ರಾಜ್ಯ

ಪಾಂಡವಪುರ: ಲಾಕ್ ಡೌನ್ ಎಫೆಕ್ಟ್-ತರಕಾರಿ ಮಾರಲಾಗದೆ ರೈತ ಆತ್ಮಹತ್ಯೆ

ಲಾಕ್ ಡೌನ್ ಪರಿಣಾಮದಿಂದ ತಾನು ಬೆಳೆದ ತರಕಾರಿಯನ್ನು ಮಾರಲು ಸಾಧ್ಯವಾಗದೆ ,ಸಾಲದ ಬಾಧೆಯಿಂದ ರೈತನೋರ್ವ ಆತ್ಮಹತ್ಯೆಮಾಡಿಕೊಂಡಿರವ ಘಟನೆ ಪಾಂಡವಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಂಡ್ಯ: ಲಾಕ್ ಡೌನ್ ಪರಿಣಾಮದಿಂದ ತಾನು ಬೆಳೆದ ತರಕಾರಿಯನ್ನು ಮಾರಲು ಸಾಧ್ಯವಾಗದೆ ,ಸಾಲದ ಬಾಧೆಯಿಂದ ರೈತನೋರ್ವ ಆತ್ಮಹತ್ಯೆಮಾಡಿಕೊಂಡಿರವ ಘಟನೆ ಪಾಂಡವಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರಾಮೇಗೌಡ (೬೫) ಎಂಬ ರೈತನೇ ಆತ್ಮಹತ್ಯೆಗೆ ಶರಣಾಗಿದ್ದು. ಈತ ಸುಮಾರು ಎರಡು ಎಕರೆ ಜಮೀನಿನಲ್ಲಿ ಟೊಮ್ಯಾಟೊ ಹಾಗೂ ಬೀನ್ಸ್ ಬೆಳೆದಿದ್ದ. ಎರಡೂ ಬೆಳೆಗಳ ಉತ್ತಮ ಫಸಲು ಬಂದಿತ್ತು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಫಸಲನ್ನು ಮಾರಲಾಗದೇ ತಾನೇ ಇಡೀ ಫಸಲನ್ನು ನಾಶ ಮಾಡಿದ್ದ.
ರಾಮೇಗೌಡ ಈ ಫಸಲು ಬೆಳೆಯಲು ಸುಮಾರು ಐದು ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದು ಇದಕ್ಕಾಗಿ ಆತ ಲಕ್ಷಾಂತರ ರೂ ಸಾಲ ಮಾಡಿಕೊಂಡಿದ್ದ ಎಂದು ಕುಟುಂಬದ ಮೂಲಗಳು ತಿಳಿಸಿವೆ.

 ಬೆಳೆ ನಾಶದ ಜೊತೆಗೆ ಬೆಳೆ ಸಾಲ ತೀರಿಸಲು ಸಾಧ್ಯವಾಗಿದೆ ಮಾನಸಿಕವಾಗಿ ಜರ್ಜರಿತನಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. 

ಈ ಕುರಿತು ಮೇಲುಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತ ರೈತನ ಕುಟುಂಬಸ್ಥರು ಸೂಕ್ತ ಪರಿಹಾರಕ್ಕೆ ಒತ್ತಾಯ ಮಾಡಿದ್ದಾರೆ.

-ನಾಗಯ್ಯ 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT