಎಂಬ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿರುವುದಾಗಿ ಡಿಸಿಪಿ ಪ್ರಕಾಶ್ ಗೌಡ ತಿಳಿಸಿದ್ದಾರೆ. ನಿಗದಿತ ಸಮಯದೊಳಗೆ ಸರಿಯಾದ ಕಾರಣದೊಂದಿಗೆ ವಿವರಣೆ ನೀಡದಿದ್ದರೇ ಐಪಿಸಿ 188,269 ಮತ್ತು 270 ಸೆಕ್ಷನ್ ಅಡಿ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

SCROLL FOR NEXT