ಸಾಂದರ್ಭಿಕ ಚಿತ್ರ 
ರಾಜ್ಯ

ಕೊವಿಡ್ -19: ರಾಜ್ಯದಲ್ಲಿ ಸಾರ್ವಜನಿಕವಾಗಿ ಮಾಸ್ಕ್ ಧರಿಸುವುದು ಕಡ್ಡಾಯ

ಸಾರ್ವಜನಿಕರು ಮನೆಯಿಂದ ಹೊರಬಂದಾಗಲೆಲ್ಲಾ ಮುಖಗವಸ(ಮಾಸ್ಕ್)ಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದು ರಾಜ್ಯ ಆರೋಗ್ಯ ಇಲಾಖೆ ಗುರುವಾರ ಸುತ್ತೋಲೆ ಹೊರಡಿಸಿದ್ದು,

ಬೆಂಗಳೂರು: ಸಾರ್ವಜನಿಕರು ಮನೆಯಿಂದ ಹೊರಬಂದಾಗಲೆಲ್ಲಾ ಮುಖಗವಸ(ಮಾಸ್ಕ್)ಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದು ರಾಜ್ಯ ಆರೋಗ್ಯ ಇಲಾಖೆ ಗುರುವಾರ ಸುತ್ತೋಲೆ ಹೊರಡಿಸಿದ್ದು, ಎಲ್ಲರೂ ಮಾಸ್ಕ್ ಗಳನ್ನು ಧರಿಸಬೇಕಾಗಿಲ್ಲ ಎಂದು ಈ ಹಿಂದೆ ಹೊರಡಿಸಲಾಗಿದ್ದ ಸುತ್ತೋಲೆಯನ್ನು ವಾಪಸ್‍ ಪಡೆಯಲಾಗಿದೆ.

ಖರೀದಿ ಸಮಯದಲ್ಲಿ, ಕಚೇರಿ ಕೆಲಸಕ್ಕೆ ಹಾಜರಾದಾಗ ಮತ್ತು ಆಕಸ್ಮಿಕವಾಗಿ ಕೊವಿಡ್ -19 ಸೋಂಕಿತ ವ್ಯಕ್ತಿಯ ಪ್ರಥಮ ಇಲ್ಲವೇ ದ್ವಿಸಂಪರ್ಕಗಳೊಂದಿಗೆ ಸಂವಹನ ನಡೆಸಿದಾಗಲೆಲ್ಲಾ ಸಾರ್ವಜನಿಕರು ಮುಖಗವಸ ಧರಿಸಬೇಕೆಂದು ಸುತ್ತೋಲೆ ಹೇಳಿದೆ. 

ಮಾಸ್ಕ್ ಗಳು ಒಂಬತ್ತು ಇಂಚು ಅಗಲ, ಏಳು ಇಂಚು ಉದ್ದವಿರಬೇಕು. ಮಕ್ಕಳಿಗೆ ಐದು ಇಂಚು ಗಾತ್ರವನ್ನು ಶಿಫಾರಸು ಮಾಡಲಾಗಿದೆ.

ಕೈಯಿಂದ ಇಲ್ಲವೇ ಯಂತ್ರದಿಂದ ಹೊಲಿದಿರುವ ಮುಖಗವಸಗಳನ್ನು ಮರು ಬಳಸಬಹುದಾಗಿದೆ. ಆದರೂ, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ಸಾರ್ವಜನಿಕರು ತಮ್ಮನ್ನು ರಕ್ಷಿಸಿಕೊಳ್ಳಲು ವೈದ್ಯಕೀಯವಾಗಿ ಪ್ರಮಾಣೀಕರಿಸಿದ ಮುಖಗವಸಗಳನ್ನು ಮಾತ್ರ ಬಳಸಬೇಕಾಗುತ್ತದೆ ಎಂದು ಸುತ್ತೋಲೆ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: 48 ಗಂಟೆಗಳಲ್ಲಿ ಹೋರ್ಮುಜ್ ಜಲಸಂಧಿ ತೆರೆಯದಿದ್ದರೆ ಇರಾನ್‌ನಲ್ಲಿ ನರಕ ಸೃಷ್ಟಿಸುತ್ತೇವೆ; Trump ಕೊನೇಯ ಎಚ್ಚರಿಕೆ!

'ನೀವೇನು ಸುರಕ್ಷಿತ ಅಲ್ಲ': ಟ್ರಂಪ್ 48 ಗಂಟೆಗಳ ಕೊನೆ ಎಚ್ಚರಿಕೆ ಬೆನ್ನಲ್ಲೆ CIA Station ಗೆ ಡ್ರೋನ್ ನುಗ್ಗಿಸಿ ಇರಾನ್; 1 ನಿಮಿಷದ ಅಂತರದಲ್ಲಿ 2 ಸ್ಫೋಟ!

ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಕಾಂಗ್ರೆಸ್‌ 'ಪ್ರಚೋದನಕಾರಿ' ಹೇಳಿಕೆ; ಭಾರತೀಯರ ಸುರಕ್ಷತೆಗೆ ಅಪಾಯ: ಪ್ರಧಾನಿ ಮೋದಿ

Sex Video ಪ್ರಕರಣ: ಡಿಸಿಎಂಗೆ 17 ಬಾರಿ ಕರೆ ಮಾಡಿದ ಸ್ವಯಂ ಘೋಷಿತ 'ದೇವಮಾನವ'; CDR ಬಿಡುಗಡೆ

ಭಾರತದ ರಾಜತಂತ್ರಕ್ಕೆ ಜಗತ್ತೇ ನಿಬ್ಬೆರಗು: ಸಂಘರ್ಷದ ನಡುವೆ ಯಾರಿಗೂ ಸಿಗದ ಸೌಲಭ್ಯ!; Hormuz ದಾಟಿದ 8ನೇ ಹಡಗು; ಇರಾನ್ ನಿಂದ ವಿಶೇಷ ಸಂದೇಶ!

SCROLL FOR NEXT