ಟಿ.ಎಲ್.ರಾಮಸ್ವಾಮಿ 
ರಾಜ್ಯ

ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಛಾಯಾಗ್ರಾಹಕ ಟಿ.ಎಲ್.ರಾಮಸ್ವಾಮಿ ವಿಧಿವಶ

ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಬೆಂಗಳೂರಿನ ಹಿರಿಯ ಛಾಯಾಗ್ರಾಹಕರಾಗಿದ್ದ  ಟಿ.ಎಲ್.ರಾಮಸ್ವಾಮಿ(89) ವಿಧಿವಶರಾಗಿದ್ದಾರೆ. ಆರು ದಶಕಗಳ ಕಾಲ ಪತ್ರಿಕಾ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ್ದ ರಾಮಸ್ವಾಮಿ  ವಯೋಸಹಜ ಕಾಯಿಲೆಯಿಂದ ಶುಕ್ರವಾರ ಬೆಳಿಗ್ಗೆ ನಿಧನರಾದರು.

ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಬೆಂಗಳೂರಿನ ಹಿರಿಯ ಛಾಯಾಗ್ರಾಹಕರಾಗಿದ್ದ  ಟಿ.ಎಲ್.ರಾಮಸ್ವಾಮಿ(89) ವಿಧಿವಶರಾಗಿದ್ದಾರೆ. ಆರು ದಶಕಗಳ ಕಾಲ ಪತ್ರಿಕಾ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ್ದ ರಾಮಸ್ವಾಮಿ  ವಯೋಸಹಜ ಕಾಯಿಲೆಯಿಂದ ಶುಕ್ರವಾರ ಬೆಳಿಗ್ಗೆ ನಿಧನರಾದರು.

ನಗರದ ಬನ್ನೇರುಘಟ್ಟ ರಸ್ತೆ ಅರೆಕೆರೆ ಸಮೀಪದ ಅವರ ಪುತ್ರನ ಮನೆಯಲ್ಲಿ ವಾಸವಿದ್ದ ರಾಮಸ್ವಾಮಿ ಪತ್ರಿಕಾ ಛಾಯಾಗ್ರಾಹಕರಾಗಿ ದೇಶ, ವಿದೇಶಗಳಲ್ಲಿ ಗೌರವಾದರಗಳಿಗೆ  ಪಾತ್ರವಾಗಿದ್ದರು.

ಡೆಕ್ಕನ್ ಹೆರಾಲ್ಡ್-ಪ್ರಜಾವಾಣಿ ಬಳಗದಲ್ಲಿ ಸುಮಾರು ಮೂರು ದಶಕಕ್ಕೂ ಹೆಚ್ಚು ಕಾಲ ಚಾಯಾಗಾಹಕರಾಗಿ ಸೇವೆ ಸಲ್ಲಿಸಿದ್ದ ರಾಮಸ್ವಾಮಿ ಆ ನಂತರದಲ್ಲಿ ಮುಕ್ತ ಪತ್ರಿಕಾ ಛಾಯಾಗ್ರಾಹಕರಾಗಿ (ಫ್ರೀ ಲ್ಯಾನ್ಸ್) ಸಹ ಕೆಲಸ ಮಾಡಿದ್ದರು. ಮೈಸೂರು ನ್ಯೂಸ್ ಫೋಟೋಸ್ ಎಂಬ ಸಂಸ್ಥೆ ಸ್ಥಾಪಿಸಿದ್ದ ರಾಮಸ್ವಾಮಿ ಜಮ್ಮು ಹಾಗೂ ಪಂಜಾಬಿನ ಗಡಿಯಲ್ಲಿ ಯುದ್ಧ ವರದಿಯ ತರಬೇತಿಯನ್ನೂ ಪಡೆಇದ್ದರು.

ರಾಮಸ್ವಾಮಿಯವರ ಪ್ರಖ್ಯಾತಿಯನ್ನು, ಪತ್ರಿಕಾ ಕ್ಷೇತ್ರಕ್ಕೆ ಸೇವೆಯನ್ನೂ ಗುರುತಿಸಿ ಅವರಿಗೆ ಮಾದ್ಯಮ ಅಕಾಡಮಿ, ರಾಜ್ಯೋತ್ಸವ ಪ್ರಶಸ್ತಿ ಸೇರಿ ಅನೇಕ ಗೌರವಗಳು ಲಭಿಸಿದ್ದವು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT