ಬಾಗಲಕೋಟೆ 
ರಾಜ್ಯ

ಬಾಗಲಕೋಟೆ ವ್ಯಕ್ತಿ ಕೊರೋನಾ ಸೋಂಕು ತಗುಲಿದ್ದು ಹೇಗೆ: ರಹಸ್ಯ ಬೇಧಿಸಿದ ಜಿಲ್ಲಾಡಳಿತ

ವಿದೇಶ ಪ್ರವಾಸ ಮಾಡದಿದ್ದರೂ ವ್ಯಕ್ತಿ ಕೊರೋನಾ ಸೋಂಕಿಗೆ ಹೇಗೆ ಬಲಿಯಾದ ಎಂಬ ಪ್ರಶ್ನೆಗೆ ಬಾಗಲಕೋಟೆ ಜಿಲ್ಲಾಡಳಿತ ಕೊನೆಗೂ ಉತ್ತರ ಕಂಡು ಕೊಂಡಿದೆ.

ಬಾಗಲಕೋಟೆ: ವಿದೇಶ ಪ್ರವಾಸ ಮಾಡದಿದ್ದರೂ ವ್ಯಕ್ತಿ ಕೊರೋನಾ ಸೋಂಕಿಗೆ ಹೇಗೆ ಬಲಿಯಾದ ಎಂಬ ಪ್ರಶ್ನೆಗೆ ಬಾಗಲಕೋಟೆ ಜಿಲ್ಲಾಡಳಿತ ಕೊನೆಗೂ ಉತ್ತರ ಕಂಡು ಕೊಂಡಿದೆ.

ಕೊರೋನಾ ಹಾಟ್ ಸ್ಪಾಟ್ ಆಗಿದ್ದ ಕಲಬುರಗಿಗೆ ಮೃತ ವ್ಯಕ್ತಿಯ ಸಹೋದರ ಪ್ರಯಾಣಿಸಿದ್ದ,  ಹೀಗಾಗಿ ಅಲ್ಲಿಂದ ಸೋಂಕು ತಗುಲಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. 

ಸೋಮವಾರ ಜಿಲ್ಲೆಯಿಂದ ಇನ್ನೂ ಎರಡು ಪಾಸಿಟಿವ್ ಪ್ರಕರಣಗಳು ವರದಿಯಾದ ನಂತರ, ಆರೋಗ್ಯ ಅಧಿಕಾರಿಗಳು ಸೋಂಕಿನ ಮೂಲವನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ.

ಮೃತ ವ್ಯಕ್ತಿಯ ಸಹೋದರನ ಪ್ರಯಾಣದ ಇತಿಹಾಸ ಪರಿಶೀಲಿಸಿದಾಗ ಮಾರ್ಚ್ 15 ಮತ್ತು 16 ರಂದು ಕಲಬುರಗಿಯಲ್ಲಿ ಇದ್ದದ್ದು ತಿಳಿದು ಬಂದಿದೆ. ಕೊರೋನಾ ಸೋಂಕು ಇದ್ದ ಪ್ರದೇಶದಲ್ಲಿ ಆತ ತಂಗಿದ್ದ ಎಂಬ ಮಾಹಿತಿ ತಿಳಿದು ಬಂದಿದೆ.

ಪ್ರಾಥಮಿಕ ತನಿಖೆಯ ಸಮಯದಲ್ಲಿ, ಜಿಲ್ಲೆಯ ಮೂರನೇ ಪ್ರಕರಣವು ಕಲಬುರಗಿಗೆ ಪ್ರಯಾಣದ ಇತಿಹಾಸವನ್ನು ಹೊಂದಿದೆ ಎಂದು ತಿಳಿದುಬಂದಿದೆ, ಮತ್ತು ಅವರ ಹೆಂಡತಿಯ ಮನೆಯು  ಕೊರೋನಾ ಪಾಸಿಟಿವ್ ಇರುವ ಪ್ರದೇಶದಲ್ಲಿ ಇದೆ ಎಂದು ಡಿಸಿಎಂ ಗೋವಿಂದ್ ಕಾರಜೋಳ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

SCROLL FOR NEXT