ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಗುರುವಾರ ಒಂದೇ ದಿನ 17 ಕೊರೋನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿದ್ದು, ಈ ಮೂಲಕ ರೆಡ್ ಜೋನ್‌ನಲ್ಲಿರುವ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 36ಕ್ಕೆ ಏರಿದೆ. ಒಂದೇ ಹಾಲ್ ನಲ್ಲಿ ಎಲ್ಲರನ್ನು ಕ್ವಾರಂಟೈನ್ ಮಾಡಿದ್ದು ಸೋಂಕಿನ ಪ್ರಮಾಣ ಹೆಚ್ಚಾಗಲು ಕಾರಣವಾಯ್ತ ಎಂಬ ಶಂಕೆ ಮೂಡುತ್ತಿದೆ.
ನಿಜಾಮುದ್ದೀನ್ ಮರ್ಕಾಜ್‌ಗೆ ಪ್ರಯಾಣದ ಇತಿಹಾಸವನ್ನು ಹೊಂದಿದ್ದ ಅನೇಕ ಶಂಕಿತರ ಕುಟುಂಬ ಸದಸ್ಯರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಜನರನ್ನು ಬೆಳಗಾವಿಯ ವಿವಿಧ ಸ್ಥಳಗಳಲ್ಲಿ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.
ಕಳೆದ 14 ದಿನಗಳಲ್ಲಿ 356 ಮಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ, ಕೊರೋನಾ ಪಾಸಿಟಿವ್ ಆಗಿರುವ 36 ಮಂದಿಯನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದು ಅದಿಕಾರಿಗಳು ಮಾಹಿತಿ ನೀಡಿದ್ದಾರೆ.
20 ಮಂದಿಯನ್ನು ಒಂದೇ ಹಾಲ್ ನಲ್ಲಿ ಕ್ವಾರಂಟೈನ್ ನಲ್ಲಿರಿಸಲಾಗದೆ, ಯಾವುದೇ ಗಂಭೀರ ತೆರೆನಾದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೇ ಒಟ್ಟಿಗೆ ಇರಿಸಿದ್ದು ಸೋಂಕಿತರ ಪ್ರಮಾಣ ಹೆಚ್ಚಾಲು ಕಾರಣ ಎಂದು ಹೇಳಲಾಗುತ್ತಿದೆ
ಕೇಂದ್ರ ಸಚಿವ ಸುರೇಶ್ ಅಂಗಡಿ ಮತ್ತು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೊರೋನಾ ಸಂಬಂಧ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿದ್ದಾರೆ.
ಸೂಕ್ಷ್ಮ ವಲಯಗಳ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಮುಂಜಾಗ್ರತಾ ಕ್ರಮ, ಕ್ವಾರಂಟೈನ್ ಸೌಲಭ್ಯಗಳ ಬಗ್ಗೆ ಗಮನ ಕೊಡದ ಜಿಲ್ಲಾಡಳಿತ ಹೆಚ್ಚಿನ ಸಮಯವನ್ನು ಸಭೆ ಮಾಡುವ ಮೂಲಕ ವ್ಯರ್ಥ ಮಾಡಿದೆ.
ಬೆಳಗಾವಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗೆ ತಮ್ಮನ್ನು ತಾವು ಕೊರೋನಾದಿಂದ ರಕ್ಷಿಸಿಕೊಳ್ಳಲು ಅಗತ್ಯ ಸೌಲಭ್ಯಗಳಿಲ್ಲ, ಇಂಥಹ ಪರಿಸ್ಥಿತಿ ಎದುರಿಸಲು ಪಿಪಿಇ ಕಿಟ್ ಗಳ ಅಗತ್ಯವಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.