ರಾಜ್ಯ

ಮಕ್ಕಳಿಗೂ ಹಬ್ಬಿದ ಮಾರಕ ಸೋಂಕು: ಬಾಗಲಕೋಟೆಯ ಮೂವರು ಅಪ್ರಾಪ್ತರಲ್ಲಿ ಕೊರೋನಾ ಪತ್ತೆ

Raghavendra Adiga

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಗುರುವಾರ ಮೂವರು ಅಪ್ರಾಪ್ತ ವಯಸ್ಕರಿಗೆ ಕೊರೋನಾವೈರಸ್ ಸೋಂಕು ತಗುಲಿದೆ. ಇವರೆಲ್ಲರೂ ಕೇವಲ ಎರಡು ದಿನಗಳ ಹಿಂದೆ ಕೊರೋನಾ ಸೋಂಕು ದೃಢಪಟ್ಟಿದ್ದ ರೋಗಿಯ ಸಂಪರ್ಕದಲ್ಲಿದ್ದರು.

ಇಂದು ಬಿಡುಗಡೆಯಾದ ರಾಜ್ಯ ಸರ್ಕಾರದ ಅಧಿಕೃತ ಬುಲೆಟಿನ್ ನಲ್ಲಿ ಒಟ್ತಾರೆ ಹತ್ತು ಹೊಸ ಕೊರೋನಾ ಪ್ರಕರಣಗಳ ವರದಿ ಮಾಡಲಾಗಿದೆ. ಇದರಲ್ಲಿ ಬಾಗಲಕೋಟೆ ಜಿಲ್ಲೆಯ  ನಾಲ್ಕು ವರ್ಷದ ಬಾಲಕ, ಒಂಬತ್ತು ವರ್ಷದ ಬಾಲಕಿ ಮತ್ತು 13 ವರ್ಷದ ಬಾಲಕರು ಸೇರಿದ್ದಾರೆ.

ಇದರಲ್ಲಿ ನಾಲ್ಕು ವರ್ಷದ ಬಾಲಕ 41 ವರ್ಷದ ಮಹಿಳೆಯ ಮಗನಾಗಿದ್ದು  ಇದೀಗ ಕೋವಿಡ್ ದೃಢಪಟ್ಟ ಬಳಿಕ ಪ್ರತ್ಯೇಕವಾಗಿ ಇರಿಸಲಾಗಿದೆ. ಉಳಿದೆರಡು ಮಕ್ಕಳೂ ಮಹಿಳೆಯ ಸೋದರ ಮಾವನ ಮಕ್ಕಳಾಗಿದ್ದಾರೆ.

ಇದಕ್ಕೂ ಮೊದಲು ಮಾರ್ಚ್ 27 ರಂದು ದಕ್ಷಿಣ ಕನ್ನಡದ 10 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢಪಟ್ಟಿತು.

ಇನ್ನು ಈ ಮೂರು ಪ್ರಕರಣ ಸೇರಿ ಜಿಲ್ಲೆಯಲ್ಲಿ ಇದುವರೆಗೆ ಎಂಟು ಕೊರೋನಾ ಕೇಸ್ ವರದಿಯಾಗಿದ್ದು ಇದರಲ್ಲಿ ಓರ್ವ ವೃದ್ದ ಸಾವನ್ನಪ್ಪಿದ್ದಾರೆ."ಜಿಲ್ಲೆಯ ಗೊತ್ತುಪಡಿಸಿದ ಆಸ್ಪತ್ರೆಯಲ್ಲಿ ಕೇಸ್ ನಂ. 165  - 41 ವರ್ಷದ ಮಹಿಳೆಗೆ ಕೊರೋನಾವೈರಸ್ ದೃಢಪಟ್ಟಾಗ ಮೂವರು ಅಪ್ರಾಪ್ತ ವಯಸ್ಕ ಮಕ್ಕಳನ್ನು ಇತರೆ 23  ಮಂದಿಯೊಂದಿಗೆ ಕ್ವಾರಂಟೈನ್ ನಲ್ಲಿರಿಸಲಾಗಿತ್ತು." ಜಿಲ್ಲಾಡಳಿತ ಹೇಳಿದೆ. ಇದೀಗ ಇನ್ನೂ 20 ಮಂದಿಯ ಫಲಿತಾಂಶಕ್ಕಾಗಿ ನಿರೀಕ್ಷಿಸಲಾಗುತ್ತಿದೆ. 

SCROLL FOR NEXT