ಸಂಗ್ರಹ ಚಿತ್ರ 
ರಾಜ್ಯ

ಮಕ್ಕಳಿಕೆ ಹೆಚ್'ಸಿಕ್ಯೂ ಔಷಧಿ ಬಳಕೆ ಸುರಕ್ಷಿತವಲ್ಲ: ವೈದ್ಯರು

ಕೊರೋನಾ ವೈರಸ್ ಸೋಂಕಿನಿಂದ ಬಳಲುತ್ತಿರುವ ಮಕ್ಕಳಿಗೆ ಹೈಡ್ರೋಕ್ಲೋರೋಕ್ವಿನ್ ಔಷಧಿ ಬಳಕೆ ಮಾಡುವುದು ಸುರಕ್ಷಿತವಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ. 

ಬೆಂಗಳೂರು: ಕೊರೋನಾ ವೈರಸ್ ಸೋಂಕಿನಿಂದ ಬಳಲುತ್ತಿರುವ ಮಕ್ಕಳಿಗೆ ಹೈಡ್ರೋಕ್ಲೋರೋಕ್ವಿನ್ ಔಷಧಿ ಬಳಕೆ ಮಾಡುವುದು ಸುರಕ್ಷಿತವಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ. 

ತಾಯಿ ಮೂಲಕ 8 ವರ್ಷದ ಮಗುವೊಂದು ಸೋಂಕಿಗೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗುವಿನಲ್ಲಿ ಈ ವರೆಗೂ ರೋಗದ ಲಕ್ಷಣಗಳು ಕಂಡು ಬಂದಿಲ್ಲ. ಮಗುವಿಗೆ ಯಾವದೇ ರೀತಿಯ ಔಷಧಿಗಳನ್ನೂ ನೀಡುತ್ತಿಲ್ಲ. ಆದರೆ, 15 ವರ್ಷದ ಕೆಳಗಿನ ಮಕ್ಕಳಿಗೆ ಹೆಚ್'ಸಿಕ್ಯೂ ನೀಡಬಾರದು. ಈ ಔಷಧಿ ವಿಷತ್ವವನ್ನು ಹೊಂದಿದ್ದು, ಅವುಗಳು ಮಕ್ಕಳ ಮೇಲೆ ಪ್ರತಿಕೂಲವಾಗಿ ಪರಿಣಾಮ ಬೀರುತ್ತವೆ. ರೋಗ ಲಕ್ಷಣಗಳು ಕಂಡು ಬಂದ ಮಕ್ಕಳಿಗೆ ಮಾತ್ರ ಔಷಧಿ ಬಳಕೆ ಮಾಡಬಹುದು ಎಂದು ಕೆಸಿ ಜನರಲ್ ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದ್ದಾರೆ. 

ವೈದ್ಯಕೀಯ ವಲಯದಲ್ಲಿ ಹೆಚ್'ಸಿಕ್ಯೂ ಬಳಕೆ ಇನ್ನು ಹಲವು ವಿರೋಧದ ಅಭಿಪ್ರಾಯಗಳೊಂದಿಗೆ ವಿವಾದಾಸ್ಪದವಾಗಿಯೇ ಉಳಿದಿದೆ. 

ಕ್ಲೌಡ್ನೈನ್ ಆಸ್ಪತ್ರೆಯ ಸಂಸ್ಥಾಪಕ ಮುಖ್ಯಸ್ಥ ಡಾ.ಕಿಶೋರ್ ಕುಮಾರ್ ಮಾತನಾಡಿ, 15 ವರ್ಷ ಕೆಳಗಿನ ಮಕ್ಕಳಿಗೆ ಹೆಚ್'ಸಿಕ್ಯೂ ಔಷಧಿಯನ್ನು ಶಿಫಾರಸು ಮಾಡುವುದಿಲ್ಲ. ಮಕ್ಕಳಿಗೆ ಯಾವ ಮಟ್ಟದಲ್ಲಿ ಔಷಧಿ ಬಳಕೆ ಮಾಡಬೇಕೆಂಬ ಮಾಹಿತಿಗಳೂ ಗೊತ್ತಿಲ್ಲ. ಔಷಧಿ ಬಳಕೆ ಪ್ರಮಾಮ ಗೊತ್ತಿಲ್ಲದೆ ಬಳಕೆ ಮಾಡಿದ್ದೇ ಆದರೆ, ಮನುಷ್ಯರಲ್ಲಿ ಹೃದಯ ಸ್ತಂಭನ ಎದುರಾಗಬಹುದು ಎಂದು ಹೇಳಿದ್ದಾರೆ. 

ಡಾ.ಸಿಎನ್ ಮಂಜುನಾಥ್ ಮಾತನಾಡಿ, ನ್ಯೂಮೋನಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ಸ್ಟೀರಾಯ್ಡ್ಗಳು ಮತ್ತು ಅಜಿಥ್ರೊಮೈಸಿನ್ ಸೇರಿದಂತೆ ಇತರೆ ಆ್ಯಂಟಿ ವೈರಸ್ ಔಷದಿಗಳನ್ನು ನೀಡಲಾಗುತ್ತಿದೆ. ಇದೀಗ ನ್ಯೂಮೋನಿಯಾ ಅಥವಾ ಶ್ವಾಸಕೋಶದ ಸೋಂಕನ್ನು ಹೊಂದಿರುವ ಆರೋಗ್ಯದ ಸ್ಥಿತಿಯನ್ನು ಅವಲಂಬಿಸಿ ರೋಗ ನಿರೋಧಕ ಮತ್ತು ಸಕ್ರಿಯ ಚಿಕಿತ್ಸೆಗಾಗಿ ವಯಸ್ಕರಿಗೆ ಹೆಚ್'ಸಿಕ್ಯೂ ನೀಡಲಾಗುತ್ತಿದೆ. ಅಜಿಥ್ರೊಮೈಸಿನ್ ಮತ್ತು ಹೆಚ್'ಸಿಕ್ಯೂ ನ್ನು ಸಕ್ರಿಯ ಚಿಕಿತ್ಸೆಗಾಗಿ ಒಟ್ಟಿಗೆ ನೀಡಲಾಗುತ್ತದೆ. ಆದರೆ, ರೋಗ ನಿರೋಧಕಕ್ಕೆ ಹೆಚ್'ಸಿಕ್ಯೂ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. 

ಗಂಭೀರ ಪ್ರಕರಣಗಳಲ್ಲಿ ಬಳಕೆ ಮಾಡಬಹುದು: ತಜ್ಞರ ಅಭಿಪ್ರಾಯ
ಔಷಧಿ ಬಳಕೆಯಿಂದ ಲಾಭ ಹಾಗೂ ಸಮಸ್ಯೆಗಳೆರಡೂ ಇವೆ. ಮಧ್ಯಂತರ ಹಾಗೂ ಗಂಭೀರ ಸೋಂಕು ಪ್ರಕರಣಗಳಲ್ಲಿ ಔಷಧಿ ಬಳಕೆ ಮಾಡಬಹುದಾಗಿದೆ. ಪ್ರಕರಣಗಳಿಗೆ ಸಂಬಂಧಿಸಿ ವೈದ್ಯರು ಔಷಧಿಗಳ ಬಳಕೆ ಕುರಿತು ನಿರ್ಧಾರ ಕೈಗೊಳ್ಳುತ್ತಾರೆ. ಪಿತ್ತಜನಕಾಂಗದ ಕಾಯಿಲೆ, ಹೃದ್ರೋಗಗಳು ಮತ್ತು ದೀರ್ಘಕಾಲದ ರೋಗಗಳಿಂದ ಬಳಲುತ್ತಿರುವ ಮಕ್ಕಳಿಗೆ ಈ ಔಷಧಿಯನ್ನು ಬಳಕೆ ಮಾಡಲಾಗುವುದಿಲ್ಲ. ಐದು ದಿನಗಳ ಕಾಲಾವಧಿಗೆ ಇದನ್ನು ಬಳಕೆ ಮಾಡುತ್ತಾರೆಂದು ತಜ್ಞರು ಹೇಳಿದ್ದಾರೆ. 

ರೇಂಬೋ ಚಿಲ್ಡ್ರನ್ ಆಸ್ಪತ್ರೆಯ ಮುಖ್ಯಸ್ಥ ಡಾ.ರಕ್ಷಯ್ ಶೆಟ್ಟಿ ಮಾತನಾಡಿ, ನ್ಯೂಮೋನಿಯಾ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಂದರ್ಭದಲ್ಲಿ ಹೆಚ್'ಸಿಕ್ಯೂ ಬಳಕೆ ಮಾಡಲಾಗುತ್ತದೆ. ಇಡೀ ವಿಶ್ವದಲ್ಲಿಯೇ ಮಕ್ಕಳಲ್ಲಿ ವೈರಸ್ ಗಂಭೀರವಾಗಿ ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

SCROLL FOR NEXT