ಸಂಗ್ರಹ ಚಿತ್ರ 
ರಾಜ್ಯ

ಮೈಸೂರಿನ ಐವರಿಗೆ ಸೇರಿ 10 ಮಂದಿಗೆ ಕೊರೋನಾ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 207ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯ ಏರಿಕೆ ನಿಲ್ಲುವ ಲಕ್ಷಣಗಳು ಕಂಡುಬರುತ್ತಿಲ್ಲ. ಗುರುವಾರ ರಾತ್ರಿಯಿಂದ ಶುಕ್ರವಾರ ಮಧ್ಯಾಹ್ನದವರೆಗೆ ಮೈಸೂರು ಒಂದರಲ್ಲೇ 5 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯ ಏರಿಕೆ ನಿಲ್ಲುವ ಲಕ್ಷಣಗಳು ಕಂಡುಬರುತ್ತಿಲ್ಲ. ಗುರುವಾರ ರಾತ್ರಿಯಿಂದ ಶುಕ್ರವಾರ ಮಧ್ಯಾಹ್ನದವರೆಗೆ ಮೈಸೂರು ಒಂದರಲ್ಲೇ 5 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಇದೂ ಸೇರಿ, ರಾಜ್ಯಾದ್ಯಂತ ಒಂದೇ ದಿನದಲ್ಲಿ 10 ಹೊಸ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 207ಕ್ಕೇರಿಕೆಯಾಗಿದೆ.

ಮೈಸೂರಿನಲ್ಲಿ ಸೋಂಕಿತನ ಪ್ರಕರಣಗಳ ಸಂಖ್ಯೆ 42ಕ್ಕೇರಿಕೆಯಾಗಿದೆ. ಇದರಲ್ಲಿ 31 ಜನರು ಜ್ಯುಬಿಲಿಯೆಂಟ್ ಕಂಪನಿಯ ಸಿಬ್ಬಂದಿಯಾಗಿದ್ದು, 8 ಮಂದಿ ದೆಹಲಿ ನಿಜಾಮುದ್ದೀನ್ ಧರ್ಮ ಪ್ರಾರ್ಥನೆಯಲ್ಲಿ ಪಾಲ್ಗೊಂಡವರಾಗಿದ್ದಾರೆ. 

ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 48 ಹಾಗೂ 57 ವರ್ಷದ ವ್ಯಕ್ತಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಜೊತೆಗೆ, ಕಲಬುರಗಿಯ 55 ವರ್ಷದ ವ್ಯಕ್ತಿ, ಬೆಂಗಳೂರಿನ ಗ್ರಾಮಾಂತರದಲ್ಲಿ 35 ವರ್ಷದ ವ್ಯಕ್ತಿ ಹಾಗೂ 11 ವರ್ಷದ ಬಾಲಕಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ಇಂದು ಹೊಸದಾಗಿ ದೃಢಪಟ್ಟ ಹತ್ತು ಪ್ರಕರಣಗಳ ಸಂಪೂರ್ಣ ವಿವರ ಈ ರೀತಿ ಇದೆ- 

1. ರೋಗಿ ನಂಬರ್ 198: 48 ವರ್ಷದ ಪುರುಷನಾಗಿದ್ದು, ರೋಗಿ ನಂಬರ್ 167 ಮತ್ತು 168ರ ಜೊತೆ ಸಂಪರ್ಕದಲ್ಲಿದ್ದರು. ಬೆಂಗಳೂರಿನ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.

2.  ರೋಗಿ ನಂಬರ್ 199: 57 ವರ್ಷದ ಪುರುಷನಾಗಿದ್ದು, ರೋಗಿ ನಂಬರ್ 167 ಮತ್ತು 168ರ ಜೊತೆ  ಸಂಪರ್ಕದಲ್ಲಿದ್ದರು. ಬೆಂಗಳೂರಿನ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ  ನೀಡಲಾಗುತ್ತಿದೆ.

3. ರೋಗಿ  ನಂಬರ್ 200: 8 ವರ್ಷದ ಬಾಲಕನಾಗಿದ್ದು, ರೋಗಿ ನಂಬರ್ 159 ಮತ್ತು 103(ತಂದೆ)  ಸಂಪರ್ಕದಲ್ಲಿದ್ದನು. ಮೈಸೂರಿನ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ  ನೀಡಲಾಗುತ್ತಿದೆ.

4. ರೋಗಿ  ನಂಬರ್ 201: 48 ವರ್ಷದ ಮಹಿಳೆಯಾಗಿದ್ದು, ರೋಗಿ ನಂಬರ್ 103(ಅತ್ತೆ) ಜೊತೆ  ಸಂಪರ್ಕದಲ್ಲಿದ್ದರು. ಮೈಸೂರಿನ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ  ನೀಡಲಾಗುತ್ತಿದೆ.

5. ರೋಗಿ  ನಂಬರ್ 202: 33 ವರ್ಷದ ಪುರುಷನಾಗಿದ್ದು, ರೋಗಿ ನಂಬರ್ 111ರ ಜೊತೆ  ಸಂಪರ್ಕದಲ್ಲಿದ್ದರು. ಮೈಸೂರಿನ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ  ನೀಡಲಾಗುತ್ತಿದೆ.

6. ರೋಗಿ  ನಂಬರ್ 203:  28 ವರ್ಷದ ಮಹಿಳೆಯಾಗಿದ್ದು, ಮೈಸೂರು ನಿವಾಸಿಯಾಗಿದ್ದಾರೆ. ಇವರು ರೋಗಿ  ನಂಬರ್ 85ರ ಪತ್ನಿ. ಸದ್ಯಕ್ಕೆ ಮೈಸೂರಿನ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ  ನೀಡಲಾಗುತ್ತಿದೆ.

7. ರೋಗಿ  ನಂಬರ್ 204: 48 ವರ್ಷದ ಮಹಿಳೆ, ಮೈಸೂರು ನಿವಾಸಿ, ರೋಗಿ ನಂಬರ್ 183 ರ ಪತ್ನಿ.  ಮೈಸೂರಿನ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.

8.  ರೋಗಿ ನಂಬರ್ 205: 55 ವರ್ಷದ ವ್ಯಕ್ತಿಯಾಗಿದ್ದು, ಕಲಬುರಗಿ ನಿವಾಸಿ, ದೆಹಲಿಯಿಂದ  ಬಂದಿದ್ದ ನೆಗೆಟಿವ್ ವರದಿ ಬಂದಿದ್ದ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದರು. ಕಲಬುರಗಿಯ  ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

9.  ರೋಗಿ ನಂಬರ್ 206 : 35 ವರ್ಷದ ವ್ಯಕ್ತಿಯಾಗಿದ್ದು, ಬೆಂಗಳೂರು ನಿವಾಸಿ, ರೋಗಿ ನಂಬರ್  169ರ ಸಹೋದರನಾಗಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

10.  ರೋಗಿ ನಂಬರ್ 207: 11 ವರ್ಷದ ಬಾಲಕಿಯಾಗಿದ್ದು, ಬೆಂಗಳೂರು ನಿವಾಸಿ, ರೋಗಿ ನಂಬರ್  206ರ ಮಗಳಾಗಿದ್ದಾಳೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT